ಬೆಳವಣಿಕಿ: ತಾಲ್ಲೂಕಿನ ಹೊಳೆಆಲೂರಿನ ಕಲ್ಮೇಶ್ವರ ಪದವಿಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ನಡೆದ ರೋಣ ತಾಲ್ಲೂಕುಮಟ್ಟದ ಕ್ರೀಡಾಕೂಟದಲ್ಲಿ ಬೆಳವಣಿಕಿ ಗ್ರಾಮದ ಎಸ್.ವಿ. ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಬಾಲಕ ಹಾಗೂ ಬಾಲಕಿಯರ ತಂಡಗಳು ಕೊಕ್ಕೊ ಹಾಗೂ ಹ್ಯಾಂಡ್‌ಬಾಲ್ ಪಂದ್ಯಾವಳಿಗಳಲ್ಲಿ ಪ್ರಥಮ ಸ್ಥಾನ ಪಡೆದು, ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿವೆ.
ಅಥ್ಲೆಟಿಕ್ಸ್ ವಿಭಾಗ:
ಪ್ರಮೋದ ಮಲ್ಲಾಪೂರ 400 ಮೀಟರ್ ಓಟದಲ್ಲಿ ದ್ವಿತೀಯ, 200 ಮೀಟರ್‌ನಲ್ಲಿ ತೃತಿಯ ಸ್ಥಾನ ಪಡೆದಿದ್ದಾನೆ. ಪ್ರೀತಂ ತೋಟದ 5 ಕಿ.ಮೀ. ನಡಿಗೆಯಲ್ಲಿ ಪ್ರಥಮ ಸ್ಥಾನ, ವಿಠ್ಠಲ ವಿಟ್ಟನ್ನವರ 5 ಕಿ.ಮೀ. ನಡಿಗೆಯಲ್ಲಿ ದ್ವಿತೀಯ ಸ್ಥಾನ, ಶಿವಾನಂದ ಮಡಿವಾಳರ ಗುಡ್ಡಗಾಡು ಓಟದಲ್ಲಿ ಪ್ರಥಮ ಸ್ಥಾನ, ಹಣಮಂತ ಮುತ್ತಾರಿ ಗುಡ್ಡಗಾಡು ಓಟದಲ್ಲಿ ದ್ವಿತೀಯ, ಶಿವಾನಂದ ತಿಮ್ಮಣ್ಣವರ ಗುಡ್ಡಗಾಡು ಓಟದಲ್ಲಿ ತೃತೀಯ ಸ್ಥಾನ ಪಡೆದಿದ್ದಾನೆ.
ಬಾಲಕಿಯರ ವಿಭಾಗ:
ವಾಣಿ ಮಠಪತಿ 100 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ, ಉದ್ದ ಜಿಗಿತ ದ್ವಿತೀಯ, ಎತ್ತರ ಜಿಗಿತ ದ್ವಿತೀಯ, ರಿಕ್ಷಾನಭಿ ಮುಸ್ತಾಫನವರ 100 ಮೀಟರ್ ಓಟದಲ್ಲಿ ತೃತೀಯ, ಪ್ರಭಾವತಿ ಹಟ್ಟಿ 200 ಮೀಟರ್ ಓಟದಲ್ಲಿ ತೃತೀಯ, ಸ್ಫೂರ್ತಿ ಕುರಿ 400 ಮೀಟರ್ ಓಟದಲ್ಲಿ ಪ್ರಥಮ, 1,500 ಮೀಟರ್ ಓಟದಲ್ಲಿ ಪ್ರಥಮ, ಗೀತಾ ಚಕ್ರದ 800 ಮೀಟರ್ ಓಟದಲ್ಲಿ ಪ್ರಥಮ, 3,000 ಮೀಟರ್ ಪ್ರಥಮ, ಶಾಂತಾ ಕುರಿ 3,000 ಮೀಟರ್ ಓಟದಲ್ಲಿ ತೃತೀಯ, ಭಾಗ್ಯಶ್ರೀ ಚಕ್ರದ ಭಲ್ಲೆ ಎಸೆತ ಪ್ರಥಮ, ಗುಡ್ಡಗಾಡು ಓಟ ಪ್ರಥಮ, 400X100 ರಿಲೇ ಪ್ರಥಮ, 400X400 ರಿಲೇ ಪ್ರಥಮ ಸ್ಥಾನ ಪಡೆದಿದ್ದಾಳೆ.
ರೋಣ ತಾಲ್ಲೂಕುಮಟ್ಟದ ಕ್ರೀಡಾಕೂಟದಲ್ಲಿ ಜಯಸಾಧಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುವ ಕ್ರೀಡಾಪಟುಗಳಿಗೆ ಎಸ್.ವಿ.ಸಂಯುಕ್ತ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಎ.ಸಿ.ಹಕ್ಕಾಪಕ್ಕಿ, ಕಾರ್ಯದರ್ಶಿ ಆರ್.ಸಿ.ಶಿರೋಳ, ಪ್ರಾಚಾರ್ಯ ಎಸ್.ಎಸ್. ನರಗುಂದ, ದೈಹಿಕ ಶಿಕ್ಷಣ ಉಪನ್ಯಾಸಕ ಬಿ.ಆರ್.ಧರ್ಮಟ್ಟಿ ಹಾಗೂ ಕಾಲೇಜು ಸಿಬ್ಬಂದಿವರ್ಗ, ಬೆಳವಣಿಕಿ ಗ್ರಾಮಸ್ಥರು ಹಾಗೂ ಯುವಕ ಮಿತ್ರರು ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.