ನರಗುಂದ: ರಾಜ್ಯ ಹಿರಿಯ ನಾಗರಿಕರ ಹಾಗೂ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘ ತಾಲ್ಲೂಕು ಘಟಕ ಸದಸ್ಯರು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿದರು.
ಪಟ್ಟಣದ ಶಿವಾಜಿ ವೃತ್ತದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಮಿನಿ ವಿಧಾನ ಸೌಧಕ್ಕೆ ತಲುಪಿತು. ಗ್ರೇಡ್ 2 ತಹಶೀಲ್ದಾರ್ ಪಿ.ಸಿ. ಕಲಾಲರಿಗೆ ಮನವಿ ಸಲ್ಲಿಸಿದರು.
ಸಂಘದ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಬಿ.ಎಂ.ಅಳಗವಾಡಿ ಮಾತನಾಡಿ, ಹಿರಿಯ ನಾಗರಿಕರ ಬೇಡಿಕೆಗಳಾದ ಮಾಸಿಕ ₹10 ಸಾವಿರ ವೃದ್ಧಾಪ್ಯವೇತನ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಹಿರಿಯ ನಾಗರಿಕರಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪನೆ, ರಾಜ್ಯ ಎಲ್ಲ ಪೊಲೀಸ್ ಠಾಣೆಯಲ್ಲಿ ಸಮಿತಿ ರಚನೆ, ಸರ್ಕಾರಿ ಆಸ್ಪತ್ರೆ ಹಾಗೂ ಬ್ಯಾಂಕ್‌ಗಳಲ್ಲಿ ಪ್ರತ್ಯೇಕ ವಿಭಾಗ ರಚನೆ ಒಳಗೊಂಡಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ತಾಲ್ಲೂಕು ಅಧ್ಯಕ್ಷ ಬಿ.ಎಂ.ಬೆಳಹಾರ, ಉಪಾಧ್ಯಕ್ಷ ಬಿ.ಆರ್. ಬ್ಯಾಹಟ್ಟಿ, ಗೌರವಾಧ್ಯಕ್ಷ ಎಸ್.ಆರ್. ಹಿರೇಮಠ, ಸದಸ್ಯ ಟಿ.ಆರ್.ಉಳ್ಳಾಗಡ್ಡಿ, ಯಲಿಗಾರ, ಎಚ್.ಎಸ್.ಆದೇಪ್ಪನವರ, ಎಸ್.ಬಿ. ಗೌಡಪ್ಪಗೌಡ, ಬಿ.ಎಸ್. ದೇಶಪಾಂಡೆ, ಎಚ್.ಎ. ಕಣವಿ, ವಿ.ವಿ. ಬಡಿಗೇರ, ಎಂ.ಎಂ. ಕಲ್ಲನಗೌಡ್ರ, ಕೆ.ಎಸ್. ದೊಡಮನಿ, ಎಸ್.ವೈ. ಹುಂಬಿ, ತಳವಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.