ADVERTISEMENT

‘ಸೇವಾಲಾಲರ ತತ್ವ, ಆದರ್ಶ ಅನುಕರಣೀಯ’

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2025, 16:14 IST
Last Updated 15 ಫೆಬ್ರುವರಿ 2025, 16:14 IST
ಗಜೇಂದ್ರಗಡದ ಬಿಜೆಪಿ ಕಾರ್ಯಾಲಯದಲ್ಲಿ ಸಂತ ಸೇವಾಲಾಲ್ ಮಹಾರಾಜರ ಜಯಂತಿ ಆಚರಿಸಲಾಯಿತು
ಗಜೇಂದ್ರಗಡದ ಬಿಜೆಪಿ ಕಾರ್ಯಾಲಯದಲ್ಲಿ ಸಂತ ಸೇವಾಲಾಲ್ ಮಹಾರಾಜರ ಜಯಂತಿ ಆಚರಿಸಲಾಯಿತು   

ಗಜೇಂದ್ರಗಡ: ‘ಸಂತ ಸೇವಾಲಾಲರ ಆಚಾರ- ವಿಚಾರಗಳು ಕೇವಲ ಬಂಜಾರ ಸಮುದಾಯಕ್ಕೆ ಸೀಮಿತ ಆಗಿರದೆ, ಮನುಕುಲದ ಉದ್ಧಾರದ ಸದಾಶಯಗಳನ್ನು ಒಳಗೊಂಡಿವೆ’ ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಹೇಳಿದರು.

ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ನಡೆದ ಸಂತ ಸೇವಾಲಾಲ್ ಮಹಾರಾಜರ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

‘ಹಲವು ಸಂತರು, ಧರ್ಮ ಸುಧಾರಕರು, ತತ್ವಜ್ಞಾನಿಗಳು ಜನರಲ್ಲಿನ ಮತಾಂಧತೆ ಹೋಗಲಾಡಿಸಿದ್ದಾರೆ. ಇವರಲ್ಲಿ ಸೇವಾಲಾಲರೂ ಒಬ್ಬರು. ಅವರ ತತ್ವ, ಆದರ್ಶಗಳು ಎಲ್ಲರಿಗೂ ಅನುಕರಣೀಯ’ ಎಂದರು.

ADVERTISEMENT

ಬಿಜೆಪಿ ರೋಣ ಮಂಡಲದ ಅಧ್ಯಕ್ಷ ಉಮೇಶ ಮಲ್ಲಾಪುರ, ನಗರ ಘಟಕದ ಅಧ್ಯಕ್ಷ ರಾಜೇಂದ್ರ ಘೋರ್ಪಡೆ, ಪುರಸಭೆ ಸದಸ್ಯರಾದ ಕನಕಪ್ಪ ಅರಳಿಗಿಡದ, ಮೂಖಪ್ಪ ನಿಡಗುಂದಿ, ರೂಪಲೇಶ ರಾಠೋಡ, ವೀರಪ್ಪ ಪಟ್ಟಣಶೆಟ್ಟಿ, ಯಮನಪ್ಪ ತಿರಕೋಜಿ, ಮುಖಂಡರಾದ ಭಾಸ್ಕರಸಾ ರಾಯಬಾಗಿ, ಮುತ್ತಣ್ಣ ಕಡಗದ, ಉಮೇಶ ಚನ್ನುಪಾಟೀಲ, ಮಹಾಂತೇಶ ಪೂಜಾರ, ಕುಮಾರ ರಾಠೋಡ, ಬಾಲಾಜಿ ಭೋಸ್ಲೆ, ಮಲ್ಲು ಕುರಿ, ರಂಗನಾಥ ಮೇಟಿ, ಮುತ್ತಣ್ಣ ಕಾಜಗಾರ ಇದ್ದರು.

ಪುರಸಭೆ: ಪಟ್ಟಣದ ಪುರಸಭೆಯಲ್ಲಿ ಶನಿವಾರ ಸಂತ ಸೇವಾಲಾಲ್ ಮಹಾರಾಜರ ಜಯಂತಿ ಆಚರಿಸಲಾಯಿತು.

ಪುರಸಭೆ ಅಧ್ಯಕ್ಷ ಸುಭಾಸ್‌ ಮ್ಯಾಗೇರಿ, ಸ್ಥಾಯಿ ಸಮಿತಿ ಸದಸ್ಯರಾದ ಮುರ್ತುಜಾ ಡಾಲಾಯತ, ಸಮಾಜದ ಮುಖಂಡರಾದ ಪೀರು ರಾಠೋಡ, ಶಿವು ರಾಠೋಡ ಇದ್ದರು.

ಗಜೇಂದ್ರಗಡದ ಪುರಸಭೆಯಲ್ಲಿ ಸಂತ ಸೇವಾಲಾಲ್ ಮಹಾರಾಜರ ಜಯಂತ್ಯುತ್ಸವ ಆಚರಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.