
ಲಕ್ಷ್ಮೇಶ್ವರ (ಗದಗ): ‘ಸಿದ್ದ ಅಂದರೆ ಶಿವ; ರಾಮ ಅಂದರೆ ವಿಷ್ಣು. ಶಿವ ಮತ್ತು ವಿಷ್ಣು ಎರಡೂ ಸೇರಿ ಸಿದ್ದರಾಮ ಆಗಿದ್ದೇನೆ. ಆದರೆ, ನನ್ನಲ್ಲಿ ಕಂದಾಚಾರ, ಮೌಢ್ಯತೆ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಶನಿವಾರ ಇಲ್ಲಿ ನಡೆದ ಸಿ.ಎನ್.ಆರ್.ರಾವ್ 10ನೇ ವರ್ಷದ ವಿಜ್ಞಾನ ವಿಸ್ತೃತ ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಬಿ.ಎಸ್.ಪಾಟೀಲ ಅವರಿಗೆ 2025ನೇ ಸಾಲಿನ ‘ಚಂದನ ಶ್ರೀ’ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
‘ಶಿಕ್ಷಣವಂತರಿಂದಲೇ ಜಾತಿ ವ್ಯವಸ್ಥೆ ಬೇರೂರುತ್ತಿದೆ. ಬಸವಣ್ಣನವರು ಅಂದೇ ಕರ್ಮ ಸಿದ್ಧಾಂತ ವಿರೋಧಿಸಿದ್ದರು. ಜಾತಿ ವ್ಯವಸ್ಥೆ ನಿರ್ಮೂಲನೆಗೆ ಮನುಷ್ಯ ಕಂದಾಚಾರ, ಮೌಢ್ಯಗಳನ್ನು ಬಿಡಬೇಕು. ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದರು.