ನರಗುಂದ: ಆಪರೇಶನ್ ಸಿಂಧೂರ ಕಾರ್ಯಾಚರಣೆಗೆ ಅಭಿನಂದನೆ ಸಲ್ಲಿಸಿದ ಮುಸ್ಲಿಮರು ಶುಕ್ರವಾರ ಅಹಲ್ಹೆ ಸುನ್ನತುಲ್ ಜಮಾತ್ ಶಾಹಿ ಫತ್ತೇ ಮಜೀದ್‌ನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಭಾರತದ ತ್ರಿವರ್ಣ ಧ್ವಜವನ್ನು ಪ್ರದರ್ಶಿಸಿ ಸೈನಿಕರಿಗೆ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಂಜುಮನ್–ಎ–ಇಸ್ಲಾಂ ಸಂಸ್ಥೆ ಅಧ್ಯಕ್ಷ ಐ.ಪಿ.ಚಂದೂನವರ
ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಆಪರೇಷನ್ ಸಿಂದೂರು ಮೂಲಕ ಭಾರತೀಯ ಸೇನಾ ಪಡೆ ನಡೆಸಿದ ಕಾರ್ಯ ಶ್ಲಾಘನೀಯ ದೇಶದ ಹೆಮ್ಮೆಯ ಮೂರು ಸೇನೆಗಳು ಪಾಕಿಸ್ತಾನದ 9 ಕಡೆ ಏಕಕಾಲಕ್ಕೆ ದಾಳಿ ನಡೆಸಿ ಉಗ್ರರನ್ನು ಸದೆಬಡಿದಿದೆ. ಜಾಗತಿಕ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ಉಗ್ರ ಸಂಹಾರಕ್ಕೆ ಜೀವದ ಹಂಗು ತೊರೆದು ಎದೆ ತಟ್ಟಿ ನಿಂತ ಸೈನಿಕರ ಕಾರ್ಯ ಶ್ಲಾಘನೀಯ ಎಂದರು.
ಇನ್ನೊಮ್ಮೆ ಭಾರತ ದೇಶದ ತಂಟೆಗೆ ಬಂದರೆ ಸೇನೆಯ ನಿರ್ಣಯ ಇದಕ್ಕಿಂತ ಕಠೋರವಾಗಿರಲಿದೆ ಎಂಬುವುದನ್ನು ತೋರಿಸಿಕೊಟ್ಟಿದೆ. ಇದಕ್ಕೆ ನಮ್ಮ ಸೈನಿಕರಿಗೆ ಗೌರವ ಸಲ್ಲಿಸಿದರೂ ಕಡಿಮೆ. ಈಗಲಾದರೂ ಉಗ್ರರು ಪೈಶಾಚಿಕ ಕೃತ್ಯ ಬಿಟ್ಟು ಸಾಮಾನ್ಯ ಮನುಷ್ಯರಾಗಬೇಕು. ಇಲ್ಲವಾದರೆ ಭಾರತದ ಪ್ರತ್ಯುತ್ತರ ತುಂಬಾ ಭಯಂಕರ ವಾಗಿರುತ್ತದೆ ಎಂದರು.
ಅಜಂ ಸರಖಾಜಿ, ಅಂಜುಮನ್–ಎ–ಇಸ್ಲಾಂ ಸಂಸ್ಥೆ ಸದಸ್ಯರಾದ ಅಮ್ಜದ್ ಅಹ್ಮದ್ ಖಾಜಿ, ಜಹೀರ್ ಅಹ್ಮದ್ ಖಾಜಿ, ಮೋದಿನಬೇಗ ಮುಲ್ಲಾ, ಇಮಾಮಸಾಬ್ ನದಾಫ, ಬಾಬಾ ಜಾನ್ ಮುಲ್ಲಾ, ಮಾಬುಸಾಬ್ ಕಿಲ್ಲೇದಾರ, ಎಂ.ಎಂ.ಖಾಜಿ, ಅಲ್ಲಾಬಕ್ಷ ಸಂಶಿ, ಹಜರತ್ ಅಲಿ ಮುಲ್ಲಾನವರ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.