ಗದಗ: ‘ತೋಂಟದ ಸಿದ್ಧಲಿಂಗ ಸ್ವಾಮೀಜಿಯವರು ಕಟ್ಟಿದ ಸಂಸ್ಥೆಗಳು ಸಾರ್ವಕಾಲಿಕವಾಗಿದ್ದು, ಇಂದು ಅವು ಹೆಮ್ಮರವಾಗಿ ಬೆಳೆದು ಸಮಾಜಮುಖಿಯಾಗಿ ಮುನ್ನಡೆಯುತ್ತಿವೆ’ ಎಂದು ಜಗದ್ಗುರು ತೋಂಟದಾರ್ಯ ಶಿಕ್ಷಣ ಸಂಸ್ಥೆಗಳ ನೌಕರರ ಪತ್ತಿನ ಸಹಕಾರಿ ಸಂಘದ ಸಂಸ್ಥಾಪಕ ಅಧ್ಯಕ್ಷ ಪ್ರೊ. ಎಸ್.ಎಸ್.ಪಟ್ಟಣಶೆಟ್ಟರ ಹೇಳಿದರು.
ನಗರದ ಬಸವೇಶ್ವರ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 2024-25ನೇ ಸಾಲಿನ ಜಗದ್ಗುರು ತೋಂಟದಾರ್ಯ ಶಿಕ್ಷಣ ಸಂಸ್ಥೆಗಳ ನೌಕರರ ಪತ್ತಿನ ಸಹಕಾರಿ ಸಂಘದ 24ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
2021ರಲ್ಲಿ ಆರಂಭಗೊಂಡ ಜಗದ್ಗುರು ತೋಂಟದಾರ್ಯ ಶಿಕ್ಷಣ ಸಂಸ್ಥೆಗಳ ನೌಕರರ ಪತ್ತಿನ ಸಹಕಾರಿ ಸಂಘ ಪಾರದರ್ಶಕ ಆಡಳಿತದಿಂದ ನೌಕರರ ವಿಶ್ವಾಸಾರ್ಹತೆ ಗಳಿಸಿದೆ. ಈ ಬೆಳವಣಿಗೆಯ ಹಿಂದಿನ ಶಕ್ತಿ ಈಗಿನ ಶ್ರೀಗಳಾದ ತೋಂಟದ ಸಿದ್ದರಾಮ ಸ್ವಾಮೀಜಿ ಆಗಿದ್ದಾರೆ. ಸಾಮಾಜಿಕ ಕಾಳಜಿಯೇ ಉಭಯ ಶ್ರೀಗಳವರ ಮುಖ್ಯಗುರಿಯಾಗಿದ್ದು ಅವು ಸದಾಕಾಲವೂ ಸ್ಮರಣೀಯವಾಗಿವೆ ಎಂದರು.
ತೋಂಟದ ಸಿದ್ದಲಿಂಗ ಆಶೀರ್ವಾದದಿಂದ ಸ್ಥಾಪನೆಯಾಗಿರುವ ಸಹಕಾರಿ ಪತ್ತಿನ ಸಂಘವು ಮುಂದಿನ ವರ್ಷ ಬೆಳ್ಳಿಹಬ್ಬ ಆಚರಿಸಿಕೊಳ್ಳಲಿದೆ. ತೋಂಟದ ಸಿದ್ಧಲಿಂಗ ಶ್ರೀಗಳ ಪರಿಶ್ರಮದಿಂದ ಸ್ಥಾಪನೆಯಾದ ಜೆಟಿಎಸ್‌ಎಸ್‌ಇ ಸಹಕಾರಿ ಸಂಘವನ್ನು ಬ್ಯಾಂಕ್ ಆಗಿ ಪರಿವರ್ತಿಸುವ ಚಿಂತನೆ ನಡೆದಿದೆ. ಹೆಮ್ಮರವಾಗಿ ಬೆಳೆಸಿ ಸಂಘಕ್ಕೆ ಬ್ಯಾಂಕ್‌ನ ರೂಪಧಾರಣೆ ಮಾಡಲು ಪ್ರಯತ್ನಿಸಲಾಗುತ್ತಿದೆ. ಆ ಬಗ್ಗೆ ಕೂಲಂಕಷವಾಗಿ ಚಿಂತಿಸಲಾಗುತ್ತಿದೆ ಎಂದರು.
ಸಂಘದ ಕಾರ್ಯದರ್ಶಿ ದೊಡ್ಡಬಸಪ್ಪ ಚಿತ್ರಗಾರ ವರದಿ ವಾಚಿಸಿದರು.
ಉಪನ್ಯಾಸಕ ಎಸ್.ಎಚ್.ಪಾಟೀಲ, ಬಿ.ಎಸ್.ಪಾಟೀಲ, ಭೋಜರಾಜ ಸೊಪ್ಪಿಮಠ, ಅಶ್ವಿನಿ ಅರಳಿ, ಮುಖ್ಯ ಶಿಕ್ಷಕ ಜಿ.ಎಂ.ಕೋಟ್ಯಾಳ ಅನಿಸಿಕೆ ಹಂಚಿಕೊಂಡರು.
ಉತ್ತಮ ಆದರ್ಶ ಶಿಕ್ಷಕ ರಾಜ್ಯ ಪ್ರಶಸ್ತಿ ಪುರಸ್ಕೃತ ಕೆ.ಸಿ.ಪಟ್ಟಣಶೆಟ್ಟಿ ಅವರನ್ನು ಇದೇ ಸಂದರ್ಭದಲ್ಲಿ ಸಹಕಾರಿ ಪತ್ತಿನ ಸಂಘದ ಪರವಾಗಿ ಸನ್ಮಾನಿಸಲಾಯಿತು.
ಆಡಳಿತ ಮಂಡಳಿ ನಿರ್ದೇಶಕರಾದ ಶಿವರಾಚಯ್ಯ ಎಸ್.ಎಂ., ವಿಜಯಕುಮಾರ ಮಾಲಗಿತ್ತಿ, ಯೋಗೇಶಕುಮಾರ ಮತ್ತೂರ, ಲಚಮಪ್ಪ ಬಸಾಪೂರ, ಎಚ್.ಎನ್.ಕೇಲೂರ, ಉಮೇಶ ಉಪ್ಪಿನಬೆಟಗೇರಿ, ಮಂಜುನಾಥ ಉತ್ತರಕರ, ಬಸವರಾಜ ಗೆದಗೇರಿ, ಸರಸ್ವತಿ ಗಾಣಿಗೇರ ಹಾಗೂ ನಿಬಂಧಕರಾದ ಮಹೇಶ ಸಿ. ಉಪ್ಪಿನ ಇದ್ದರು.
ಪ್ರಾಂಶುಪಾಲ ಪ್ರಭುಸ್ವಾಮಿ ಹೇಮಗಿರಿಮಠ ಸ್ವಾಗತಿಸಿದರು. ಮೃತುಂಜಯ ಹಿರೇಮಠ ಹಾಗೂ ಸಂಗಡಿಗರಿಂದ ಪ್ರಾರ್ಥನೆ ನಡೆಯಿತು. ವೀರನಗೌಡ ಮರೀಗೌಡರ ನಿರೂಪಿಸಿದರು. ಆರ್.ಜೆ.ಕೊರ್ಲಹಳ್ಳಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.