ADVERTISEMENT

ಡಂಬಳ | 'ಕ್ಲಸ್ಟರ್‌ ಮಟ್ಟದ ಕ್ರೀಡೆಯಲ್ಲಿ ವಿದ್ಯಾರ್ಥಿಗಳ ಸಾಧನೆ’

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2024, 15:14 IST
Last Updated 4 ಆಗಸ್ಟ್ 2024, 15:14 IST
ಡಂಬಳ ಹೋಬಳಿ ವ್ಯಾಪ್ತಿಯ ಮೇವುಂಡಿ ಕ್ಲಸ್ಟರ್ ನ ಗ್ರೂಪ್ ಮಟ್ಟದ ಕ್ರೀಡಾಕೂಟದಲ್ಲಿ ಮೇವುಂಡಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿಜೇತ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣಾಧಿಕಾರಿ ಜಿ.ಬಿ. ಬಸವಣ್ಣೆಪ್ಪ ಬಹುಮಾನ ವಿತರಿಸಿದರು. ಮುಖ್ಯೋಪಾಧ್ಯಾಯ ಎಸ್.ವ್ಹಿ.ಅರಿಷಿಣದ, ವಾಯ್.ಎಚ್.ಬಜೇನಹಳ್ಳಿ, ಈಶ್ವರ ಉಳ್ಳಾಗಡ್ಡಿ ಇತರರಿದ್ದರು. 
ಡಂಬಳ ಹೋಬಳಿ ವ್ಯಾಪ್ತಿಯ ಮೇವುಂಡಿ ಕ್ಲಸ್ಟರ್ ನ ಗ್ರೂಪ್ ಮಟ್ಟದ ಕ್ರೀಡಾಕೂಟದಲ್ಲಿ ಮೇವುಂಡಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿಜೇತ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣಾಧಿಕಾರಿ ಜಿ.ಬಿ. ಬಸವಣ್ಣೆಪ್ಪ ಬಹುಮಾನ ವಿತರಿಸಿದರು. ಮುಖ್ಯೋಪಾಧ್ಯಾಯ ಎಸ್.ವ್ಹಿ.ಅರಿಷಿಣದ, ವಾಯ್.ಎಚ್.ಬಜೇನಹಳ್ಳಿ, ಈಶ್ವರ ಉಳ್ಳಾಗಡ್ಡಿ ಇತರರಿದ್ದರು.    

ಡಂಬಳ: ಹೋಬಳಿ ವ್ಯಾಪ್ತಿಯ ಯಕ್ಲಾಸಪೂರ ಗ್ರಾಮದ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಜರುಗಿದ ಮೇವುಂಡಿ ಕ್ಲಸ್ಟರ್ ನ ಗ್ರೂಪ್ ಮಟ್ಟದ ಕ್ರೀಡಾಕೂಟದಲ್ಲಿ ಮೇವುಂಡಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಗೈದಿದ್ದಾರೆ.

ಬಾಲಕರ ವಿಭಾಗದ ಗುಂಪು ಆಟಗಳಲ್ಲಿ ವಾಲಿಬಾಲ್‌, ಕಬಡ್ಡಿ, ಕೊಕ್ಕೊ, ಥ್ರೋಬಾಲ್ ಪ್ರಥಮ, 4x100 ಮೀ ರೀಲೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಬಾಲಕಿಯರ ವಿಭಾಗದ ಗುಂಪು ಆಟಗಳಲ್ಲಿ ವಾಲಿಬಾಲ್‌ ದ್ವಿತೀಯ, ಥ್ರೋಬಾಲ್ ದ್ವಿತೀಯ, 4x100ಮೀ ರೀಲೆ ದ್ವಿತೀಯ ಸ್ಥಾನಗಳಿಸಿದ್ದಾರೆ.

ವೈಯಕ್ತಿಕ ಆಟಗಳಲ್ಲಿ 600 ಮೀ ಓಟದಲ್ಲಿ ಗೀತಾ ಉಪ್ಪಾರ ಪ್ರಥಮ, 100 ಮೀ ಹಾಗೂ 200 ಮೀ ಓಟದಲ್ಲಿ ಕಾವೇರಿ ದ್ವಿತೀಯ, 100 ಮೀ ಓಟದಲ್ಲಿ ವಿರೇಶ ಹಂಚಿನಾಳ ದ್ವಿತೀಯ, 200 ಮೀ ಓಟದಲ್ಲಿ ಪ್ರಸಾದ ಕಠಾಣಿ ತೃತೀಯ, 400 ಮೀ ಓಟದಲ್ಲಿ ಶ್ರೀನಿವಾಸ ಮೇಗೂರ ದ್ವಿತೀಯ, 600 ಮೀ ಓಟದಲ್ಲಿ ಪ್ರಸಾದ ಕಠಾಣಿ ಪ್ರಥಮ ಹಾಗೂ ಶ್ರೀನಿವಾಸ ಮೇಗೂರ ದ್ವಿತೀಯ, ಗುಂಡು ಎಸೆತದಲ್ಲಿ ಹಾಲೇಶ ಬನ್ನಿಕೊಪ್ಪ ಪ್ರಥಮ ಹಾಗೂ ಅಜಯ ಹಿರೇಮನಿ ದ್ವಿತೀಯ ಸ್ಥಾನ.

ADVERTISEMENT

ಚಕ್ರ ಎಸೆತದಲ್ಲಿ ವಿಜಯ ಹಿರೇಮನಿ ಪ್ರಥಮ ಹಾಗೂ ಹಾಲೇಶ ಬನ್ನಿಕೊಪ್ಪ ದ್ವಿತೀಯ ಸ್ಥಾನ, ಎತ್ತರ ಜಿಗಿತದಲ್ಲಿ ಪ್ರಸಾದ ಕಠಾಣಿ ಪ್ರಥಮ ಸ್ಥಾನ ಪಡೆದು ತಾಲ್ಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಆಗಿದ್ದಾರೆ.

100 ಮೀ. ಓಟ, 200 ಮೀ. ಓಟ ಹಾಗೂ ಅಡೆತಡೆ ಓಟದಲ್ಲಿ ಮಲ್ಲಿಕಾರ್ಜುನ ತಾರಿಕೊಪ್ಪ ಪ್ರಥಮ ಸ್ಥಾನ ಗಳಿಸಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡನು. ವಿಜೇತ ವಿದ್ಯಾರ್ಥಿಗಳಿಗೆ ಮುಖ್ಯಶಿಕ್ಷಕ ಎಸ್.ವಿ.ಅರಿಷಿಣದ, ದೈಹಿಕ ಶಿಕ್ಷಣ ಶಿಕ್ಷಕಿ ಎಸ್.ಕೆ.ಲಮಾಣಿ, ಟೀಮ್ ಮ್ಯಾಜೇಜರ್ ತೌಶಿಪ್ ಅಳವುಂಡಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಯಮನೂರಪ್ಪ ಹೈತಾಪೂರ ಹಾಗೂ ಸದಸ್ಯರು, ಶಿಕ್ಷಕರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.