ADVERTISEMENT

ರಾಜ್ಯಮಟ್ಟದ ಕುಸ್ತಿ: ಗದಗ ಕ್ರೀಡಾಪಟುಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2022, 5:11 IST
Last Updated 28 ನವೆಂಬರ್ 2022, 5:11 IST
ವಿಜಯಪುರ ಜಿಲ್ಲೆಯಲ್ಲಿ ನಡೆಯುವ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ ಗದಗ ಕ್ರೀಡಾಶಾಲೆಯ ಕುಸ್ತಿಪಟುಗಳ ಜತೆಗೆ ಇಲಾಖೆಯ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ, ಕುಸ್ತಿ ತರಬೇತುದಾರ ಶರಣಗೌಡ ಬೇಲೇರಿ ಇದ್ದಾರೆ
ವಿಜಯಪುರ ಜಿಲ್ಲೆಯಲ್ಲಿ ನಡೆಯುವ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ ಗದಗ ಕ್ರೀಡಾಶಾಲೆಯ ಕುಸ್ತಿಪಟುಗಳ ಜತೆಗೆ ಇಲಾಖೆಯ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ, ಕುಸ್ತಿ ತರಬೇತುದಾರ ಶರಣಗೌಡ ಬೇಲೇರಿ ಇದ್ದಾರೆ   

ಗದಗ: 2022-23ನೇ ಸಾಲಿನ 14ರಿಂದ 17 ವರ್ಷದೊಳಗಿನ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ, ಬಾಲಕಿಯರ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ ನ.28, 29 ಮತ್ತು 30ರಂದು ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಲಚ್ಯಾಣದಲ್ಲಿ ನಡೆಯಲಿದೆ.

ಕುಸ್ತಿ ಪಂದ್ಯಾವಳಿಯಲ್ಲಿಗದಗ ಜಿಲ್ಲೆಯ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾಶಾಲೆಯ ಕುಸ್ತಿಪಟುಗಳಾದ ಚೋಳರಾಜ (35 ಕೆ.ಜಿ. ವಿಭಾಗ), ಪ್ರವೀಣ್ (38 ಕೆ.ಜಿ. ವಿಭಾಗ), ರೋಹಿತ್‌ (41 ಕೆ.ಜಿ. ವಿಭಾಗ), ಗುರುಪ್ರಸಾದ (57 ಕೆ.ಜಿ. ವಿಭಾಗ), ವಿನೋದ (52 ಕೆ.ಜಿ. ವಿಭಾಗ), ರಾಹುಲ್‌ (75 ಕೆ.ಜಿ. ವಿಭಾಗ) ಭಾಗವಹಿಸಲಿದ್ದಾರೆ.

ಬಾಲಕಿಯರ ವಿಭಾಗದಲ್ಲಿ ಆರಿಫಾ (30 ಕೆ.ಜಿ. ವಿಭಾಗ), ಕಾವ್ಯಾ (33 ಕೆ.ಜಿ. ವಿಭಾಗ), ಸ್ನೇಹಾ (36 ಕೆ.ಜಿ. ವಿಭಾಗ), ಕಾವ್ಯಾ ಪೂಜಾರ (39 ಕೆ.ಜಿ. ವಿಭಾಗ), ತೇಜಸ್ವಿನಿ (46 ಕೆ.ಜಿ. ವಿಭಾಗ), ಜಾನ್ವಿ (50 ಕೆ.ಜಿ. ವಿಭಾಗ), ಶಶಿಕಲಾ (54 ಕೆ.ಜಿ. ವಿಭಾಗ), ತ್ರಿವೇಣಿ (40 ಕೆ.ಜಿ. ವಿಭಾಗ), ಶಿಲ್ಪಾ (43 ಕೆ.ಜಿ. ವಿಭಾಗ), ವೈಷ್ಣವಿ (46 ಕೆ.ಜಿ. ವಿಭಾಗ), ವರಲಕ್ಷ್ಮೀ (49 ಕೆ.ಜಿ. ವಿಭಾಗ), ಭುವನೇಶ್ವರಿ (53 ಕೆ.ಜಿ. ವಿಭಾಗ), ರಾಧಿಕಾ (57 ಕೆ.ಜಿ. ವಿಭಾಗ), ರಕ್ಷಿತಾ (61 ಕೆ.ಜಿ. ವಿಭಾಗ), ಶ್ವೇತಾ (65 ಕೆ.ಜಿ. ವಿಭಾಗ) ಆಯ್ಕೆಯಾಗಿದ್ದಾರೆ.

ADVERTISEMENT

ಗದಗ ಕ್ರೀಡಾಶಾಲೆ ಕುಸ್ತಿಪಟುಗಳು ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿ ಇಲಾಖೆ ಹಾಗೂ ಜಿಲ್ಲೆಯ ಕೀರ್ತಿ ತರಬೇಕು ಎಂದು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ ಮತ್ತು ಕುಸ್ತಿ ತರಬೇತುದಾರ ಶರಣಗೌಡ ಬೇಲೇರಿ ಶುಭಾಶಯ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.