ADVERTISEMENT

ಬೀದಿ ನಾಯಿಗಳ ದಾಳಿ: 7 ಟಗರು ಸಾವು

​ಪ್ರಜಾವಾಣಿ ವಾರ್ತೆ
Published 19 ಮೇ 2025, 15:40 IST
Last Updated 19 ಮೇ 2025, 15:40 IST
ನರಗುಂದ ಸೋಮಾಪುರ ಓಣಿಯ ರಾಚಯ್ಯ ನಗರದ ಹತ್ತಿರವಿರುವ ಫಾರ್ಮ್ ಹೌಸ್‌ ನಲ್ಲಿ ಸಾಕಿದ ಟಗರುಗಳ ಮೇಲೆ ಬೀದಿ ನಾಯಿಗಳ ದಾಳಿ ನಡೆಸಿದ ಪರಿಣಾಮ ಟಗರುಗಳು ಸಾವನ್ನಪ್ಪಿದ ದೃಶ್ಯ.
ನರಗುಂದ ಸೋಮಾಪುರ ಓಣಿಯ ರಾಚಯ್ಯ ನಗರದ ಹತ್ತಿರವಿರುವ ಫಾರ್ಮ್ ಹೌಸ್‌ ನಲ್ಲಿ ಸಾಕಿದ ಟಗರುಗಳ ಮೇಲೆ ಬೀದಿ ನಾಯಿಗಳ ದಾಳಿ ನಡೆಸಿದ ಪರಿಣಾಮ ಟಗರುಗಳು ಸಾವನ್ನಪ್ಪಿದ ದೃಶ್ಯ.   

ನರಗುಂದ: ಪಟ್ಟಣದ ಸೋಮಾಪುರ ಓಣಿಯ ರಾಚಯ್ಯ ನಗರದ ಹತ್ತಿರವಿರುವ ಫಾರ್ಮ್‌ಹೌಸ್‌ನಲ್ಲಿ ಸಾಕಿದ ಟಗರುಗಳ ಮೇಲೆ ಭಾನುವಾರ ಸಂಜಡ ಬೀದಿ ನಾಯಿಗಳು ದಾಳಿ ನಡೆಸಿದ್ದು, 7 ಟಗರುಗಳು ಮೃತಪಟ್ಟಿವೆ. ಐದು ಟಗರುಗಳು ಗಂಭೀರ ಗಾಯಗೊಂಡಿವೆ.

ಬೀರಪ್ಪ ಹನಮಪ್ಪ ಗೊಗೇರಿಯವರಿಗೆ ಸೇರಿದ ಟಗರುಗಳಿವು. ತೀವ್ರ ಗಾಯಗೊಂಡ ಟಗರುಗಳಿಗೆ ತಾಲ್ಲೂಕು ಪಶುವೈದ್ಯಾಧಿಕಾರಿ ಡಾ.ಸಂತೋಷ ಫಾರ್ಮ್‌ಹೌಸ್‌ಗೆ ಭೇಟಿ ನೀಡಿ ಚಿಕಿತ್ಸೆ ನೀಡಿದ್ದಾರೆ.

‘ಬೀದಿ ನಾಯಿಗಳ ದಾಳಿಯಿಂದ 7 ಟಗರು ಸಾವನ್ನಪ್ಪಿ, ಕೆಲವು ಟಗರುಗಳು ಗಾಯಗೊಂಡಿವೆ. ಇದರಿಂದ ₹1 ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ. ಬೀದಿ ನಾಯಿಗಳ ದಾಳಿಯಿಂದ ಟಗರುಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಪುರಸಭೆ ಅಧಿಕಾರಿಗಳು ಬೀದಿನಾಯಿಗಳ ನಿಯಂತ್ರಣಕ್ಕೆ ಕ್ರಮವಹಿಸಬೇಕು’ ಎಂದು ಬೀರಪ್ಪ ಅವರು ಒತ್ತಾಯಿಸಿದರು.

ADVERTISEMENT
ನರಗುಂದ ಸೋಮಾಪುರ ಓಣಿಯ ರಾಚಯ್ಯ ನಗರದ ಹತ್ತಿರವಿರುವ ಫಾರ್ಮ್ ಹೌಸ್‌ ನಲ್ಲಿ ಸಾಕಿದ ಟಗರುಗಳ ಮೇಲೆ ಬೀದಿ ನಾಯಿಗಳ ದಾಳಿ ನಡೆಸಿದ ಪರಿಣಾಮ ಗಾಯಗೊಂಡ ಟಗರುಗಳ ಳಿಗೆ ಪಶುವೈದ್ಯ ಡಾ.ಸಂತೋಷ ಚಿಕಿತ್ಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.