ಪ್ರಾತಿನಿಧಿಕ ಪತ್ರ
ಗದಗ: ಅಂಚೆ ಇಲಾಖೆಯಿಂದ 6ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಅಂಚೆ ಚೀಟಿಗಳ ಸಂಗ್ರಹ ಉತ್ತೇಜಿಸಲು ದೀನ್ ದಯಾಳ್ ಸ್ಪರ್ಶ ಯೋಜನೆಯಡಿ ವಿದ್ಯಾರ್ಥಿವೇತನದ ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯು ಮಕ್ಕಳಿಗೆ ಅಂಚೆಚೀಟಿಗಳ ಮಹತ್ವ ಮತ್ತು ಸಂಗ್ರಹದ ಹವ್ಯಾಸ ಬೆಳೆಸುವ ಗುರಿಯನ್ನು ಹೊಂದಿದೆ.
ಮಕ್ಕಳು 2024-25ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶೇ 60 ಅಂಕವನ್ನು ಗಳಿಸಿರಬೇಕು. ಕಡ್ಡಾಯವಾಗಿ ಮಕ್ಕಳು ಅಂಚೆಚೀಟಿ ಠೇವಣಿ ಖಾತೆ ಅಥವಾ ಅಂಚೆಚೀಟಿ ಕ್ಲಬ್‌ನ ಸದಸ್ಯರಾಗಿರಬೇಕು. ಅಂಚೆಚೀಟಿ ಬಹು ಆಯ್ಕೆ ಲಿಖಿತ ಪರೀಕ್ಷೆ ಮತ್ತು ಅಂಚೆಚೀಟಿ ಸಂಗ್ರಹ ಪ್ರಾಜೆಕ್ಟ್‌ನ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ಆಯ್ಕೆಯಾದ ವಿದ್ಯಾರ್ಥಿಗಳಿಗೆ ₹6 ಸಾವಿರ ವಿದ್ಯಾರ್ಥಿವೇತನ ನೀಡಲಾಗುವುದು.
ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 4 ಕೊನೆಯ ದಿನವಾಗಿದೆ.
ಗದಗ ಶೈಕ್ಷಣಿಕ ಜಿಲ್ಲೆಯ ಆಸಕ್ತ ವಿದ್ಯಾರ್ಥಿಗಳು ಮತ್ತು ಶಾಲೆಗಳು 98861 17229 ಮೊಬೈಲ್ ನಂಬರ್ ಸಂಪರ್ಕಿಸಬಹುದು ಎಂದು ಗದಗ ವಿಭಾಗದ ಅಂಚೆ ಅಧೀಕ್ಷಕ ರಮೇಶ ಮಡಿವಾಳರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾಹಿತಿಗೆ: www.indiapost.gov.in ಅಥವಾ www.karnatakapost.gov.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
–––––––––
ಮೈಲಾರಲಿಂಗೇಶ್ವರ ದೇವಸ್ಥಾನ: ಅನ್ನಸಂತರ್ಪಣೆ 17ರಂದು
ಗದಗ: ಇಲ್ಲಿನ ಕೊನೇರಿಹೊಂಡದ ಹತ್ತಿರವಿರುವ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಶ್ರಾವಣಮಾಸದ ಕೊನೆಯ ಭಾನುವಾರ ಮಧ್ಯಾಹ್ನ 1ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಂದು ಬೆಳಿಗ್ಗೆ ಮೈಲಾರಲಿಂಗೇಶ್ವರ ದೇವರಿಗೆ ಅಭಿಷೇಕ, ಬುತ್ತಿಪೂಜೆ, ಎಲಿಪೂಜೆ, ಭಂಡಾರಪೂಜೆ, ಬಾಳೆಹಣ್ಣು ಪೂಜೆ ಮಾಡಲಾಗುವುದು. ರಾತ್ರಿ 8ಕ್ಕೆ ಪಾಲಕಿ ಉತ್ಸವ ನಡೆಯಲಿದೆ.
ಭಕ್ತರು ಈ ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದು ದೇವಸ್ಥಾನದ ಟ್ರಸ್ಟ್ ಕಮಿಟಿ ಅಧ್ಯಕ್ಷ ಜಯದೇವ ಎಂ. ಮೆಣಸಗಿ, ಕಾರ್ಯದರ್ಶಿ ಶೇಖರಗೌಡ ಬಿ.ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------
ಶ್ರೀಕೃಷ್ಣ ಜನ್ಮಾಷ್ಟಮಿ: ಮಾಂಸ ಮಾರಾಟ ಬಂದ್
ಗದಗ: ಶ್ರೀಕೃಷ್ಣ ಜನ್ಮಾಷ್ಠಮಿ ಅಂಗವಾಗಿ ಶನಿವಾರ ಜಾನುವಾರುಗಳ ವಧೆ ಹಾಗೂ ಮಾಂಸ ಮಾರಾಟ ನಿಷೇಧಿಸಲಾಗಿದೆ.
ಆದೇಶ ಉಲ್ಲಂಘಿಸಿ ಮಾಂಸ ಮಾರಾಟ ಮಾಡಿದಲ್ಲಿ, ಅಂಥವರ ಪರವಾನಗಿ ರದ್ದು ಮಾಡಲಾಗುವುದು ಎಂದು ಗದಗ ಬೆಟಗೇರಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.