ADVERTISEMENT

ಅಕ್ಷರದೊಂದಿಗೆ ಜೀವನ ರೂಪಿಸಿದ ಶಿಕ್ಷಕರು

ನರರೋಗ ತಜ್ಞ ಡಾ.ಶಿವಯೋಗಿ ಬಳಿಗಾರ ಅಭಿಮತ

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 3:16 IST
Last Updated 10 ಜನವರಿ 2026, 3:16 IST
ಲಕ್ಷ್ಮೇಶ್ವರ ತಾಲ್ಲೂಕು ಶಿಗ್ಲಿಯ ಎಸ್.ಎಸ್. ಕೂಡ್ಲಮಠ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಾರ್ಷಿಕೋತ್ಸವವನ್ನು ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ ಶುಕ್ರವಾರ ಉದ್ಘಾಟಿಸಿದರು
ಲಕ್ಷ್ಮೇಶ್ವರ ತಾಲ್ಲೂಕು ಶಿಗ್ಲಿಯ ಎಸ್.ಎಸ್. ಕೂಡ್ಲಮಠ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಾರ್ಷಿಕೋತ್ಸವವನ್ನು ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ ಶುಕ್ರವಾರ ಉದ್ಘಾಟಿಸಿದರು   

ಲಕ್ಷ್ಮೇಶ್ವರ: ‘ಉತ್ತಮ ಶಿಕ್ಷಕರು ಸಿಗುವುದು ನಮ್ಮ ಪೂರ್ವ ಜನ್ಮದ ಪುಣ್ಯ. ವಿದ್ಯೆ ಕಲಿಸಿದ ಶಿಕ್ಷಕರು ಅಕ್ಷರದೊಂದಿಗೆ ನಮಗೆ ಬದುಕನ್ನು ರೂಪಿಸಿದ್ದಾರೆ’ ಎಂದು ನರರೋಗ ತಜ್ಞ ಡಾ.ಶಿವಯೋಗಿ ಬಳಿಗಾರ ಹೇಳಿದರು.

ತಾಲ್ಲೂಕಿನ ಶಿಗ್ಲಿಯ ಎಸ್.ಎಸ್. ಕೂಡ್ಲಮಠ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಾರ್ಷಿಕೋತ್ಸವದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.

‘ಗುರು, ತಂದೆ-ತಾಯಿ ಹಾಗೂ ಭೂಮಿಯ ಋಣ ಎಂದೂ ತೀರಿಸಲಾಗದು. ವಿದ್ಯಾರ್ಥಿಗಳು ಶಿಕ್ಷಕರಿಗೆ ಗೌರವ ಕೊಡುವುದನ್ನು ಕಲಿಯಬೇಕು’ ಎಂದು ಹೇಳಿದರು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ, ‘ಶಿಕ್ಷಕರು ಪ್ರತಿದಿನ ಹೇಳಿಕೊಡುವ ಅಭ್ಯಾಸದ ಬಗ್ಗೆ ಮಕ್ಕಳು ಹೆಚ್ಚು ಗಮನ ಕೇಂದ್ರೀಕರಿಸಬೇಕು. ಕಲಿಸಿದ ಗುರುವಿನ ಋಣವನ್ನು ಜನ್ಮದಲ್ಲಿ ತೀರಿಸುವುದು ಅಸಾಧ್ಯ’ ಎಂದರು.

ಡಾ.ಎನ್.ಕೆ. ಕಾಳಪ್ಪನವರ, ಡಾ.ರವಿ ಸಾಲ್ಮನಿ, ಡಾ.ಪ್ರದೀಪ ಕಲ್ಲೊಳ್ಳಿಮಠ ಮಾತನಾಡಿದರು. ಸಂಸ್ಥೆ ಅಧ್ಯಕ್ಷ ಎಫ್.ಡಿ. ಹುನಗುಂದ, ಎಸ್.ಪಿ.ಬಳಿಗಾರ, ಶಂಕರ ರಾಗಿ, ಮಂಜುನಾಥ ನಾವಿ, ಎಚ್.ಎಫ್. ತಳವಾರ, ಎಸ್.ಬಿ. ಡಾಣಗಲ್ಲ, ಈರಣ್ಣ ಪವಾಡದ, ಸಿದ್ದಣ್ಣ ಯಲಿಗಾರ, ಡಿ.ವೈ. ಹುನಗುಂದ, ಸಿ.ಎಸ್. ತೋಟದ, ಬಿ.ಸಿ. ಬಳಿಗಾರ, ಎಫ್.ಕೆ. ಕಾಳಪ್ಪನವರ, ಎಂ.ಎಂ. ನದಾಫ್, ಎಸ್.ಬಿ. ಪಾಟೀಲ, ಮಾಲತೇಶ ಪಾಟೀಲ, ಮುಖ್ಯ ಶಿಕ್ಷಕ ಸಿ.ಬಿ.ಮೊಗಲಿ, ಎಲ್.ಸಿ. ಲಮಾಣಿ, ಆರ್.ಎಂ. ಜಂಬೇರಾಳ, ಬಿ.ಬಿ. ಬಳಿಗಾರ, ಬಿ.ಬಿ. ಚಿಟಗಿ, ವೈ.ಎಂ. ಬಸಾಪೂರ ಇದ್ದರು.

800 ಜನರ ಆರೋಗ್ಯ ತಪಾಸಣೆ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.