ADVERTISEMENT

ಪರಿಸರ ಮನುಷ್ಯನ ಅವಿಭಾಜ್ಯ ಅಂಗ

ದಿವಾಣಿ ನ್ಯಾಯಾಧೀಶರಾದ ಜ್ಯೋತಿ ಕಾಗಿನಕರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 14:13 IST
Last Updated 5 ಜೂನ್ 2025, 14:13 IST
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮುಂಡರಗಿ ಪಟ್ಟಣದ ಬ್ಯಾಲವಾಡಗಿ ವೃತ್ತದ ಬಳಿ ದಿವಾಣಿ ನ್ಯಾಯಾಧೀಶರಾದ ಜ್ಯೋತಿ ಕಾಗಿನಕರ ಅವರು ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮುಂಡರಗಿ ಪಟ್ಟಣದ ಬ್ಯಾಲವಾಡಗಿ ವೃತ್ತದ ಬಳಿ ದಿವಾಣಿ ನ್ಯಾಯಾಧೀಶರಾದ ಜ್ಯೋತಿ ಕಾಗಿನಕರ ಅವರು ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು   

ಮುಂಡರಗಿ: ‘ಪರಿಸರವು ಎಲ್ಲರ ಬದುಕಿನ ಅವಿಭಾಜ್ಯ ಅಂಗ. ಪರಿಸರ ಇಲ್ಲದೆ ಬದುಕುವುದು ಅಸಾಧ್ಯ’ ಎಂದು ದಿವಾಣಿ ನ್ಯಾಯಾಧೀಶರಾದ ಜ್ಯೋತಿ ಕಾಗಿನಕರ ಹೇಳಿದರು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪಟ್ಟಣದ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿಯ ಶತಮಾನೋತ್ಸವ ಸಮಿತಿ, ಕಪ್ಪತಹಿಲ್ಸ ವಲಯ ಅರಣ್ಯ ಇಲಾಖೆ, ಪುರಸಭೆ, ಕಪ್ಪತಗುಡ್ಡ ಪರಿಸರ ಸಂರಕ್ಷಣಾ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳು ಗುರುವಾರ ಹಮ್ಮಿಕೊಂಡಿದ್ದ ‘ನಮ್ಮ ನಡಿಗೆ ಪರಿಸರ ಕಡೆಗೆ’ ಹಾಗೂ ಸಾವಿರ ಸಸಿಗಳ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಪರಿಸರ ಸಂರಕ್ಷಿಸುವ ಕುರಿತಂತೆ ಸಾರ್ವಜನಿಕರು, ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು, ಅರಣ್ಯ ಇಲಾಖೆ ಮೇಲೆ ಬಹುದೊಡ್ಡ ಜವಾಬ್ದಾರಿ ಇದ್ದು, ಅದನ್ನು ನಾವು ಸಮರ್ಥವಾಗಿ ನಿಭಾಯಿಸಬೇಕು’ ಎಂದು ತಿಳಿಸಿದರು.

ADVERTISEMENT

‘ಮುಂದಿನ ನಮ್ಮೆಲ್ಲರ ಭವಿಷ್ಯಕ್ಕಾಗಿ ಉತ್ತಮ ಪರಿಸರ ಉಳಿಸಿ ಬೆಳೆಸಬೇಕಾಗಿದೆ. ಅರಣ್ಯ ಇಲಾಖೆ ಹಾಗೂ ಮತ್ತಿತರ ಸಂಘಟನೆಗಳ ಆಶ್ರಯದಲ್ಲಿ ಇಂತಹ ಪರಿಸರ ಜಾಗೃತಿ ಕಾರ್ಯಕ್ರಮಗಳು ನಿತ್ಯ ನಡೆಯಬೇಕು. ಆ ಮೂಲಕ ಎಲ್ಲರಲ್ಲಿ ಪರಿಸರ ಜಾಗೃತಿ ಮೂಡಿಸಬೇಕು’ ಎಂದು ಸಲಹೆ ನೀಡಿದರು.

ತಹಶೀಲ್ದಾರ ಯರಿಸ್ವಾಮಿ ಪಿ.ಎಸ್. ಮಾತನಾಡಿ, ‘ಹಲವು ಕಾರಣಗಳಿಂದ ಇತ್ತೀಚೆಗೆ ಶುದ್ಧ ಆಮ್ಲಜನಕ ನೀಡುವ ಮರಗಳ ಸಂಖ್ಯೆ ಕ್ಷೀಣಿಸುತ್ತಿದ್ದು, ಎಲ್ಲರಲ್ಲಿ ಅನಾರೋಗ್ಯ ಹೆಚ್ಚಾಗುತ್ತದೆ. ಹೀಗಾಗಿ ನಾವೆಲ್ಲ ಸಸಿಗಳನ್ನು ನೆಟ್ಟು ಅವುಗಳನ್ನು ಬೆಳೆಸಬೇಕು’ ಎಂದು ತಿಳಿಸಿದರು.

ನೇತೃತ್ವ ವಹಿಸಿದ್ದ ಜಿಲ್ಲಾ ವನ್ಯಜೀವಿ ಪರಿಪಾಲಕ ಸಿ.ಎಸ್.ಅರಸನಾಳ ಮಾತನಾಡಿ, ‘ಪರಿಸರ ಸಂರಕ್ಷಿಸುವ ಕುರಿತಂತೆ ನಾವೆಲ್ಲ ಕೇವಲ ಸಸಿಗಳನ್ನು ನೆಟ್ಟರೆ ಮಾತ್ರ ಸಾಲದು. ನೆಟ್ಟ ಸಸಿಗಳನ್ನು ಮುತುವರ್ಜಿಯಿಂದ ಬೆಳೆಸಬೇಕು. ಆಗ ಮಾತ್ರ ಗಿಡ, ಮರಗಳ ಸಂಖ್ಯೆ ಹೆಚ್ಚಾಗುತ್ತದೆ’ ಎಂದರು.

ಪಟ್ಟಣದ ಜ್ಯಾಲವಾಡಿಗೆ ವೃತ್ತದಿಂದ ಆರಂಭವಾದ ಜಾಗೃತಿ ಜಾಥಾ, ಕೇಂದ್ರ ಬಸ್ ನಿಲ್ದಾಣ, ಹೆಸರೂರ ಕ್ರಾಸ್, ಕೊಪ್ಪಳ ವೃತ್ತ, ಜಾಗೃತ ವೃತ್ತ ಮಾರ್ಗವಾಗಿ ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನ ಮಠವರೆಗೆ ಸಾಗಿ ಮುಕ್ತಾಯಗೊಂಡಿತು.

ಪುರಸಭೆಯ ಅಧ್ಯಕ್ಷೆ ನಿರ್ಮಲಾ ಕೊರ್ಲಹಳ್ಳಿ, ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ಸ್ಥಾಯಿ ಕಮೀಟಿಯ ಅಧ್ಯಕ್ಷ ರಫಿಕ್ ಮುಲ್ಲಾ, ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ, ಅರಣ್ಯಾಧಿಕಾರಿ ಮಂಜುನಾಥ ಮೇಗಲಮನಿ, ಲಿಂಗರಾಜಗೌಡ ಪಾಟೀಲ, ಮುಖಂಡರಾದ ಕರಬಸಪ್ಪ ಹಂಚಿನಾಳ, ಡಾ.ಪಿ.ಹಿರೇಗೌಡರ, ಯು.ಸಿ.ಹಂಪಿಮಠ. ಡಾ.ಬಿ.ಜಿ.ಜವಳಿ, ಆರ್.ಎಲ್.ಪೊಲೀಸಪಾಟೀಲ, ಸಿ.ಡಿ.ಪಾಟೀಲ, ಎಂ.ಜಿ.ಗಚ್ಚಣ್ಣವರ, ಮಂಜುನಾಥ ಇಟಗಿ, ಮಂಜುನಾಥ ಮುಧೋಳ, ರವಿ ಪಾಟೀಲ, ದೇವು ಹಡಪದ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.