ಲಕ್ಷ್ಮೇಶ್ವರ: ತಾಲ್ಲೂಕಿನ ಶಿಗ್ಲಿ ಗ್ರಾಮದ ಸೂಗೀರಪ್ಪ ಅಜ್ಜಪ್ಪಶೆಟ್ಟರ ಎಂಬುವರು ಸ.ನಂ 125/1ರ ಜಮೀನಿನಲ್ಲಿರುವ ಒಂದು ಎಕರೆ ಗೋವಿನಜೋಳ ಬೆಳೆ ಸಾಕು ಹಂದಿಗಳ ಹಾವಳಿಯಿಂದ ಸಂಪೂರ್ಣ ಹಾಳಾಗಿದೆ.
ಹಂದಿಗಳ ಹಾವಳಿ ತಡೆಯಲು ಕ್ರಮಕೈಗೊಳ್ಳಬೇಕು ಎಂದು ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ರೈತರು ಮನವಿ ಸಲ್ಲಿಸಿದರೂ ಸಹ ಹಂದಿಗಳು ನಿಯಂತ್ರಣಕ್ಕೆ ಕ್ರಮ ಕೈಗೊಂಡಿಲ್ಲ ಎಂದು ರೈತರು ಆರೋಪಿಸಿದರು.
ಹಂದಿಗಳ ಕಾಟಕ್ಕೆ ನಮ್ಮ ಒಂದು ಎಕರೆ ಹೊಲದಲ್ಲಿನ ಗೋವಿನಜೋಳ ಹಾಳಾಗಿದೆ. ಎಕರೆಗೆ ₹25 ಸಾವಿರ ಖರ್ಚು ಮಾಡಿದ ನಮಗೆ ನಷ್ಟವಾಗಿದೆ. ಹೇಗಾದರೂ ಮಾಡಿ ಹಂದಿಗಳ ಕಾಟ ತಪ್ಪಿಸಬೇಕು’ ಎಂದು ರೈತ ಸೂಗೀರಪ್ಪ ಅಜ್ಜಪ್ಪಶೆಟ್ಟರ ಅವಲತ್ತುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.