ADVERTISEMENT

ಕಪ್ಪತಗುಡ್ಡಕ್ಕೆ ಮತ್ತೆ ಬೆಂಕಿ: ನೂರಾರು ಹೆಕ್ಟೇರ್‌ ಅರಣ್ಯ ಬೆಂಕಿಗೆ ಆಹುತಿ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2021, 4:12 IST
Last Updated 27 ಮಾರ್ಚ್ 2021, 4:12 IST
ಕಪ್ಪತಗುಡ್ಡಕ್ಕೆ ತಗುಲಿರುವ ಬೆಂಕಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ನಂದಿಸಿದರು.
ಕಪ್ಪತಗುಡ್ಡಕ್ಕೆ ತಗುಲಿರುವ ಬೆಂಕಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ನಂದಿಸಿದರು.   

ಡಂಬಳ (ಗದಗ): ಚಿಕ್ಕವಡ್ಡಟ್ಟಿ ವ್ಯಾಪ್ತಿಯ ಕಪ್ಪತಗುಡ್ಡದಲ್ಲಿ ಶು‌ಕ್ರವಾರ ಮಧ್ಯರಾತ್ರಿ ಎರಡು ಗಂಟೆ ಸುಮಾರಿಗೆ ಬೆಂಕಿ ತಗುಲಿದ್ದು, ನೂರಾರು ಹೆಕ್ಟೇರ್‌ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. 24 ಗಂಟೆಗಳ ನಂತರ ಬೆಂಕಿ ತಹಬದಿಗೆ ಬಂದಿದ್ದು ವಿವಿಧ ರೀತಿಯ ಗಿಡಮೂಲಿಕೆಯ ಸಸ್ಯಗಳು ನಾಶವಾಗಿವೆ.

ವರ್ಷದ ಆರಂಭದಿಂದ ಈವರೆಗೆ ಅಂದಾಜು 2 ಸಾವಿರ ಎಕರೆಗೂ ಅಧಿಕ ಅರಣ್ಯ ಪ್ರದೇಶ ನಾಶವಾಗಿದೆ. ಪದೇ ಪದೇ ಅರಣ್ಯ ಪ್ರದೇಶಕ್ಕೆ ಬೆಂಕಿ ಹಚ್ಚುವ ಪ್ರಕರಣಗಳು ನಡೆಯುತ್ತಿದ್ದರೂ, ಬೆಂಕಿ ಹಚ್ಚಿದ ಕಿಡಗೇಡಿಗಳ ಬಂಧನವಾಗಿಲ್ಲ ಎಂದು ಪರಿಸರವಾದಿಗಳು, ವಿವಿಧ ಸಂಘಟನೆ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ವೇಗವಾಗಿ ಗಾಳಿ ಬೀಸುತ್ತಿರುವುದರಿಂದ ಬೆಂಕಿ ವಿವಿಧ ಪ್ರದೇಶಗಳಿಗೆ ವ್ಯಾಪಿಸುತ್ತಿದೆ. ಬೆಂಕಿ ನಂದಿಸುವ ಕಾರ್ಯ ನಡೆದಿದೆ’ ಎಂದು ವಲಯ ಅರಣ್ಯಾಧಿಕಾರಿ ಪ್ರದೀಪ ಪವಾರ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.