ನರೇಗಲ್: ಯಜ್ಞೋಪವೀತ ಪರಮ ಪವಿತ್ರವಾದದ್ದು, ಪ್ರಜಾಪತಿಗಿಂತಲೂ ಮೊದಲೇ ಉತ್ಪನ್ನಗೊಂಡಿದ್ದು, ಆಯುಷ್ಯವನ್ನು ಹೆಚ್ಚಿಸುವಂತದ್ದು, ಮನುಷ್ಯನನ್ನು ಶುಭ್ರ ಮಾಡುವಂತದ್ದು, ಬಲ ಹಾಗೂ ತೇಜಸ್ಸನ್ನು ಹೆಚ್ಚಿಸುವಂತದ್ದು’ ಎಂದು ದತ್ತಾತ್ರೇಯ ದೇವಸ್ಥಾನ ಅರ್ಚಕ ಶ್ರೀವಲಭಶಾಸ್ತ್ರಿ ಸದರಜೋಶಿ ಹೇಳಿದರು.
ಪಟ್ಟಣದ ದತ್ತಾತ್ರೇಯ ದೇವಸ್ಥಾನದಲ್ಲಿ ಶನಿವಾರ ನಡೆದ ಶ್ರಾವಣಿ ಯಜ್ಞೋಪವೀತ ಧಾರಣೆ ಹಾಗೂ ಹೋಮದ ನೇತೃತ್ವ ವಹಿಸಿ ಅವರು ಮಾತನಾಡಿದರು.
‘ಯಜ್ಞೋಪವೀತ ಧಾರಣೆಗೆ ಸಂಸ್ಕೃತಿಯಲ್ಲಿ ವಿಶೇಷ ಮಹತ್ವವನ್ನು ನೀಡಲಾಗಿದೆ. ಅಂಗಡಿಯಿಂದ ತಂದ ಜನಿವಾರಕ್ಕೆ ಸಂಸ್ಕಾರ ಮಾಡಿ ಯಜ್ಞೋಪವೀತಾಭಿಮಾನಿ ದೇವತೆಗಳನ್ನು ಪೂಜಿಸಿ ಶ್ರದ್ಧಾ ಭಕ್ತಿಯಿಂದ ಧರಿಸಬೇಕು. ಜನಿವಾರ ಧರಿಸಿದ ಮೇಲೆ ಯಾವುದೇ ಕಾರಣಕ್ಕೂ ಧರಿಸದೇ ಬಿಡುವಂತಿಲ್ಲ’ ಎಂದರು.
ಅರುಣ ಕುಲಕರ್ಣಿ ಮಾತನಾಡಿ, ‘ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿ ಕೆಲವು ಆಚರಣೆಗಳನ್ನು ಮಾಡಲೇಬೇಕಾಗುತ್ತದೆ. ನಿತ್ಯವೂ ತ್ರಿಕಾಲ ಸಂದ್ಯಾವಂದನೆ, ಗಾಯತ್ರಿ ಮಂತ್ರ ಉಚ್ಛಾರಣೆ ಹಾಗೂ ಜನಿವಾರ ತುಂಡಾದರೆ ತಕ್ಷಣವೇ ಅದನ್ನು ಬದಲಿಸಬೇಕು’ ಎಂದರು.
ಅರುಣ ಗ್ರಾಮಪುರೋಹಿತ, ಆರ್.ಡಿ ಕುಲಕರ್ಣಿ, ನಾಗೇಶಭಟ್ಟ ಗ್ರಾಮಪುರೋಹಿತ, ಆನಂದ ಕುಲಕರ್ಣಿ, ಅಜೀತ ಕುಲಕರ್ಣಿ, ಪ್ರಶಾಂತ ಗ್ರಾಮಪುರೋಹಿತ, ಆನಂದ ಕಾಳೆ, ನಾಗರಾಜ ನಾಡಗೇರ, ರಾಮಕೃಷ್ಣ ಸದರಜೋಶಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.