ADVERTISEMENT

ಹಸಿರು ಸಸ್ಯ ಬೆಳೆಸುವ ಕಾರ್ಯಕ್ರಮಕ್ಕೆ  ಚಾಲನೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2019, 13:36 IST
Last Updated 13 ಸೆಪ್ಟೆಂಬರ್ 2019, 13:36 IST
ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದಲ್ಲಿ ಅರಣ್ಯ ಇಲಾಖೆಯಿಂದ ಹಸಿರು ಸಸ್ಯ ಬೆಳೆಸುವ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು
ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದಲ್ಲಿ ಅರಣ್ಯ ಇಲಾಖೆಯಿಂದ ಹಸಿರು ಸಸ್ಯ ಬೆಳೆಸುವ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು   

ನಾಪೋಕ್ಲು: ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದಲ್ಲಿ ಹಸಿರು ಸಸ್ಯ ಬೆಳೆಸುವ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

ಬ್ರಹ್ಮಗಿರಿ ಬೆಟ್ಟದಲ್ಲಿ ಬಿರುಕುಬಿಟ್ಟು ಅಪಾಯದ ಸ್ಥಿತಿ ತಲುಪಿರುವುದರಿಂದ ಅದರಲ್ಲಿ 2,000 ಹುಲ್ಲುಗಿಡಗಳನ್ನು ನೆಟ್ಟು ಪರಿಸರವನ್ನು ಸಂರಕ್ಷಿಸಲು ಯೋಜನೆ ರೂಪಿಸಲಾಗಿದೆ.

ತಮಿಳುನಾಡಿನ ವೆಟ್ರಿವೆರಾ ಹುಲ್ಲಿಗೆ ಭೂಸವಕಳಿ ತಡೆಯುವ ಶಕ್ತಿ ಇದ್ದು ಅದನ್ನು ಬ್ರಹ್ಮಗಿರಿ ಬೆಟ್ಟದಲ್ಲಿ ನೆಡಲು ನಿರ್ಧರಿಸಲಾಗಿದೆ. ಕಳೆದ ವರ್ಷ ಮಹಾಮಳೆಗೆ ತುತ್ತಾಗಿದ್ದ ಮಡಿಕೇರಿ ವ್ಯಾಪ್ತಿಯ ಗುಡ್ಡಗಳಿಗೆ ಮಣ್ಣುಜಾರದಂತೆ ಈ ಹುಲ್ಲನ್ನು ನೆಡಲಾಗಿತ್ತು. ತಮಿಳುನಾಡಿನಿಂದ ಅದರ ಸಸಿಮಡಿಗಳನ್ನು ಹಾಕತ್ತೂರಿನ ತೇಲಪಂಡ ಪ್ರಮೋದ್ ತಂದು 3 ಎಕರೆ ಪ್ರದೇಶದಲ್ಲಿ ಬೆಳೆಸಿದ್ದಾರೆ.

ADVERTISEMENT

ಹಸಿರು ಸಸ್ಯ ಬೆಳೆಸುವ ಕಾರ್ಯಕ್ರಮದಲ್ಲಿ ಕೊಡಗು ಸೇವಾ ಕೇಂದ್ರದ ಸದಸ್ಯರು, ಭಗಂಡೇಶ್ವರ - ತಲಕಾವೇರಿ ದೇವಸ್ಥಾನ ಸಮಿತಿ ಅಧ್ಯಕ್ಷ ಬಿದ್ದಾಟಂಡ ಎಸ್.ತಮ್ಮಯ್ಯ, ಆಡಳಿತ ಮಂಡಳಿ ಸದಸ್ಯರು, ಅರ್ಚಕರು, ಅರಣ್ಯ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.