ADVERTISEMENT

ಅರಣ್ಯ ಅಧಿಕಾರಿಗಳಿಂದ ಕಿರುಕುಳ: ಆರೋಪ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2012, 8:05 IST
Last Updated 21 ಏಪ್ರಿಲ್ 2012, 8:05 IST

ಹಾಸನ: `ತಮ್ಮ ವಿರುದ್ಧ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಕ್ಕಾಗಿ ಸಕಲೇಶಪುರ ಆರ್‌ಎಫ್‌ಓ ರತ್ನಪ್ರಭಾ ಹಾಗೂ ಫಾರೆಸ್ಟರ್ ಚಂದ್ರೇಗೌಡ ಅವರು ನನ್ನ ವಿರುದ್ಧ ಸೇಡಿನಿಂದ ಕಿರುಕುಳ ನೀಡುತ್ತಿದ್ದಾರೆ~ ಎಂದು ಅರಣ್ಯ ಇಲಾಖೆಯಲ್ಲಿ 25ವರ್ಷಗಳಿಂದ ಕೆಲಸ ಮಾಡುತ್ತಿರುವ ಸುರೇಶ ಎಂಬುವವರು ಆರೋಪಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಆರೋಪ ಮಾಡಿದರು.

`ಈ ಇಬ್ಬರು ಅಧಿಕಾರಿಗಳು ಅರಣ್ಯ ಲೂಟಿಮಾಡುತ್ತಿರುವುದನ್ನು ವಿರೋಧಿಸಿ ನಾನು ಲೋಕಾಯುಕ್ತರಿಗೆ ದೂರು ನೀಡಿದ್ದೆ, ಈ ಘಟನೆಯ ಬಳಿಕ ಅಧಿಕಾರಿಗಳು ನನಗೆ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸುತ್ತಿದ್ದಾರೆ. ವೇತನವನ್ನೂ ನೀಡುತ್ತಿಲ್ಲ. ನನ್ನ ಮೇಲೆ ಒಮ್ಮೆ ಹಲ್ಲೆಯೂ ನಡೆದಿತ್ತು.
 
ಆ ಬಗ್ಗೆ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ~ ಎಂದು ತಿಳಿಸಿದರು. ಈ ಬಗ್ಗೆ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರ ಬರೆದು ನನಗೆ ರಕ್ಷಣೆ ನೀಡಬೇಕು, ಹಾಸನಕ್ಕೆ ವರ್ಗಾವಣೆ ಮಾಡಬೇಕು ಹಾಗೂ ವೇತನ ಸಿಗುವಂತೆ ಮಾಡಬೇಕು ಎಂದು ಮನವಿ ಮಾಡಿದ್ದೇನೆ ಎಂದು ಸುರೇಶ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.