ADVERTISEMENT

ಉಡಸಲಮ್ಮ ದೇವಿ ರಥೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 4 ಜೂನ್ 2011, 6:10 IST
Last Updated 4 ಜೂನ್ 2011, 6:10 IST

ಅರಸೀಕೆರೆ: ತಾಲ್ಲೂಕಿನ ಅಗ್ಗುಂದ ಗ್ರಾಮದ ಹೊರವಲಯದ ತೋಟದಲ್ಲಿ ನೆಲೆಸಿರುವ ಉಡಸಲಮ್ಮ ದೇವಿ ರಥೋತ್ಸವ ಭಕ್ತರ ಸಡಗರ, ಸಂಭ್ರಮದಿಂದ ಈಚೆಗೆ ನಡೆಯಿತು.

ಗ್ರಾಮದ ಮಧ್ಯಭಾಗದಲ್ಲಿರುವ ದೇವಾಲಯದಲ್ಲಿ ಉತ್ಸವ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಿ ಬಂಡಿಹಳ್ಳಿಯ ರೇವಣಸಿದ್ದೇಶ್ವರ ಸ್ವಾಮಿ, ಸಿದ್ದರಹಳ್ಳಿಯ ಸಿದ್ದೇಶ್ವರ ಸ್ವಾಮಿ ಸಮ್ಮುಖದಲ್ಲಿ ಮಂಗಳ ವಾದ್ಯದೊಂದಿಗೆ ಗ್ರಾಮದ ರಸ್ತೆಗಳಲ್ಲಿ ಉತ್ಸವ ನೆರವೇರಿಸಿ ನಂತರ ಗ್ರಾಮದ ಹೊರಭಾಗದ ತೋಟದಲ್ಲಿ ನೆಲೆಸಿ ರುವ ಮೂಲ ಸನ್ನಿಧಿಗೆ ಕರೆದೊಯ್ಯಲಾಯಿತು.

ದೇವಾಲಯದಲ್ಲಿ ದೇವರುಗಳಿಗೆ ವಿಶೇಷ ಪೂಜೆ ನೆರವೇರಿಸಿ, ನಂತರ ಅಲಂಕೃತ ರಥದಲ್ಲಿ ಉಡುಸಲಮ್ಮ ದೇವಿ ಪ್ರತಿಷ್ಠಾಪಿಸಲಾಯಿತು. ಬಳಿಕ ಗ್ರಾಮದ ಎ.ಆರ್.ಚಂದ್ರಶೇಖರ್, ಎ.ಸಿ. ಮಹೇಶ್ವರಯ್ಯ, ಎ.ಎಂ. ಪ್ರಭು ಸ್ವಾಮಿ, ವೇಣುಗೋಪಾಲ್ ಇತರರು ರಥದ ಚಕ್ರಕ್ಕೆ ಪೂಜೆ ಸಲ್ಲಿಸಿ  ತೆಂಗಿನ ಕಾಯಿ ಒಡೆಯುತ್ತಿದ್ದಂತೆ ಭಕ್ತರು ಜಯಘೋಷ ಹಾಕಿ ರಥ ಎಳೆದರು.

ರಥ ಮುಂದಕ್ಕೆ ಚಲಿಸುತ್ತಿದ್ದಂತೆ ನೂತನ ವಧು-ವರರು, ಯುವಕರು ರಥದ ಕಲಶಕ್ಕೆ ಬಾಳೆಹಣ್ಣು, ದವನ, ಉತ್ತತ್ತಿ ತೂರಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.