ADVERTISEMENT

ಕಾಡಾನೆ ದಾಳಿ; ಬೆಳೆ ನಾಶ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2017, 9:02 IST
Last Updated 11 ಡಿಸೆಂಬರ್ 2017, 9:02 IST
ಹೆತ್ತೂರು ಹೋಬಳಿ ಅತ್ತಿಹಳ್ಳಿಯಲ್ಲಿ ಕಾಡಾನೆಗಳು ಓಡಾಡಿ ಭತ್ತದ ಬೆಳೆ ಹಾಳಾಗಿರುವುದು
ಹೆತ್ತೂರು ಹೋಬಳಿ ಅತ್ತಿಹಳ್ಳಿಯಲ್ಲಿ ಕಾಡಾನೆಗಳು ಓಡಾಡಿ ಭತ್ತದ ಬೆಳೆ ಹಾಳಾಗಿರುವುದು   

ಹೆತ್ತೂರು: ಕಾಡಾನೆಗಳ ದಾಂದಲೆ ಯಿಂದ ಭತ್ತದ ಪೈರುಗಳು ಹಾಳಾಗಿರುವ ಘಟನೆ ಹೆತ್ತೂರು ಹೋಬಳಿ ಅತ್ತಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಎ.ಎನ್.ಗಂಗಾಧರ ಅವರು ಬೆಳೆಯನ್ನು ಕಟ್ಟಾವು ಮಾಡಿ ಒಂದಡೆ ಕಣದಲ್ಲಿ ರಾಶಿ ಹಾಕಿದ ಭತ್ತದ ತೆನೆ ತಿನ್ನಲು ಹುಲ್ಲು ಎಳೆದಾಡಿವೆ.

ಹೋಬಳಿಯ ಹಾಡ್ಲಹಳ್ಳಿ, ಹೊಸಹಳ್ಳಿ, ನಡನಹಳ್ಳಿ, ಬೂಬ್ಬನಹಳ್ಳಿ, ಯಸಳೂರು ಹೋಬಳಿಯ ಹಳ್ಳಿಗದ್ದೆ ಗ್ರಾಮದ ಬಸವರಾಜು, ವೆಂಕಟೇಶ ಅವರ ಭತ್ತದ ಗದ್ದೆ, ಕಾಫಿ ತೋಟ, ಏಲಕ್ಕಿ ತೋಟಗಳಿಗೂ ನುಗ್ಗಿವೆ.

ADVERTISEMENT

ಆನೆಗಳು ಗ್ರಾಮದ ಆಸುಪಾಸಿ ನಲ್ಲಿಯೇ ಬೀಡುಬಿಟ್ಟಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಈ ಸಮಸ್ಯೆಗೆ ಶಾಶ್ವತ ಪರಿಹಾರ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

‘ಕಾಡಾನೆಗಳು ಬಂದಾಗ ಸಿಡಿಸಲು ಇಲಾಖೆ ಪಟಾಕಿ ಒದಗಿಸಿದೆ. ಸಿಡಿಸಿದಾಗ ತಕ್ಷಣಕ್ಕೆ ದೂರ ಹೋಗುತ್ತವೆ. ಮತ್ತೆ ಮರಳುತ್ತವೆ’ ಎಂದು ಕೃಷಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.