ADVERTISEMENT

ಕಾಮಗಾರಿ ವಿಳಂಬ: ಅಭಿವೃದ್ಧಿ ಕಾಣದ ಜಾಜೂರು

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2012, 11:10 IST
Last Updated 3 ಫೆಬ್ರುವರಿ 2012, 11:10 IST

ಅರಸೀಕೆರೆ: ಪಟ್ಟಣಕ್ಕೆ ಕೂಗಳತೆಯಲ್ಲಿರುವ ಜಾಜೂರು ಗ್ರಾಮವು, ಸುವರ್ಣ ಗ್ರಾಮ ಯೋಜನೆಗೆ ಆಯ್ಕೆಯಾಗಿದ್ದು, ಕಾಮಗಾರಿ ಆರಂಭವಾದರೂ ಭೂಸೇನಾ ನಿಗಮದ ವಿಳಂಬ ಧೋರಣೆಯಿಂದಾಗಿ ಕುಂಟುತ್ತಾ ಸಾಗಿದೆ.

ಜಾಜೂರು ಗ್ರಾಮದಲ್ಲಿ 400 ಕುಟುಂಬ ವಾಸ ಮಾಡುತ್ತಿದ್ದು, ಸರ್ಕಾರ ಸುವರ್ಣ ಗ್ರಾಮ ಯೋಜನೆಯಡಿ ಚರಂಡಿ ನಿರ್ಮಾಣ, ಡಾಂಬರ್ ರಸ್ತೆ, ಸೇತುವೆ ನಿರ್ಮಾಣ ಹಾಗೂ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ 41 ಲಕ್ಷ ರೂಪಾಯಿ ಮಂಜೂರು ಮಾಡಿದೆ. ಈ ಎಲ್ಲ ಕಾಮಗಾರಿಗಳ ನಿರ್ವಹಣೆಯನ್ನು ಭೂಸೇನಾ ನಿಗಮ ವಹಿಸಿಕೊಂಡಿದೆ.

ಮೊದಲ ಹಂತದಲ್ಲಿ ದಲಿತ ಕಾಲೋನಿಯಲ್ಲಿ ಚರಂಡಿ ನಿರ್ಮೀಸುವ ಕಾಮಗಾರಿಗೆ ಮುಂದಾದ ಅಧಿಕಾರಿಗಳು ಆರಂಭದಲ್ಲಿ ತ್ವರಿತವಾಗಿ ಮುಗಿಸಿ ಕೊಡುವುದಾಗಿ ಭರವಸೆ ನೀಡಿದ್ದರು. ಆದರೆ, ಚರಂಡಿ ಕಾಮಗಾರಿ ಆರಂಭಿಸಿ ಒಂದು ತಿಂಗಳು ಕಳೆದರೂ ಭೂಸೇನಾ ನಿಗಮದ ಅಧಿಕಾರಿಗಳು ಗ್ರಾಮದತ್ತ ಸುಳಿಯಲಿಲ್ಲ. ಕಾಲೋನಿಯಲ್ಲಿ ಚರಂಡಿಗಳಿಗಾಗಿ ಗುಂಡಿ ತೋಡಿ ಅದನ್ನೂ ಪೂರ್ಣಗೊಳಿಸದೇ, ಕಾಲೋನಿ ಜನರ ನಿತ್ಯ ಶಾಪಕ್ಕೆ ಗುರಿಯಾಗಿದೆ.

ಕೆಲವು ಕಡೆ ಚರಂಡಿ ನಿರ್ಮಾಣಕ್ಕಾಗಿ ಮನೆಯ ಮುಂಭಾಗದಲಿಯ್ಲೌ ಗುಂಡಿ ತೋಡಿ ಅಲ್ಲಿಗೆ ಕಾಂಕ್ರಿಟ್ ಹಾಕಿದ್ದರೂ ದಲಿತ ಕಾಲೋನಿಯಲ್ಲಿ ಮಾತ್ರ ಚರಂಡಿ ಗಾಗಿ ಗುಂಡಿ ಅಗೆದು ಕಾಂಕ್ರಿಟ್ ಹಾಕದೆ ಇರುವುದ ರಿಂದ ನೀರು ಸರಾಗವಾಗಿ ಹರಿಯದೆ ಮನೆಯ ಮುಂಭಾಗಗಳಲ್ಲಿಯೇ ನಿಂತು ದುರ್ವಾಸನೆ ಬೀರುತ್ತಿದೆ.

ಭೂಸೇನಾ ನಿಗಮ ನಿರ್ವಹಿಸುತ್ತಿರುವ ಕಾಮಗಾರಿ ಕಳಪೆ ಮಟ್ಟದ್ದಾಗಿದೆ ಎಂಬ ದೂರುಗಳೂ ಗ್ರಾಮಸ್ಥರ ದ್ದಾಗಿದೆ. ಅಲ್ಲದೇ ಭೂಸೇನಾ ನಿಗಮದಿಂದ ನಿರ್ವಹಿಸ ಲಾಗಿರುವ ಕಾಮಗಾರಿಗಳ ಬಗ್ಗೆ ಈ ಹಿಂದೆಯೇ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಸದಸ್ಯರು ಆಕ್ಷೇಪ ವ್ಯಕ್ತ ಪಡಿಸಿ ಇನ್ನು ಮುಂದೆ ಭೂ ಸೇನಾ ನಿಗಮಕ್ಕೆ ಕಾಮ ಗಾರಿಗಳನ್ನು ನೀಡಬಾರದು ಎಂಬ ನಿರ್ಣಯ ಕೈಗೊಂಡಿದ್ದರೂ ಮತ್ತೆ ಮತ್ತೆ ಆ ನಿಗಮಕ್ಕೆ ಕಾಮಗಾರಿ ನಿರ್ವಹಿಸಲು ಗುತ್ತಿಗೆ ನೀಡುತ್ತಿರುವುದು ಸೋಜಿಗ ಎನಿಸಿದೆ.

ಈ ಕುರಿತು ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯ ಸಿದ್ದೇಶ್, `ಗ್ರಾಮದೊಳಗೆ ಕಲುಷಿತ ನೀರು ಹರಿಯಬಾರದು ಎಂದು ಚರಂಡಿ ನಿರ್ಮಾಣದ ಕಾಮಗಾರಿಗೆ ಕ್ರಿಯಾಯೋಜನೆ ರೂಪಿಸಿದ್ದೆವು. ಆದರೆ ಗ್ರಾಮದ ಕೊನೆಯ ಭಾಗದವರೆಗೂ ಚರಂಡಿ ನಿರ್ಮಾಣದ ಕಾಮಗಾರಿ ಮುಗಿಯುವ ಹಂತ ದಲ್ಲಿದ್ದಾಗ ಕೆಲವರು ಚರಂಡಿ ನಿರ್ಮಾಣಕ್ಕೆ ಅಡ್ಡಿಪಡಿ ಸಿದ್ದರಿಂದ ಕಾಮಗಾರಿ ನೆನೆಗುದಿಗೆ ಬೀಳಲು ಕಾರಣ ವಾಗಿದೆ.
 
ಈಗ ಚರಂಡಿ ಕಾಮಗಾರಿ ಮುಂದುವರಿಸಲು ಚರಂಡಿ ಪಕ್ಕದಲ್ಲಿರುವ ಮನೆಯವರ ಅನುಮತಿ ಬೇಕಿದ್ದು. ಅವರು ಸಮ್ಮತಿಸಿದರೆ ನಾಳೆಯೇ ಕಾಮಗಾರಿ ಯನ್ನು ಅಧಿಕಾರಿಗಳು ಮುಗಿಸಲಿದ್ದಾರೆ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.