ADVERTISEMENT

`ಕುರಾನ್ ಪಠಣದಿಂದ ಮನಸ್ಸು ಶುಭ್ರ'

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2013, 5:38 IST
Last Updated 6 ಆಗಸ್ಟ್ 2013, 5:38 IST

ಆಲೂರು: `ಮನಸ್ಸು ಶುಭ್ರವಾಗಿರ ಬೇಕಾದರೆ ಪವಿತ್ರಗ್ರಂಥ ಖುರಾನ್ ಪಠಣ ಮಾಡಿ' ಎಂದು ಆಲೂರು ಜಾಮೀಯಾ ಮಸೀದಿ ಅಧ್ಯಕ್ಷರಾದ ಜನಾಬ್ ಅಲ್ತಾಫ್ ಹುಸೇನ್ ಹೇಳಿದರು.

ಪಟ್ಟಣದ ಶಬಾನ ಸಾಮಿಲ್ ಆವರನದಲ್ಲಿ ಜಮಾತೆ ಇಸ್ಲಾಮಿಯಾ ಹಿಂದ್ ಹ್ಯೂಮ್ಯಾನಿಟಿ ಟ್ರಸ್ಟ್ ಆಲೂರು ಶಾಖೆ ವತಿಯಿಂದ ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಬಡಕುಟುಂಬಗಳಿಗೆ ಭಾನುವಾರ ಏರ್ಪಡಿಸಿದ್ದ ಆಹಾರ ಸಾಮಾಗ್ರಿಗಳ ಕಿಟ್ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಂಜಾನ್ ತಿಂಗಳು ಮಹಮ್ಮದಿ ಯರಿಗೆ ಪವಿತ್ರ ತಿಂಗಳಾಗಿದ್ದು ಎಲ್ಲಾ ಧರ್ಮೀಯರೊಂದಿಗೆ ಸ್ನೇಹ ಸೌಹಾ ರ್ದತೆ ಜೀವನ ನಡೆಸುವ ಮೂಲಕ ರಾಷ್ಟ್ರದ ಪ್ರಗತಿಗೆ ಹಾಗೂ ಶಾಂತಿಗೆ ಪ್ರತಿಯೊಬ್ಬರು ಸಹಕರಿಸುವ ಉದ್ದೇಶ ಹೊಂದಬೇಕು ಎಂದರು.

ಜಮಾತೆ ಇಸ್ಲಾಮಿಯಾ ಹಿಂದ್ ಆಲೂರು ಶಾಖಾ ಅಧ್ಯಕ್ಷರಾದ ಜನಾಬ್ ಶಂಶೀರ್‌ಪಾಶ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಮಾತೆ ಇಸ್ಲಾಮಿಯಾ ಹಿಂದ್ ಹ್ಯೂಮ್ಯಾನಿಟಿ ಟ್ರಸ್ಟ್ ವತಿಯಿಂದ ಭಾರತದ ಮೂಲೆ ಮೂಲೆಗಳಲ್ಲಿ ವಾಸಿಸುವ ಮುಸ್ಲಿಂ ಬಡಕುಟುಂಗಳಿಗೆ ಪವಿತ್ರ ರಂಜಾನ್ ತಿಂಗಳಲ್ಲಿ ಆಹಾರ ಸಾಮಾಗ್ರಿಗಳ ಕಿಟ್ ಅಂದರೆ ಒಂದು ಕುಟುಂಬಕ್ಕೆ ರೂಪಾಯಿ 1250 ಬೆಲೆಯುಳ್ಳದ್ದನ್ನು ಹಂಚಲಾಗುತ್ತಿದ್ದು ಆಲೂರು ತಾಲ್ಲೂಕಿನಲ್ಲಿ 20ಕುಟುಂಬಗಳಿಗೆ 25ಸಾವಿರ ರೂಗಳ ಕಿಟ್ ವಿತರಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯ್ತಿ ಸದಸ್ಯ ಸೈಯ್ಯದ್ ಜಾಫರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.