ADVERTISEMENT

ಕೊಳೆಗೇರಿ ಸಮೀಕ್ಷೆಗೆ ಶಾಸಕರಿಂದ ಅಡ್ಡಿ: ಆರೋಪ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2012, 6:31 IST
Last Updated 7 ಡಿಸೆಂಬರ್ 2012, 6:31 IST

ಹಾಸನ: ರಾಜ್ಯ ಸರ್ಕಾರದ ಆದೇಶ ದಂತೆ ಕೊಳಚೆ ಪ್ರದೇಶದ ನಿವಾಸಿಗಳಿಗೆ ಹಕ್ಕು ಪತ್ರ ನೀಡುವ ಸಂಬಂಧ ಸಮೀಕ್ಷೆ ನಡೆಸುತ್ತಿದ್ದ ಸ್ಲಂಬೋರ್ಡ್ ಅಧಿಕಾರಿ ಗಳನ್ನು ಶಾಸಕ ಎಚ್.ಎಸ್. ಪ್ರಕಾಶ್ ಹಾಗೂ ಅವರ ಸಹೋದರ ಡಾ. ಅನಿಲ್ ಕುಮಾರ್ ಅಡ್ಡಿಪಡಿಸುತ್ತಿ ದ್ದಾರೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಕುಮಾರ್ ಆರೋಪಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು `ಕೊಳೆಗೇರಿಗಳ ಸರ್ವೆ ನಡೆಸಿ ಆ ಭಾಗದ ಜನರಿಗೆ ಹಕ್ಕುಪತ್ರ ವಿತರಣೆ ಮಾಡುವಂತೆ ಸರ್ಕಾರ ಆದೇಶ ನೀಡಿತ್ತು. ಆರಂಭಿಕ ಹಂತವಾಗಿ ನಗರದ ಸಿದ್ದಯ್ಯನಗರ ಮತ್ತು ಅಂಬೇಡ್ಕರ್ ನಗರದಲ್ಲಿರುವ 350 ಕುಟುಂಬಗಳ ಸಮೀಕ್ಷೆಕಾರ್ಯ ನಡೆಸುತ್ತಿದ್ದ ಅಧಿಕಾರಿಗಳಿಗೆ ಶಾಸಕ ಎಚ್.ಎಸ್. ಪ್ರಕಾಶ್ ಮತ್ತು ಸಹೋದರ ನಗರಸಭಾ ಸದಸ್ಯ ಡಾ.ಅನಿಲ್ ಕುಮಾರ್ ಅಧಿಕಾರಿಗಳಿಗೆ ಸಮೀಕ್ಷೆ ನಡೆಸದಂತೆ ಬೆದರಿಕೆ ಹಾಕಿ ್ದದಾರೆ ಎಂದು ದೂರಿದರು.

ಹಕ್ಕುಪತ್ರ ನೀಡುವ ವಿಷಯದಲ್ಲಿ ರಾಜಕೀಯ ಮಾಡದೆ ಅಧಿಕಾರಿಗಳಾಗಿ ಸರ್ವೆ ಕಾರ್ಯ ನಡೆಸಲು ಅನುವು ಮಾಡಿಕೊಡಬೇಕು ಎಂದು  ಆಗ್ರಹಿಸಿದ ರು. ಬಿಜೆಪಿ ಮುಖಂಡರಾದ ಲೋಹಿತ್ ಂದೂರು, ಮಂಜುನಾಥಮೋರೆ, ಜೈ ಶಂಕರ್, ಜೈ ಶೇಖರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.