ADVERTISEMENT

ಕೋಳಿ ಸಾಕಣೆ ಸ್ವಾವಲಂಬನೆ ರಹದಾರಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2012, 5:50 IST
Last Updated 20 ಅಕ್ಟೋಬರ್ 2012, 5:50 IST
ಕೋಳಿ ಸಾಕಣೆ ಸ್ವಾವಲಂಬನೆ ರಹದಾರಿ
ಕೋಳಿ ಸಾಕಣೆ ಸ್ವಾವಲಂಬನೆ ರಹದಾರಿ   

ಹಾಸನ: ಇಲ್ಲಿನ ಪಶುವೈದ್ಯಕೀಯ ಕಾಲೇಜಿನ ಜಾನುವಾರು ಉತ್ಪಾದನಾ ನಿರ್ವಹಣೆ ಹಾಗೂ ವಿಸ್ತರಣಾ ಶಿಕ್ಷಣ ಕೇಂದ್ರದದ ಆಶ್ರಯದಲ್ಲಿ ಗುರುವಾರ `ಆಧುನಿಕ ಕೋಳಿ ಸಾಕಾಣಿಕೆ ತರಬೇತಿ~ ಹಮ್ಮಿಕೊಳ್ಳಲಾಯಿತು.
ತರಬೇತಿಯನ್ನು ಉದ್ಘಾಟಿಸಿ ಮಾತಾನಾಡಿದ ಪಶುವೈದ್ಯಕೀಯ ಕಾಲೇಜಿನ ಡೀನ್ ಪ್ರೊ. ಎಂ. ಎಸ್. ವಸಂತ್, `ಸುಧಾರಿತ ಕೋಳಿ ಸಾಕುವುದರಿಂದ ರೈತರು ಸ್ವಾವಲಂಬಿಗಳಾಗಬಹುದು ಜತೆಗೆ ನಾಟಿ ಕೋಳಿಗಳ ಗುಣಮಟ್ಟ ಹೆಚ್ಚಿಸಬಹುದು.

ಪಶುವೈದ್ಯ ಕಾಲೇಜು, ಬೋಧನೆ ಮಾತ್ರವಲ್ಲದೆ ವಿಸ್ತರಣೆಗಾಗಿ ಹೆಚ್ಚಿನ ಗಮನ ಕೊಡುತ್ತಿದೆ. ಇದರ ಅಂಗವಾಗಿ ಸುಧಾರಿತ ಕೋಳಿಗಳನ್ನು ವಿತರಣೆ ಮಾಡಲಾಗುತ್ತಿದೆ. ರೈತರು ಕೋಳಿ ಸಾಕಾಣಿಕೆಗೆ ಮುಂದೆಬಂದರೆ ಕಾಲೇಜಿನಿಂದ ಎಲ್ಲ ತಾಂತ್ರಿಕ ಸವಲತ್ತು ನೀಡಲಾಗುವುದು~ ಎಂದರು.

ಜಾನುವಾರು ಉತ್ಪಾದನಾ ನಿರ್ವಹಣೆ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಎಚ್.ಸಿ. ಇಂದ್ರೇಶ್ ಸ್ವಾಗತಿಸಿದರು. ಡಾ. ಎಂ.ಸಿ ಶಿವಕುಮಾರ್‌ಪ್ರಾಸ್ತಾವಿಕ ಮಾತನಾಡಿದರು. ಕಾಲೇಜಿನ ಸುತ್ತಮುತ್ತಲಿನ ಸ್ವಸಹಾಯ ಸ್ತ್ರೀಶಕ್ತಿ ಸಂಘದ 47 ಮಹಿಳಾ ಸದಸ್ಯರುಗಳಿಗೆ ಗಿರಿರಾಜ ಕೋಳಿಗಳನ್ನು ವಿತರಿಸಲಾಯಿತು.

ತರಬೇತಿ ಅಂಗವಾಗಿ ಕೋಳಿಮರಿಗಳ ಪಾಲನೆ ಮತ್ತು ಕೋಳಿ ಫಾರ್ಮ್ ನಿರ್ವಹಣೆ ಬಗ್ಗೆ  ಡಾ.ಎಚ್.ಸಿ. ಇಂದ್ರೇಶ್ ಮಾತಾನಾಡಿದರು. ಡಾ.ಮಹದೇವಪ್ಪ ಗೌರಿ ಕೋಳಿ ತಳಿಗಳ ಬಗ್ಗೆ, ಡಾ. ಬಿ.ಎನ್. ಸುರೇಶ್ ಕೋಳಿ ಆಹಾರಗಳ ನಿರ್ವಹಣೆ ಬಗ್ಗೆ, ಡಾ.ಎಸ್.ಬಿ. ಪ್ರಸನ್ನ ಕೋಳಿಗಳಿಗೆ ಲಸಿಕೆ ಕಾರ್ಯಕ್ರದ ಬಗ್ಗೆ ಹಾಗೂ ಡಾ.ಆರ್ ಗುರುಪ್ರಸಾದ್ ಹಿತ್ತಲು ಕೋಳಿ ಸಾಕಾಣೆ ಬಗ್ಗೆ ಉಪನ್ಯಾಸ ನೀಡಿದರು. ಡಾ. ಎಲ್ ಮಂಜುನಾಥ್ ಹಾಗು ರೂಪಾ ಟಿ.ಕೆ. ಕಾರ್ಯಕ್ರಮ ನಿರೂಪಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT