ADVERTISEMENT

ಚಾಟ್ ಸೆಂಟರ್ ಹಪ್ಪಳಕ್ಕೆ ಮನಸೋತ ರೇವಣ್ಣ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2011, 10:15 IST
Last Updated 20 ಮಾರ್ಚ್ 2011, 10:15 IST

ಹೊಳೆನರಸೀಪುರ: ಸದಾ ರಾಜಕೀಯ, ಸಭೆ, ಸಮಾರಂಭ, ಹೋರಾಟದಲ್ಲಿ ನಿರತರಾಗಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ ರೇವಣ್ಣ ಜಾತ್ರೆ ಹಿಂದಿನ ದಿನ ಗುರುವಾರ ರಾಜಕೀಯ ಜಂಜಾಟ ಬಿಟ್ಟು ಪತ್ನಿ ಭವಾನಿ, ಅಕ್ಕ ಅನುಸೂಯ, ತಾಯಿ ಚೆನ್ನಮ್ಮನವರೊಂದಿಗೆ ಬಯಲು ರಂಗಮಂದಿರದ ಜಾತ್ರೆಯ ಚಾಟ್ ಸೆಂಟರ್‌ಗೆ ಭೇಟಿ ನೀಡಿ ಮೆಣಸಿನಕಾಯಿ ಬಜ್ಜಿ, ಹಪ್ಪಳ, ಪಾನಿಪೂರಿ, ಚರುಮುರಿ ತಿಂದರು.

ತಾಯಿ ಚನ್ನಪ್ಪ “ಏ ರೇವಣ್ಣ ಸಿಕ್ಕಿದೆಲ್ಲಾ ತಿನ್‌ಬೇಡ. ನಿನ್‌ಹೊಟ್ಟೆ ನೂಡು ಎಷ್ಟು ದಪ್ಪ ಇದೆ ಎಂದರೆ’ ತಗೂ ನೀನು ತಿನ್ನು ಹಪ್ಪಳ ಚೆನ್ನಾಗಿದೆ ಎಂದರು.ನಂತರ ‘ಒಂಚೂರು ಹಪ್ಪಳ ಮುರಿದು ಅಮ್ಮನಿಗೆ ಕೊಡೆ ಭವಾನಿ’ ಎಂದಾಗ ಭವಾನಿ ಅವರು ನೀಡಿದ ಹಪ್ಪಳದ ರುಚಿಯನ್ನು ಸವಿದರು ಚನ್ನಮ್ಮ. ಇತ್ತ ಚಾಟ್ ಸೆಂಟರ್ ಅಂಗಡಿ ಮಾಲೀಕನಿಗೆ ಸಂಭ್ರಮವೋ ಸಂಭ್ರಮ. ಮಾಜಿ ಪ್ರಧಾನಿಯವರ ಮಡದಿ ನಮ್ಮ ಅಂಗಡಿಗೆ ಬಂದಿದ್ದಾರೆ ಎಂದು ಸಾರ್ ಪಾನಿಪೂರಿ, ಮಸಾಲೊಡೆ, ಪೂರಿಯನ್ನೂ ನೀಡಿದ. ಇಷ್ಟಲ್ಲಾ ಆದ ನಂತರ ಹಣ ತೆಗೆದುಕೊಳ್ಳಲು ಆತ ನಿರಾಕರಿಸಿದ. ಭವಾನಿ ಆತನಿಗೆ ಗದರಿ ಹಣ ನೀಡಿದರು. ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಟಿ. ಮಲ್ಲೇಶ್, ಸದಸ್ಯ ಎಚ್.ವಿ. ಪುಟ್ಟರಾಜು ಜೊತೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.