ADVERTISEMENT

ಜಿಲ್ಲೆಯಲ್ಲಿ ಶೇ 83.42ರಷ್ಟು ಮತದಾನ

ಶಾಂತಿಯುತ ದಕ್ಷಿಣ ಶಿಕಕ್ಷರ ಕ್ಷೇತ್ರದ ಚುನಾವಣೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2018, 10:52 IST
Last Updated 9 ಜೂನ್ 2018, 10:52 IST
ಹಾಸನ ನಗರದ ಬಾಲಕರ ಸರ್ಕಾರಿ ಪ್ರೌಢ ಶಾಲೆ ಮತಗಟ್ಟೆಯಲ್ಲಿ ಮತದಾನ ಮಾಡಲು ನಿಂತಿರುವ ಶಿಕ್ಷಕರು
ಹಾಸನ ನಗರದ ಬಾಲಕರ ಸರ್ಕಾರಿ ಪ್ರೌಢ ಶಾಲೆ ಮತಗಟ್ಟೆಯಲ್ಲಿ ಮತದಾನ ಮಾಡಲು ನಿಂತಿರುವ ಶಿಕ್ಷಕರು   

‌ಹಾಸನ: ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನಡೆಯುವ ದ್ವೈವಾರ್ಷಿಕ ಚುನಾವಣೆ ಶುಕ್ರವಾರ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ಜಿಲ್ಲೆಯಲ್ಲಿ ಶೇಕಡಾ 83.42 ರಷ್ಟು ಮತದಾನವಾಗಿದೆ.

ಕ್ಷೇತ್ರದ ವ್ಯಾಪ್ತಿಗೆ ಚಾಮರಾಜನಗರ, ಮೈಸೂರು, ಮಂಡ್ಯ ಮತ್ತು ಹಾಸನ ಜಿಲ್ಲೆಗಳು ಸೇರುತ್ತವೆ. ರಾಜ್ಯದಲ್ಲಿ ಜೆಡಿಎಸ್–ಕಾಂಗ್ರೆಸ್‌ ಮೈತ್ರಿ ಸರ್ಕಾರವಿದ್ದರೂ ಈ ಚುನಾವಣೆಯಲ್ಲಿ ಎರಡು ಪಕ್ಷಗಳು ಪರಸ್ಪರ ಎದುರಾಳಿಗಳಾಗಿದ್ದವು.

ಮೂರು ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಅವರ ಬೆಂಬಲಿಗರು ಮತ್ತು ಕಾರ್ಯಕರ್ತರು ಮತದಾರರನ್ನು ಮನವೊಲಿಸುತ್ತಿರುವ ದೃಶ್ಯ ಕಂಡು ಬಂತು. 

ADVERTISEMENT

ಜಿಲ್ಲೆಯಲ್ಲಿ ಒಟ್ಟು 4277 ಮತದಾರರಿದ್ದು, 10 ಮತದಾನ ಕೇಂದ್ರ ಸ್ಥಾಪಿಸಲಾಗಿತ್ತು. 2428 ಪುರುಷ ಹಾಗೂ 1141 ಮಹಿಳಾ ಮತದಾರರು ಮತ ಚಲಾಯಿಸಿದರು.

ಬೇಲೂರಿನಲ್ಲಿ ಶೇ 86.42, ಅರಸೀಕೆರೆಯಲ್ಲಿ ಶೇ 88.94, ಚನ್ನರಾಯಪಟ್ಟಣ ಶೇ 85.38, ಹಾಸನ ಪೂರ್ವದಲ್ಲಿ ಶೇ 83.25, ಹಾಸನ ಪಶ್ಚಿಮದಲ್ಲಿ ಶೇ 79.10, ಹಾಸನ ಗ್ರಾಮಾಂತರದಲ್ಲಿ ಶೇ. 82.27 ಮತದಾನವಾಗಿದೆ.

ಆಲೂರಿನಲ್ಲಿ ಶೇ 89.80, ಸಕಲೇಶಪುರದಲ್ಲಿ ಶೇ 77.30, ಅರಕಲಗೂಡಿನಲ್ಲಿ ಶೇ 83.25, ಹೊಳೆನರಸೀಪುರದಲ್ಲಿ ಶೇ 79.53 ರಷ್ಟು ಮತದಾನವಾಗಿದೆ.  ಹಲವು ಶಿಕ್ಷಕರ ಹೆಸರಗಳು ಪಟ್ಟಿಯಲ್ಲಿ ಇಲ್ಲದೆ ಇರುವುದಕ್ಕೆ ಕಾರಣಕ್ಕೆ ಬೇಸರದಿಂದ ವಾಪಸ್‌ ಹೋದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.