ADVERTISEMENT

ನರಸಿಂಹರಾಜು ಮಂದಿರ ಸಾಕಾರಕ್ಕೆ ಬದ್ಧ

​ಪ್ರಜಾವಾಣಿ ವಾರ್ತೆ
Published 15 ಜುಲೈ 2013, 8:57 IST
Last Updated 15 ಜುಲೈ 2013, 8:57 IST

ತಿಪಟೂರು: ನಗರದಲ್ಲಿ ನಿರ್ಮಾಣವಾಗುತ್ತಿರುವ ಹಾಸ್ಯಚಕ್ರವರ್ತಿ ದಿ.ನರಸಿಂಹರಾಜು ಕಲಾ ಮಂದಿರ ಪೂರ್ಣಗೊಳಿಸಲು ಸರ್ಕಾರದಿಂದ ಅನುದಾನ ತರಲು ಬದ್ಧವಾಗಿದ್ದೇನೆ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.

ಕಲ್ಪಶ್ರೀ ಕಲಾವಿದರ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಗರದ ಹಳೇಪಾಳ್ಯದಲ್ಲಿ ಭಾನುವಾರ ನಡೆದ ರಂಗಗೀತೆ, ಏಕಪಾತ್ರಾಭಿನಯ, ಪೌರಾಣಿಕ ರಂಗ ದೃಶ್ಯಾವಳಿ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ಈ ಬಜೆಟ್‌ನಲ್ಲಿ ಅನುದಾನ ದೊರಕಿಸಲು ಸರ್ಕಾರದ ಮಟ್ಟದಲ್ಲಿ ಗರಿಷ್ಠ ಪ್ರಯತ್ನ ಹಾಕಿದ್ದು ನಿಜ. ಕಾಲ ಮಿಂಚಿದ್ದರಿಂದ ಸಾಧ್ಯವಾಗಲಿಲ್ಲ ಎಂದರು.

ಅಗತ್ಯ ಅನುದಾನ ನೀಡುವುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಭರವಸೆ ನೀಡಿದ್ದಾರೆ. ಬಜೆಟ್ ಮೇಲೆ ಚರ್ಚೆ ನಡೆದ ನಂತರ ಪೂರಕವಾಗಿ ಇದಕ್ಕೆ ಅನುದಾನ ಕೊಡಲು ಮುಖ್ಯಮಂತ್ರಿ ಅವರಿಗೆ ಒತ್ತಡ ಹಾಕುತ್ತೇನೆ. ಕಲ್ಪಶ್ರೀ ಕಲಾಸಂಘಕ್ಕೆ ನಗರದ ನಿವೇಶನ ಒದಗಿಸಲು ಕೂಡ ಪ್ರಯತ್ನಿಸುವೆ ಎಂದು ತಿಳಿಸಿದರು.

ಗುರುಕುಲಾನಂದಾಶ್ರಮದ ಇಮ್ಮಡಿ ಕರಿಬಸವದೇಶಿಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ಕಲ್ಪಶ್ರೀ ಕಲಾಸಂಘದ ಅಧ್ಯಕ್ಷ ಎಚ್.ಟಿ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಕಲಾವಿದರಾದ ಹೇಮಲತಾ, ಸುಮಿತ್ರಮ್ಮ, ಅರಳಗುಪ್ಪೆ ನಂಜಪ್ಪ ಮತ್ತಿತರರು ಇದ್ದರು.

ಕೆ.ರಾಮಯ್ಯ ಪ್ರಾಸ್ತಾವಿಕ ಮಾತನಾಡಿದರು. ಜಯರಾಂ ನಿರೂಪಿಸಿದರು. ಲಿಂಗದೇವರು ವಂದಿಸಿದರು. ವಿವಿಧೆಡೆಯ ಕಲಾವಿದರು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.