ADVERTISEMENT

ನವಿಲೆ ದೇಗುಲ: ಅಭಿವೃದ್ಧಿ ಕಾಮಗಾರಿ ಆರಂಭ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2012, 6:25 IST
Last Updated 17 ಏಪ್ರಿಲ್ 2012, 6:25 IST

ಚನ್ನರಾಯಪಟ್ಟಣ: ನವಿಲೆಯ ನಾಗೇಶ್ವರ ದೇಗುಲದ ಭಕ್ತರಿಂದ 18 ಲಕ್ಷ ರೂಪಾಯಿ ಸಂಗ್ರಹಿಸಲಾಗಿದ್ದು, ಇದನ್ನು ಕ್ಷೇತ್ರದ ಅಭಿವೃದ್ಧಿಗೆ ವಿನಿಯೋ ಗಿಸಲಾಗುವುದು ಎಂದು  ತಹಶೀಲ್ದಾರ್ ಬಿ.ಎನ್. ವರಪ್ರಸಾದರೆಡ್ಡಿ ಸೋಮವಾರ ತಿಳಿಸಿದರು.

ನಾಗರನವಿಲೆ ನಾಗೇಶ್ವರಸ್ವಾಮಿಯ ದೇಗುಲದ ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನಾ
ಸಮಾರಂಭದಲ್ಲಿ ಮಾತನಾಡಿದರು.

ಭಕ್ತರು 20 ಕೆ.ಜಿ. ಬೆಳ್ಳಿ ನೀಡಿದ್ದಾರೆ. ಅದರಲ್ಲಿ ದೇವರಿಗೆ ಬೆಳ್ಳಿ ಕವಚ ನಿರ್ಮಿಸಲಾಗುವುದು. ಈ ಹಿಂದೆ ಪ್ರತಿ ಸೋಮವಾರ ಕ್ಷೇತ್ರದಲ್ಲಿ ದಾಸೋಹ ಏರ್ಪಡಿಸಲಾಗಿತ್ತು. ಈಚೆಗೆ ಪ್ರತಿದಿನ ದಾಸೋಹ ಏರ್ಪಡಿಸಲಾಗುತ್ತಿದೆ ಎಂದರು.

ಶಾಸಕ ಸಿ.ಎಸ್. ಪುಟ್ಟೇಗೌಡ ಮಾತನಾಡಿ, ದ್ವೇಷ, ಅಸೂಯೆ ತೊರೆದು ಪರಸ್ಪರ ಸೌಹಾರ್ದತೆಯಿಂದ  ಬಾಳಬೇಕು ಎಂದು ತಿಳಿಸಿದರು.

ಆದಿಚುಂಚನಗಿರಿ ಶಾಖಾ ಮಠಾಧೀಶ ಶಂಭುನಾಥ ಸ್ವಾಮೀಜಿ ಆಶೀರ್ವಚನ ನೀಡಿದದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರಂಗಮ್ಮ ರಾಮಕೃಷ್ಣೇಗೌಡ, ಮಾಜಿ ಅಧ್ಯಕ್ಷೆ ವಿಜಯಶಿವಲಿಂಗಪ್ಪ, ಹೂಡ ಅಧ್ಯಕ್ಷ ನವಿಲೆ ಅಣ್ಣಪ್ಪ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪಟೇಲ್ ಮಂಜುನಾಥ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಂ.ಎ. ರಂಗಸ್ವಾಮಿ, ಶಿವಶಂಕರ್ ಕುಂಟೆ, ಎನ್.ಡಿ. ಕಿಶೋರ್, ತಗಡೂರು ಶಿವಾನಂದ್, ಪರಮೇಶ್, ನಾಗಪ್ಪ, ಪುಟ್ಟರಾಜು ಇದ್ದರು. ತಹಶೀಲ್ದಾರ್ ಬಿ.ಎನ್. ವರಪ್ರಸಾದರೆಡ್ಡಿ, ಸಿ.ಎನ್. ಅಶೋಕ್, ಸಚ್ಚಿನ್, ಎ.ಎಂ. ಜಯರಾಂ ಅವರನ್ನು ಸನ್ಮಾನಿಸಲಾಯಿತು.   ಇದೆವೇಳೆ, ನಾಗೇಶ್ವರ ಸ್ವಾಮಿ ಕುರಿತು ಪುಸ್ತಕ ಬಿಡುಗಡೆ ಮಾಡಲಾಯಿತು.

ಪದಾಧಿಕಾರಿಗಳ ಆಯ್ಕೆ
ಅರಕಲಗೂಡು: ತಾಲ್ಲೂಕು ಮಾದಿಗ ದಂಡೋರ ಸಮಿತಿ ಸದಸ್ಯರು ಇತ್ತೀಚೆಗೆ ಜಿಲ್ಲಾ ಅಧ್ಯಕ್ಷ ಮಹೇಶ್ ಸಮ್ಮುಖದಲ್ಲಿ ಸಭೆ ಸೇರಿ ಕೆಳಕಂಡವರನ್ನು ತಾಲ್ಲೂಕು ಘಟಕಕ್ಕೆ ಆಯ್ಕೆ ಮಾಡಿದರು.

ಬಸವರಾಜ್ ಅಧ್ಯಕ್ಷ, ಅಣ್ಣಾಜಣ್ಣ ಗೌರವ ಅಧ್ಯಕ್ಷ, ರಾಜಣ್ಣ ಉಪಾಧ್ಯಕ್ಷ, ಎಸ್.ಟಿ. ವೆಂಕಟೇಶ್ ಕಾರ್ಯದರ್ಶಿ, ದಾಸಣ್ಣ ಪ್ರಧಾನ ಕಾರ್ಯದರ್ಶಿ, ಸಿದ್ದಣ್ಣ ಉಪಪ್ರಧಾನ ಕಾರ್ಯದರ್ಶಿ, ವಿಜಯಕುಮಾರ್ ಸಂಘಟನಾ ಸಂಚಾಲಕ, ಚಂದ್ರು ಖಜಾಂಚಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.