ADVERTISEMENT

ಮಕ್ಕಳಿಗೆ ಸಂಸ್ಕಾರವೂ ಮುಖ್ಯ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 6:10 IST
Last Updated 6 ಫೆಬ್ರುವರಿ 2012, 6:10 IST

ಹಾಸನ: `ಪೋಷಕರು ಮಕ್ಕಳಿಗೆ ವಿದ್ಯಾಭ್ಯಾಸ ದೊಂದಿಗೆ ಸಂಸ್ಕಾರವನ್ನೂ ನೀಡಬೇಕು. ಇದರಿಂದ ಉತ್ತಮ ಪ್ರಜೆಗಳನ್ನು ರೂಪಿಸಿದಂತಾಗುತ್ತದೆ~ ಎಂದು ಅಖಿಲ ಭಾರತ ಆರ್ಯ ವೈಶ್ಯ ಮಹಾಸಭಾ ಅಧ್ಯಕ್ಷ ಆರ್.ಪಿ. ರವಿಶಂಕರ್ ತಿಳಿಸಿದರು.

ನಗರದ ಕನ್ನಿಕಾಪರಮೇಶ್ವರಿ ದೇವಸ್ಥಾನ ಸಭಾಂ ಗಣದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಘಟಕದ ಆರ್ಯ ವೈಶ್ಯ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಚಿಕ್ಕವಯಸ್ಸಿನಿಂದಲೇ ವಿದ್ಯಾಭ್ಯಾಸದ ಜತೆಗೆ ಸನ್ನಡತೆ ಮೈಗೂಡಿಸಿಕೂಳ್ಳಲು ಪೋಷಕರು ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು. ಈಚೆಗೆ ಮಕ್ಕಳು ತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೆ ದೂಡುತ್ತಿರುವ ಪ್ರಸಂಗ ಹೆಚ್ಚಾಗುತ್ತಿದೆ. ಇದು ಕೆಟ್ಟ ಬೆಳವಣಿಗೆಯಾಗಿದೆ~ ಎಂದರು.

ಆರ್ಯ ಸಮಾಜದಲ್ಲಿ ನಾಯಕತ್ವ ಕೊರತೆ ಇರುವುದನ್ನು ಒಪ್ಪಿಕೂಂಡ ರವಿಶಂಕರ್, `ಅಧಿಕಾರದಲ್ಲಿರುವವರು ಇದನ್ನು ತಿಳಿದು ಸಮಾಜದ ಬೆಳವಣಿಗೆಗೆ ಶ್ರಮಿಸಬೇಕು. ಕಳೆದ ಒಂದೂವರೆ ವರ್ಷದಲ್ಲಿ ಸಮಾಜದ ಉನ್ನತಿಗೆ 1.5 ಕೋಟಿ ರೂಪಾಯಿ ವ್ಯಹಿಸಲಾಗಿದೆ~ ಎಂದರು.

ಆರ್ಯ ಸಮಾಜ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್. ರವಿಶಂಕರ್. ಕರ್ನಾಟಕ ಆರ್ಯವೈಶ್ಯ ಮಹಾಸಭಾ ಉಪಾಧ್ಯಕ್ಷ ನಾಗಮಾಣಿಕ್ಯಂ ಶೆಟ್ಟಿ. ಕೋಶಾಧ್ಯಕ್ಷ ಪಿ.ಸಿ. ಬಾಲರಾಜ್. ಯೋಜನಾ ನಿರ್ದೇಶಕ ಎಸ್.ಎ. ವಾಸುದೇವಮೂರ್ತಿ, ಕಾರ್ಯ ದರ್ಶಿ ಎ.ಆರ್. ರವಿಕುಮಾರ್, ಸದಸ್ಯತ್ವ ನೋಂದಾಣಿ ಸಂಚಾಲಕ ದುರ್ಗಪ್ಪ ಶೆಟ್ಟಿ, ಕನ್ನಿಕಾ ಪರಮೇಶ್ವರಿ ಸಹಕಾರಿ ಬ್ಯಾಂಕ್ ಅಧ್ಯಕ್ಷೆ ಎ.ಜಿ. ವನಜಾರಾಜ್ ಇತರರು ಇದ್ದರು.

 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.