ಹೊಳೆನರಸೀಪುರ: ‘ದೇಶದ ಒಳಗಿರುವ ಜನರು ನೆಮ್ಮದಿ ಯಂದಿರಲು ಗಡಿಭಾಗ ದಲ್ಲಿರುವ ವೀರ ಯೋಧರ ದೇಶಪ್ರೇಮದ ಕರ್ತವ್ಯ ಕಾರಣ’ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ನುಡಿದರು.
ಭಾರತ ಮತ್ತು ಬಾಂಗ್ಲಾ ಗಡಿಯ ರಕ್ಷಣೆಯಲ್ಲಿ ತೊಡಗಿದ್ದ ವೇಳೆ ವೀರಮರಣವನ್ನಪಿದ ತಾಲ್ಲೂಕಿನ ಹರದನಹಳ್ಳಿಯ ಯೋಧ ಎಚ್.ಟಿ. ಕಾಂತರಾಜು ಅವರ ಮನೆಗೆ ಗೌಡರು ಭೇಟಿ ನೀಡಿ ಕುಟುಂಬ ವರ್ಗದವರಿಗೆ ಸಾಂತ್ವಾನ ಹೇಳಿದರು.
‘ನನ್ನೂರಿನ ಯೋಧ ನನ್ನ ದೇಶದ ರಕ್ಷಣಾ ಕಾರ್ಯದಲ್ಲಿ ಹೋರಾಡಿ ವೀರ ಮರಣವನ್ನಪ್ಪಿದ್ದಾನೆ. ದೇಶ ರಕ್ಷಣೆಯಲ್ಲಿ ತೊಡಗಿರುವಾಗ ವೀರಮರಣವನ್ನಪ್ಪಿದ ಎಲ್ಲ ಯೋಧರ ಸಾವು ಭಾರತದ ಎಲ್ಲ ಪ್ರಜೆಗಳಿಗೆ ದುಃಖ ಉಂಟುಮಾಡುತ್ತದೆ ಎಂದರು.
ಸಂಜೆವರೆಗೂ ಯೋಧನ ಮನೆ ಯಲ್ಲೇ ಕಾಲ ಕಳೆದರು. ಗಡಿ ರಕ್ಷಣಾ ಕಾರ್ಯದಲ್ಲಿ ವೀರಮರಣವನ್ನಪ್ಪಿದ ಯೋಧರ ಪಾರ್ಥಿವ ಶರೀರವನ್ನು ಅದೇ ದಿನ ಯೋಧನ ಹುಟ್ಟೂರಿಗೆ ವಿಶೇಷ ಹೆಲಿಕಾಪ್ಟರ್‌ನಲ್ಲಿ ಕಳುಹಿಸುವ ವ್ಯವಸ್ಥೆ ಮಾಡುವ ಬಗ್ಗೆ ಈ ಹಿಂದೆಯೇ ಪ್ರಸ್ತಾವನೆ ಸಲ್ಲಿಸಿದ್ದೆ ಮತ್ತೊಮ್ಮೆ ಈ ಬಗ್ಗೆ ರಕ್ಷಣಾ ಸಚಿವಾಲಯದ ಗಮನ ಸೆಳೆಯು ವುದಾಗಿ ಗೌಡರು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ, ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಸಿ.ಎನ್. ಬಾಲಕೃಷ್ಣ, ರಾಜ್ಯ ಸಭೆಯ ಮಾಜಿ ಸದಸ್ಯ ಎಚ್.ಕೆ. ಜವರೇಗೌಡ, ಜಿಲ್ಲಾ ಪಂಚಾಯ್ತಿ ಸದಸ್ಯ ಎಚ್.ಎನ್. ದೇವೇಗೌಡ ಪಾಪಣ್ಣಿ ಜೊತೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.