ADVERTISEMENT

ಮೊದಲ ಅಕ್ಷರ ಜಾತ್ರೆಗೆ ಅರಕಲಗೂಡು ಸಜ್ಜು

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2011, 10:45 IST
Last Updated 11 ನವೆಂಬರ್ 2011, 10:45 IST
ಮೊದಲ ಅಕ್ಷರ ಜಾತ್ರೆಗೆ ಅರಕಲಗೂಡು ಸಜ್ಜು
ಮೊದಲ ಅಕ್ಷರ ಜಾತ್ರೆಗೆ ಅರಕಲಗೂಡು ಸಜ್ಜು   

ಅರಕಲಗೂಡು: ಪಟ್ಟಣದಲ್ಲಿ ಶುಕ್ರವಾರ ಮತ್ತು ಶನಿವಾರ ನಡೆಯಲಿರುವ ಪ್ರಥಮ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ.

ಕನ್ನಡ ಕಾದಂಬರಿ ಸಾರ್ವಭೌಮ ಅ.ನ.ಕೃ. (ಅರಕಲಗೂಡು ನರಸಿಂಗರಾಯ ಕೃಷ್ಣರಾಯ) ತವರಿನಲ್ಲಿ ನಡೆಯುತ್ತಿರುವ ಸಾಹಿತ್ಯ ಜಾತ್ರೆಗೆ ಪಟ್ಟಣ ಸಜ್ಜುಗೊಂಡಿದೆ. ಶಿಕ್ಷಕರ ಭವನದ ಮುಂಭಾಗದಲ್ಲಿ ಸಮ್ಮೇಳನಕ್ಕಾಗಿ ಭವ್ಯ ವೇದಿಕೆ ಸಿದ್ಧವಾಗಿದ್ದು, ಇದಕ್ಕೆ ಅ.ನ.ಕೃ. ಅವರ ಹೆಸರಿಡಲಾಗಿದೆ. ಪಟ್ಟಣದ ನಾಲ್ಕು ಮುಖ್ಯ ರಸ್ತೆಗಳಲ್ಲಿ ಸ್ವಾಗತ ಕೋರುವ ಮಹಾದ್ವಾರಗಳನ್ನು ನಿರ್ಮಿಸಿದ್ದು, ಇದಕ್ಕೆ ಗ್ರಾಮ ದೇವತೆ ದೊಡ್ಡಮ್ಮ, ಅರಕಲಗೂಡಿನ ನಿರ್ಮಾತೃ ಪಾಳೇಗಾರ ಕೃಷ್ಣಪ್ಪನಾಯಕ, ಸಾಹಿತಿ ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್, ಸಜ್ಜನ ರಾಜಕಾರಣಿ ಮಾಜಿ ಸಚಿವ ಎ.ಜಿ. ರಾಮಚಂದ್ರರಾವ್ ಅವರ ಹೆಸರು ಇಡಲಾಗಿದೆ. ಪ್ರಮುಖ ರಸ್ತೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿಲಾಗಿದೆ. ಕಟೌಟ್‌ಗಳು, ಸ್ವಾಗತ ಕೋರುವ ಬ್ಯಾನರ್, ಕನ್ನಡ ಧ್ವಜಗಳು ಎಲ್ಲೆಡೆ ರಾರಾಜಿಸತ್ತಿದ್ದು ಸಡಗರದ ವಾತಾವರಣ ಸೃಷ್ಟಿಸಿದೆ.

2004ರಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆದಿತ್ತು. ಈಗ ತಾಲ್ಲೂಕು ಸಮ್ಮೇಳನ ಆಯೋಜಿಸಲಾಗಿದೆ. ಸಮ್ಮೇಳನದ ಅಧ್ಯಕ್ಷರಾಗಿ ಖ್ಯಾತ ಸಂಗೀತ ವಿದ್ವಾಂಸ ಆರ್.ಕೆ. ಪದ್ಮನಾಭ್ ಅವರನ್ನು ಆಯ್ಕೆ ಮಾಡಲಾಗಿದೆ.

ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಗಣಪತಿ ಕೊತ್ತಲು ಆವರಣದಿಂದ ಸಮ್ಮೇಳನದ ವೇದಿಕೆ ವರೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ಪೂರ್ಣಕುಂಭ ಹೊತ್ತ ಮಹಿಳೆಯರು, ಭುವನೇಶ್ವರಿ, ಗ್ರಾಮದೇವತೆ ದೊಡ್ಡಮ್ಮ ದೇವಿಯ ಸ್ತಬ್ಧ ಚಿತ್ರಗಳು, ನಂದಿಧ್ವಜ, ಡೊಳ್ಳುಕುಣಿತ, ಸುಗ್ಗಿ ಕುಣಿತ, ಕೋಲಾಟ, ತೊಂಡಲದೇವರ ಕುಣಿತ, ಕೀಲು ಕುದುರೆ, ವೀರಗಾಸೆ, ಚಿಟ್ಟಿಮೇಳ, ಗಾರುಡಿಗೊಂಬೆ ಮುಂತಾದ ಜಾನಪದ ಕಲಾ ಪ್ರಕಾರಗಳು ಜನರನ್ನು ರಂಜಿಸಲಿದೆ.

ಊಟದ ಮೆನು: ಪಟ್ಟಣದಲ್ಲಿ ನಡೆಯುವ ಪ್ರಥಮ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಸಾಹಿತ್ಯಾಸಕ್ತರಿಗೆ ಸಾಹಿತ್ಯದ ರಸದೌತಣದೊಂದಿಗೆ ನಾಲಿಗೆಗೆ ರುಚಿ ನೀಡುವ ಊಟದ ಮೆನು ಸಹ ಸಿದ್ಧಗೊಂಡಿದೆ.

ಶುಕ್ರವಾರ ಬೆಳಿಗ್ಗೆ ತಿಂಡಿಗೆ ಫಲಾವ್, ಚಟ್ನಿ. ಮಧ್ಯಾಹ್ನದ ಊಟಕ್ಕೆ ಬಿಸಿಬೇಳೆ ಬಾತ್, ಮೊಸರನ್ನ, ಮೈಸೂರು ಪಾಕ್.  ರಾತ್ರಿ ಊಟಕ್ಕೆ ಅನ್ನ, ತಿಳಿಸಾರು, ಸಾಂಬಾರ್, ಜಿಲೇಬಿ. ಶನಿವಾರ ಬೆಳಿಗ್ಗೆ ತಿಂಡಿಗೆ ಉಪ್ಪಿಟ್ಟು, ಕೇಸರಿಬಾತ್. ಮಧ್ಯಾಹ್ನ ವಾಂಗೀವಾತ್, ಮೊಸರನ್ನ, ಜಿಲೇಬಿ. ರಾತ್ರಿ ಊಟಕ್ಕೆ ಅನ್ನ, ತಿಳಿಸಾರು, ಸಾಂಬಾರ್, ಮೈಸೂರು ಪಾಕ್ ನೀಡಲಾಗುವುದು.
 
ಸಮ್ಮೇಳನಾಧ್ಯಕ್ಷರ ಪರಿಚಯ
ಅರಕಲಗೂಡು: ಪ್ರಥಮ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಆರ್.ಕೆ. ಪದ್ಮನಾಭ್ ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿ ಜನಿಸಿದವರು. ರುದ್ರಪಟ್ಟಣ, ಬಸವಾ ಪಟ್ಟಣಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಗಿಸಿ ಕಾಲೇಜು ವಿದ್ಯಾಭಾಸ್ಯವನ್ನು ಮೈಸೂರಿನಲ್ಲಿ ನಡೆಸಿದರು. ಇದೇ ವೇಳೆ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದ ಇವರು ಅದರಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಲ್ಲದೆ ಗಾನಕಲಾಭೂಷಣ ಬಿರುದಾಂಕಿತರಾಗಿದ್ದಾರೆ. ಸುಮಾರು 150ಕ್ಕೂ ಹೆಚ್ಚು ಕೀರ್ತನೆಗಳನ್ನು ರಚಿಸಿ, ಹಾಡಿರುವ ಹೆಗ್ಗಳಿಗೆ ಇವರದು.

ಹುಟ್ಟೂರು ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿ ಕಳೆದ ಒಂದು ದಶಕಕ್ಕೂ ಹೆಚ್ಚಿನ ಕಾಲದಿಂದ ಪ್ರತಿವರ್ಷ ಸಂಗೀತ ಸಮ್ಮೇಳನ ನಡೆಸಿಕೊಂಡು ಬರುತ್ತಿರುವ ಇವರು, ರುದ್ರಪಟ್ಟಣದಲ್ಲಿ ನಿರ್ಮಿಸಿರುವ ತಂಬೂರಿ ಆಕಾರದ ಸಪ್ತಸ್ವರ ದೇವತಾ ಧ್ಯಾನ ಮಂದಿರ ಅದ್ಭುತ ಸಾಧನೆಯಾಗಿದೆಯಲ್ಲದೆ ಸಂಗೀತಾಭಿಮಾನಿಗಳ ಯಾತ್ರಾ ಸ್ಥಳ ಎನಿಸಿದೆ.

ತ್ಯಾಗರಾಜರ ಹುಟ್ಟೂರು ತಿರುವಯ್ಯಾರಿನಂತೆ ರುದ್ರಪಟ್ಟಣವನ್ನು ಸಂಗೀತ ಕಾಶಿಯಾಗಿಸುವ ಕನಸು ಇವರಲ್ಲಿದೆ.

ಸಮ್ಮೇಳನದಲ್ಲಿ ಇಂದು
ಅರಕಲಗೂಡು: ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ. ರಾಷ್ಟ್ರ ಧ್ವಜಾರೋಹಣ- ಶಾಸಕ ಎ. ಮಂಜು. ಕನ್ನಡ ಧ್ವಜಾರೋಹಣ - ಪ.ಪಂ. ಅಧ್ಯಕ್ಷೆ ಯಶೋಧಮ್ಮ.ಪರಿಷತ್ತಿನ ಧ್ವಜಾರೋಹಣ- ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಉದಯರವಿ. ಅತಿಥಿಗಳು- ತಾ.ಪಂ. ಅಧ್ಯಕ್ಷ ಸಂತೋಷ್‌ಗೌಡ, ಉಪಾಧ್ಯಕ್ಷೆ ಆಶಾ, ಪ.ಪಂ. ಉಪಾಧ್ಯಕ್ಷ ಎ.ಪಿ. ರಮೇಶ್, ಪಿ.ಎಲ್.ಡಿ. ಬ್ಯಾಂಕ್ ಮಾಜಿ ಅಧ್ಯಕ್ಷ ಚನ್ನಕೇಶವೇಗೌಡ, ಬಿಇಓ ಎಸ್. ಮಮತ, ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ರಾಜಶೇಖರ್ ಬೆಳಿಗ್ಗೆ9.
ಸಮ್ಮೇಳನಾಧ್ಯಕ್ಷರ ಮೆರವಣಿಗೆ  ಚಾಲನೆ- ಸಮ್ಮೇಳನದ ಕಾರ್ಯಾಧ್ಯಕ್ಷ ಮರಡಿ ಸೋಮಶೇಖರ್, ಅತಿಥಿಗಳು: ಪತ್ರಕರ್ತರಾದ ಆರ್.ಪಿ. ವೆಂಕಟೇಶ್‌ಮೂರ್ತಿ, ಎಚ್.ಬಿ. ಮದನ್‌ಗೌಡ, ಜಿ.ಪಂ. ಸದಸ್ಯ ವಿ.ಎ. ನಂಜುಂಡಸ್ವಾಮಿ, ದೊಡ್ಡಮ್ಮಸೇವಾ ಸಮಿತಿ ಅಧ್ಯಕ್ಷ ಎ.ಎಸ್. ರಾಮಸ್ವಾಮಿ. ಬೆಳಿಗ್ಗೆ10.
ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭ: ಉದ್ಘಾಟನೆ - ಶಾಸಕ ಎ.ಮಂಜು. ಅಧ್ಯಕ್ಷತೆ - ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಆರ್.ಕೆ. ನಲ್ಲೂರು ಪ್ರಸಾದ್. ಸಮ್ಮೇಳನಾಧ್ಯಕ್ಷರ ನುಡಿ : ಆರ್.ಕೆ. ಪದ್ಮನಾಭ್. ಆಶಯ ನುಡಿ - ಜಿಲ್ಲಾ ಕ.ಸಾಪ. ಅಧ್ಯಕ್ಷ ಉದಯರವಿ.ಸ್ಮರಣ ಸಂಚಿಕೆ ಬಿಡುಗಡೆ - ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ನಿರ್ಧೇಶಕ ವೈ .ಕೆ. ಮುದ್ದುಕೃಷ್ಣ. ಪುಸ್ತಕ ಮಳಿಗೆಗಳ ಉದ್ಘಾಟನೆ - ಕ.ಸಾ.ಪ. ಕೋಶಾಧ್ಯಕ್ಷ ಪುಂಡಲೀಕ ಹಾಲಂಬಿ. ಪ್ರಸ್ತಾವಿಕ ನುಡಿ -ತಾಲ್ಲೂಕು ಕ.ಸಾ.ಪ. ಅಧ್ಯಕ್ಷ ರಮೇಶ್ ವಾಟಾಳ್. ಅತಿಥಿಗಳು -  ಉಪವಿಭಾಗಾಧಿಕಾರಿ ಪಲ್ಲವಿ ಅಕೋರತಿ, ತಹಶೀಲ್ದಾರ್ ಆಯಿಶಾ ಫರ್ವಿನ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ಧೇಶಕ ಎ.ಟಿ. ಚಾಮರಾಜ್, ಡಿವೈಎಸ್‌ಪಿ ಕೆ.ಪರಶುರಾಮ್.ಮಧ್ಯಾಹ್ನ1.30.
ವಿಚಾರ ಗೋಷ್ಠಿ:  ರೈತ ಹೋರಾಟದ ಹೊಸ ಹೆಜ್ಜೆಗಳು ಉಪನ್ಯಾಸ ಪ್ರೊ ಕೆ.ಸಿ. ಬಸವರಾಜ್, ಅಧ್ಯಕ್ಷತೆ- ಗೊರೂರು ಎ.ಎನ್.ವಿ. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಆರ್. ಚಂದ್ರಶೇಖರ್.ಸಂಜೆ 4.
ಕವಿಗೋಷ್ಠಿ: ಅಧ್ಯಕ್ಷತೆ - ಸಾಹಿತಿ ರೂಪ ಹಾಸನ.ಆಶಯ ನುಡಿ - ಕನ್ನಡ ಸಹ ಪ್ರಾದ್ಯಾಪಕ  ಸಿ.ಎಸ್. ಮೋಹನ್. ಉಪಸ್ಥಿತಿ - ಎ.ಪಿ.ಎಂ.ಸಿ. ಅಧ್ಯಕ್ಷ ಹೆಚ್.ಎಸ್. ಶಂಕರ್, ಕಾರೋನೇಷನ್ ಸಹಕಾರ ಸಂಘದ ಅಧ್ಯಕ್ಷ ಎ.ಎನ್.ಗಣೇಶ್‌ಮೂರ್ತಿ, ಸಾಹಿತಿ ಎನ್.ಎಲ್. ಚನ್ನೇಗೌಡ. ಸಂಜೆ5.30.
ಸಾಂಸ್ಕೃತಿಕ ಕಾರ್ಯಕ್ರಮ - ಬೆಂಗಳೂರಿನ ಜಾಪದ ಕಲಾವಿದರಿಂದ. ರಾತ್ರಿ7.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT