ADVERTISEMENT

ರಂಗಭೂಮಿ ಕಲಾವಿದರಿಗೆ ಸಿದ್ದರಾಮಯ್ಯ ಸನ್ಮಾನ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2012, 8:05 IST
Last Updated 10 ಅಕ್ಟೋಬರ್ 2012, 8:05 IST

ತಿ.ನರಸೀಪುರ: ಇನ್ನೊಬ್ಬರಿಗೆ ಕೇಡು ಬಯಸದಂತೆ ಬದುಕುವುದೇ ದೇವರಿಗೆ ನಾವು ಸಲ್ಲಿಸುವ ಪೂಜೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಪಟ್ಟಣದ ಕಡ್ಲೆರಂಗಮ್ಮ ಬಡಾವಣೆ ಕನಕ ಯುವ ಸೇನಾ ಸಮಿತಿ ಹಾಗೂ ವೀರ ಸಂಗೊಳ್ಳಿರಾಯಣ್ಣ ಯುವಕರ ಬಳಗದ ವತಿಯಿಂದ ಗಣಪತಿ ಮಹೋತ್ಸವದ ಅಂಗವಾಗಿ ಸೋಮವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಯುವ ಸಂಘಟನೆಗಳು ಪ್ರತಿಭಾವಂತ ವಿದ್ಯಾರ್ಥಿಗಳು ಗುರುತಿಸಿ ಗೌರವಿಸುವುದು ಒಳ್ಳೆಯ ಪ್ರವೃತ್ತಿ. ಇಂತಹ ಸೇವಾ ಚಟುವಟಿಕೆಗಳನ್ನು ನಿರಂತರವಾಗಿ ಮುಂದುವರಿಸಬೇಕು ಎಂದರು.

ಶಾಸಕ ಡಾ.ಎಚ್.ಸಿ.ಮಹಾದೇವಪ್ಪ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ರಂಗಭೂಮಿ ಕಲಾವಿದರಾದ ಕುಪ್ಯ ವೆಂಕಟರಾಮು, ಕಿರಗಸೂರು ರಾಜಪ್ಪ, ಸೀಹಳ್ಳಿ ಗುರುಮೂರ್ತಿ, ಪುಳ್ಳಾರಿ ಮಹಾದೇವ್, ಕೆಇಬಿ ಮಹಾದೇವ್, ಮಲ್ಲಿಕಾರ್ಜುನ ಸ್ವಾಮಿ, ಹೊಟ್ಟೆ ಮಾದೇಗೌಡ, ನಿಲಸೋಗೆ ಪುಟ್ಟಮಾದೇಗೌಡ, ರಾಜು ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಪಂಚಾಯಿತಿ ಸದಸ್ಯೆ ರೇಣುಕಾ ನಾಗರಾಜು, ಮಾಜಿ ಸದಸ್ಯ ಸೋಮಣ್ಣ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಬಸವರಾಜು, ಬಸವಣ್ಣ, ಬೈರಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್, ಸುನಿಲ್ ಬೋಸ್, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಪ್ರಶಾಂತ್‌ಬಾಬು, ಪಿ.ಪುಟ್ಟರಾಜು, ಟಿ.ಎಂ. ನಂಜುಂಡಸ್ವಾಮಿ, ಅಮ್ಜದ್ ಖಾನ್, ಎನ್.ಮಹಾದೇವಸ್ವಾಮಿ, ಸೇನಾ ಸಮಿತಿಯ ಬಿಎಚ್‌ಎಸ್ ಮಾದೇಶ್, ಗುರುಮಲ್ಲಪ್ಪ, ನಾಗ, ಬಾದಾಮಿ ಮಂಜು, ಪರಮೇಶ್, ಸೋಮಶೇಖರ್, ಅರುಣ್ ಕುಮಾರ್, ಕನ್ನಡ ಸೇನೆಯ ಪುಟ್ಟಸ್ವಾಮಿ, ದೇಮಳ್ಳಿ ರಾಚಯ್ಯ, ವಾಟಾಳ್ ನಾಗೇಶ್, ಬಿ.ಮಹಾದೇವ್, ಲತಾ ಜಗದೀಶ, ಮನ್ನೆಹುಂಡಿ ಮಹೇಶ್ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.