ADVERTISEMENT

ವಿದ್ಯುತ್ ಅಸಮರ್ಪಕ ಪೂರೈಕೆ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 5:35 IST
Last Updated 3 ಅಕ್ಟೋಬರ್ 2012, 5:35 IST

ಸಕಲೇಶಪುರ: ತಾಲ್ಲೂಕಿನಲ್ಲಿ ಅಸಮರ್ಪಕ ವಿದ್ಯುತ್ ಪೂರೈಕೆ ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಸೆಸ್ಕ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ದಿನದಲ್ಲಿ ಸರಿಯಾಗಿ 12ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಇಲ್ಲ. ಮಧ್ಯವಾರ್ಷಿಕ ಪರೀಕ್ಷೆಗೆ ವಿದ್ಯಾರ್ಥಿಗಳು ಓದುವ ಸಮಯದಲ್ಲಿಯೇ ಹೆಚ್ಚಾಗಿ ವಿದ್ಯುತ್ ಖಡಿತ ಮಾಡಲಾಗುತ್ತಿದೆ. ನಿಗದಿತ ಸಮಯವನ್ನು ಒಂದು ದಿನವೂ ಪಾಲನೆ ಮಾಡದೆ ಮನಸ್ಸಿಗೆ ಬಂದಂತೆ ಖಡಿತ ಮಾಡಲಾಗುತ್ತದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
24 ಗಂಟೆಯೂ ವಿದ್ಯುತ್ ಪೂರೈಕೆ ಮಾಡಬೇಕು ಇಲ್ಲವಾದರೆ ತಾಲ್ಲೂಕಿನಲ್ಲಿರುವ ಎ್ಲ್ಲಲ ಕಿರು ಜಲವಿದ್ಯುತ್ ಯೋಜನೆಗಳನ್ನು ಬಂದ್ ಮಾಡಬೇಕು ಎಂದು ಆಗ್ರಹಿಸಿದರು.

ಪಕ್ಷದ ಮುಖಂಡ ವೈ.ಪಿ.ರಾಜೇಗೌಡ, ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಕೌಡಹಳ್ಳಿ ಲೋಹಿತ್, ಕಾರ್ಯದರ್ಶಿ ಅನಿಲ್ ಮುಂತಾದವರು ಇದ್ದರು.

ಅದ್ದೂರಿ ಗಣಪತಿ ಹೋಮ
ಹೊಳೆನರಸೀಪುರ: ಪಟ್ಟಣದ ಮಹಾಗಣಪತಿ ಸೇವಾ ಸಮಿತಿಯವರು ಮಂಗಳವಾರ ಏರ್ಪಡಿಸಿದ್ದ ಗಣಪತಿ ಹೋಮ ಮತ್ತು ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಹದಿನೆಂಟು ಸಾವಿರ ಜನರು ಭಾಗವಹಿಸಿದ್ದರು.

ಗಣಪತಿ ಪೆಂಡಾಲ್‌ನ ಮುಂಭಾಗದಲ್ಲಿ ಅನ್ನ ಸಂತರ್ಪಣೆಗೆ ವ್ಯವಸ್ಥೆ ಮಾಡಿದ್ದರು. ಶಾಸಕ ಎಚ್.ಡಿ. ರೇವಣ್ಣ ಭವಾನಿ ರೇವಣ್ಣ ಪೂಜಾ ವಿಧಿ ವಿಧಾನಗಳಲ್ಲಿ ಭಾಗವಹಿಸಿ ಕೆಲ ಕಾಲ ಸಾರ್ವಜನಿಕರಿಗೆ ಊಟ ಬಡಿಸಿದರು. ಅನ್ನ ಸಂತರ್ಪಣೆಗಾಗಿ 22 ಕ್ವಿಂಟಲ್ ಅಕ್ಕಿಯನ್ನು ಬಳಸಿ ವಿವಿಧ ಬಗೆಯ ಅಡುಗೆಯನ್ನು ತಯಾರಿಸಿದ್ದರು.

ಕಾರ್ಯಾಧ್ಯಕ್ಷ ಟಿ. ಶಿವಕುಮಾರ್, ಗಣಪತಿ ಸೇವಾ ಸಮಿತಿ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.