ADVERTISEMENT

ಶುದ್ಧಜಲ ಅಭಿಯಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2017, 9:42 IST
Last Updated 12 ಅಕ್ಟೋಬರ್ 2017, 9:42 IST

ಹೊಳೆನರಸೀಪುರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶುದ್ಧಜಲ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶುದ್ಧಗಂಗಾ ಅಭಿಯಾನದ ಮೇಲ್ವಿಚಾರಕ ರೇವಣ್ಣಸಿದ್ದೇಶ್‌ ನುಡಿದರು.

ಮಂಗಳವಾರ ತಾಲ್ಲೂಕಿನ ದೊಡ್ಡಕುಂಚೇವು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನೀರು ಜೀವನಾವಶ್ಯಕ ವಸ್ತುಗಳಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ಅಮೃತ ಸಮಾನವಾದ ನೀರನ್ನು ವ್ಯರ್ಥ ಮಾಡದೆ, ಕಲುಷಿತಗೊಳಿಸದೆ ಅತ್ಯಂತ ಶ್ರದ್ಧೆಯಿಂದ ಕಾಪಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ADVERTISEMENT

ಶಾಲೆ ಮುಖ್ಯ ಶಿಕ್ಷಕ ಮಂಜೇಗೌಡ ಮಾತನಾಡಿ, ಪರಿಸರ ಮತ್ತು ನೀರನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ ಎಂದು ಹೇಳುವ ಪರಿಸ್ಥಿತಿ ಬಂದಿರುವುದು ವಿಷಾದನೀಯ. ಶುದ್ಧ ನೀರನ್ನು ಬಳಸಿ ಆರೋಗ್ಯ ಕಾಪಾಡಿ ಕೊಳ್ಳಬೇಕು. ರಾಜ್ಯದ ಕೆಲವು ಕಡೆ 10, 20 ಕಿಲೋ ಮೀಟರ್‌ ನಡೆದು ನೀರನ್ನು ತರುವ ಪರಿಸ್ಥಿತಿ ಇದೆ. ನೀರು ಅಮೃತ ಸಮಾನ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.