ADVERTISEMENT

ಸಂಚಾರ ನಿಯಮ ಕಡ್ಡಾಯ ಪಾಲಿಸಿ: ನವೀನ್‌

​ಪ್ರಜಾವಾಣಿ ವಾರ್ತೆ
Published 6 ಜನವರಿ 2014, 5:29 IST
Last Updated 6 ಜನವರಿ 2014, 5:29 IST

ಜಾವಗಲ್‌: ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸಬ್‌ಇನ್‌ಸ್ಪೆಕ್ಟರ್‌ ನವೀನ್‌ ಮನವಿ ಮಾಡಿದರು.   ಪಟ್ಟಣದ ಪೊಲೀಸ್‌ ಠಾಣೆ ವತಿಯಿಂದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಈಚೆಗೆ ಏರ್ಪಡಿಸಿದ್ದ ಆಟೊ ಮತ್ತು ಮ್ಯಾಕ್ಸಿಕ್ಯಾಬ್‌ ಚಾಲಕರುಗಳ ಜಾಥಾಕ್ಕೆ  ಚಾಲನೆ ನೀಡಿ ಮಾತನಾಡಿದರು.

ಚಾಲಕರು ಕಡ್ಡಾಯವಾಗಿ ವಾಹನಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆ ಮತ್ತು ಪರವಾನಗಿ ಹೊಂದಿರಬೇಕು. ಸಮವಸ್ತ್ರ ಧರಿಸುವುದು, ನಿಗದಿತ ಸ್ಥಳಗಳಲ್ಲಿ ವಾಹನ ನಿಲ್ಲಿಸುವುದು, ಪುಟ್‌ಬೋರ್ಡ್‌ ಮೇಲೆ ಜನರನ್ನು ನಿಲ್ಲಿಸದೆ ನಿಗದಿತ ಸಂಖ್ಯೆಯಲ್ಲಿ ಮಾತ್ರ ಪ್ರಯಾಣಿಕರನ್ನು ಕರೆದುಕೊಂಡು ಹೋಗುವುದು ಮುಂತಾದ ನಿಯಮಗಳ ಬಗ್ಗೆ ಮಾಹಿತಿ ನೀಡಿದರು.

ಸಿಬ್ಬಂದಿ ತಿಮ್ಮೇಗೌಡ, ಶಿವರುದ್ರಪ್ಪ, ಮಲ್ಲೇಶ್‌, ಶಿವರಾಂ, ಮಂಜೇಗೌಡ, ಸುಮಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.