ADVERTISEMENT

ಸಂತೆ ಹರಾಜು ಪ್ರಕ್ರಿಯೆ ಮುಂದೂಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಜುಲೈ 2012, 6:10 IST
Last Updated 4 ಜುಲೈ 2012, 6:10 IST

ಹಾಸನ: ರೈತರಿಗೆ ಮೂಲಸೌಲಭ್ಯ ಹಾಗೂ ಸಂತೆ ನಡೆಸಲು ಸೂಕ್ತ ಜಾಗ ಗುರುತಿಸುವವರೆಗೆ ಸಂತೆ ಹರಾಜು ಪ್ರಕ್ರಿಯೆ ನಡೆಸಬಾರದು ಎಂದು ಒತ್ತಾಯಿಸಿ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹೊಳೆನರಸೀಪುರ ಘಟಕದ ಕಾರ್ಯ ರ್ಕರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಹೊಳೆನರಸೀಪುರ ಪುರಸಭೆಯವರು ಜುಲೈ 7 ರಂದು ಸಂತೆ ಹರಾಜು ಪ್ರಕ್ರಿಯೆ ನಡೆಸಲು ಮುಂದಾಗಿದ್ದು, ಈಗ ಸಂತೆ ನಡೆಯುತ್ತಿರುವ ಪ್ರದೇಶದಲ್ಲಿ ಜನಜಾನುವಾರುಗಳಿಗೆ ಕುಡಿಯುವ ನೀರಿನ ಸೌಲಭ್ಯ, ಜನರಿಗೆ ಶೌಚಾಲಯ ಸೇರಿದಂತೆ ಯಾವುದೇ ವ್ಯವಸ್ಥೆ ಇಲ್ಲ. ಸರಿಯಾದ ವ್ಯವಸ್ಥೆ ಕಲ್ಪಿಸಿದ ನಂತರ ಹರಾಜು ಮಾಡಬೇಕು ಹಾಗೂ ಚನ್ನಾಂಬಿಕ ಸಿನಿಮಾ ಮಂದಿರದ ಬಳಿಯ 1ಎಕರೆ 32ಗುಂಟೆ ಪ್ರದೇಶದಲ್ಲಿ ವಾರದ ಸಂತೆ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರೈತ ಸಂಘದವರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ರೈತ ಸಂಘದ ಅಧ್ಯಕ್ಷ ಟಿ.ನಂಜುಂಡೇಗೌಡ, ಉಪಾಧ್ಯಕ್ಷ ಗೋಪಾಲಕೃಷ್ಣ, ಎಚ್.ಜೆ.ಜವರೇಶ್ ಪ್ರತಿಭಟನೆಯಲ್ಲಿದ್ದರು.

ಸ್ವಾಸ್ಥ್ಯ ಬಿಮಾ ಯೋಜನೆಗೆ ಒತ್ತಾಯ
ಹಾಸನ:`ಕೇಂದ್ರ ಸರ್ಕಾರ ಜಾರಿ ಮಾಡಿರುವ ಸ್ವಾಸ್ತ್ಯ ಬಿಮಾ ಯೋಜನೆಯನ್ನು ಕಟ್ಟಡ ಕಾರ್ಮಿಕರಿಗೂ ವಿಸ್ತರಿಸಬೇಕು~ ಎಂದು ಆಗ್ರಹಿಸಿ ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದ ಜಿಲ್ಲಾ ಘಟಕದ ಕಾರ್ಯಕತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಸರ್ಕಾರಿ ಹಾಗೂ ಸರ್ಕಾರದಿಂದ ಮಾನ್ಯತೆ ಪಡೆದ ಆಸ್ಪತ್ರಗಳಲ್ಲಿ ಒಳ ರೋಗಿಗಳಾಗಿ ಚಿಕಿತ್ಸೆ ಪಡೆಯುವ ಕಟ್ಟಡ ಕಾರ್ಮಿಕರಿಗೆ ಚಿಕಿತ್ಸಾ ವೆಚ್ಚ ವಾಗಿ ರೂ. 25 ಸಾವಿರ ನೀಡಬೇಕು, ಕೆಲಸ ನಿರ್ವಹಣೆ ಸಮಯದಲ್ಲಿ ಮೃತಪಟ್ಟ ಕಾರ್ಮಿಕ ಕುಟುಂಬಕ್ಕೆ ರೂ. 2ಲಕ್ಷ  ಪರಿಹಾರ ನೀಡಬೇಕು, ಕಟ್ಟಡ ಕಾರ್ಮಿಕರು ಹೃದ್ರೋಗ ಶಸ್ತ್ರ ಚಿಕಿತ್ಸೆ, ಕಿಡ್ನಿ ಜೋಡಣೆ, ಕ್ಯಾನ್ಸರ್ ಚಿಕಿತ್ಸೆಗೆ ಒಳಗಾದರೆ ಸಹಾಯಧನ ನೀಡಬೇಕು, 5ವರ್ಷ ಸದಸ್ಯತ್ವ ಪೂರ್ಣಗೊಳಿಸಿದ 60 ವರ್ಷದ ಕಟ್ಟಡ ಕಾರ್ಮಿಕ ಹಾಗೂ 55 ವರ್ಷದ ಮಹಿಳಾ ಕಾರ್ಮಿಕರಿಗೆ 1 ಸಾವಿರ ರೂಪಾಯಿ ಪಿಂಚಣಿ ನೀಡಬೇಕು, ಮನೆ ನಿರ್ಮಿಸಲು ಅಥವಾ ಖರೀದಿಸಲು 3 ಲಕ್ಷ ಸಾಲ ಸೌಲಭ್ಯ ನೀಡಬೇಕು. ಹಾಸನ ನಗರದಲ್ಲಿ ವಾಸಿಸುತ್ತಿರುವ ಕಾರ್ಮಿಕರಿಗೆ ಆಶ್ರಯ ಯೋಜನೆಯಡಿ ಬಡಾವಣೆ ನಿರ್ಮಾಣ ಮಾಡಿಕೊಡ ಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ವಿ. ಸ್ವಾಮಿ, ಉಪಾಧ್ಯಕ್ಷ ಮಂಜೇಗೌಡ, ಖಜಾಂಚಿ ನಾಗರಾಜು, ಕಾರ್ಯದರ್ಶಿ ಶಂಕರನಾಯಕ್ ಪ್ರತಿಭಟನೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.