ADVERTISEMENT

ಸಂಭ್ರಮದ ಸಿಡಿ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2012, 8:05 IST
Last Updated 12 ಏಪ್ರಿಲ್ 2012, 8:05 IST

ಬೇಲೂರು: ಇಲ್ಲಿನ ಗ್ರಾಮ ದೇವತೆ ಅಂತರಘಟ್ಟಮ್ಮ ಅವರ ಸಿಡಿ ಮಹೋತ್ಸವ ಬುಧವಾರ ಸಂಜೆ ಅಪಾರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಿಂದ ಜರುಗಿತು.

ಮಂಗಳವಾರದಿಂದ ಅಂತರ ಘಟ್ಟಮ್ಮ ಅವರ ಸಿಡಿ ಉತ್ಸವ ಆರಂಭ ಗೊಂಡಿದ್ದು, ಮಂಗಳವಾರ ಮಧ್ಯಾಹ್ನ ಕೆಂಡೋತ್ಸವ ನಡೆದಿತ್ತು. ಬುಧವಾರ ಸಂಜೆ ತಾಲ್ಲೂಕಿನ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತರು ದೇವಾಲಯದ ಮುಂಭಾಗದಲ್ಲಿನ ಸಿಡಿ ಕಂಬವನ್ನು ಏರುವ ಮೂಲಕ ತಮ್ಮ ಹರಕೆ ತೀರಿಸಿದರು.

ಇದಕ್ಕೂ ಮುನ್ನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಿಡಿ ಏರುವ ಭಕ್ತರು ಸಂಪ್ರದಾಯದಂತೆ ಪಟ್ಟಣದ ಶಿವಜ್ಯೋತಿ ಫಣ ಬೀದಿ (ಗಾಣಿಗರ ಬೀದಿ)ಯಲ್ಲಿರುವ ಬೇವಿನ ಮರಕ್ಕೆ ಪೂಜೆ ಸಲ್ಲಿಸಿ ಪ್ರದಕ್ಷಿಣೆ ಹಾಕಿದರು. ಅಂತರಘಟ್ಟಮ್ಮ ಅವರ ಸಿಡಿ ಮಹೋತ್ಸವದ ಹಿನ್ನೆಲೆಯಲ್ಲಿ ದೇವಿಗೆ ಚಿನ್ನಾಭರಣಗಳಿಂದ ಅಲಂಕರಿಸಲಾಗಿತ್ತು.

ಪುರಸಭಾಧ್ಯಕ್ಷ ತೊ.ಚ. ಅನಂತ ಸುಬ್ಬರಾಯ, ಸದಸ್ಯ ಬಿ.ಸಿ.ಮಂಜು ನಾಥ್, ಜಿಲ್ಲಾ ಪಂಚಾಯಿತಿ ಸದಸ್ಯೆ ಎಂ.ವಿ.ಹೇಮಾವತಿ ಉತ್ಸವದ ಸಂಧರ್ಭದಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.