ADVERTISEMENT

ಸಂಸದರ ವಸತಿ ಗೃಹಪ್ರವೇಶ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2018, 10:30 IST
Last Updated 17 ಮಾರ್ಚ್ 2018, 10:30 IST
ಹಾಸನದ ಆರ್‌.ಸಿ ರಸ್ತೆಯಲ್ಲಿ ಎಚ್‌.ಡಿ.ದೇವೇಗೌಡ ಅವರ ಸಂಸದರ ವಸತಿಗೃಹದಲ್ಲಿ ಪೂಜೆ ಕಾರ್ಯ ನೆರವೇರಿತು.
ಹಾಸನದ ಆರ್‌.ಸಿ ರಸ್ತೆಯಲ್ಲಿ ಎಚ್‌.ಡಿ.ದೇವೇಗೌಡ ಅವರ ಸಂಸದರ ವಸತಿಗೃಹದಲ್ಲಿ ಪೂಜೆ ಕಾರ್ಯ ನೆರವೇರಿತು.   

ಹಾಸನ: ಸಂಸದ ಎಚ್‌.ಡಿ. ದೇವೇಗೌಡ 4 ವರ್ಷಗಳ ಹಿಂದೆ ಮಾಡಿದ್ದ ಮನವಿ ಪುರಸ್ಕರಿಸಿದ ಜಿಲ್ಲಾಡಳಿತ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಸಮೀಪ ಕಟ್ಟಡ ನಿರ್ಮಿಸಿಕೊಟ್ಟಿದ್ದು, ಸಂಸದರ ವಸತಿ ಗೃಹ ಪ್ರವೇಶ ಶಾಸ್ತ್ರೋಕ್ತವಾಗಿ ನೆರವೇರಿತು.

36 ಲಕ್ಷ ವೆಚ್ಚದ ಕಟ್ಟಡದಲ್ಲಿ 4 ಬೆಡ್‌ರೂಂ, ದೇವರ ಕೋಣೆ ಹಾಗೂ ಲಿಫ್ಟ್‌ ವ್ಯವಸ್ಥೆ ಕಲ್ಪಿಸಲಾಗಿದ್ದು, ದೇವೇಗೌಡ ಪತ್ನಿ ಚನ್ನಮ್ಮ, ಸೊಸೆ ಭವಾನಿ ರೇವಣ್ಣ ಸೂತನ ವಸತಿಗೃಹದ ಹೊಸ್ತಿಲಿಗೆ ಪೂಜೆ ಸಲ್ಲಿಸಿದರು.

ನಂತರ ಗೋವಿಗೆ ವಿಶೇಷ ಪೂಜೆ ಸಲ್ಲಿಸಿ ಗೃಹ ಪ್ರವೇಶಿಸಲಾಯಿತು. ಭವಾನಿ ರೇವಣ್ಣ ಹಾಲು ಉಕ್ಕಿಸುವ ಮೂಲಕ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.