ADVERTISEMENT

ಸರ್ವ ರಂಗದಲ್ಲೂ ಮಹಿಳೆ ದಾಪುಗಾಲು

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2012, 5:15 IST
Last Updated 19 ಮಾರ್ಚ್ 2012, 5:15 IST

ಅರಸೀಕೆರೆ: ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮೆರೆಯುತ್ತಿದ್ದಾರೆ ಎಂದು ಕಲ್ಪತರು ಕಾವೇರಿ ಗ್ರಾಮೀಣ ಬ್ಯಾಂಕಿನ ಅಧ್ಯಕ್ಷೆ ಟಿ.ಎಲ್. ಅಂಬುಜಾಕ್ಷಿ ಅಭಿಪ್ರಾಯಪಟ್ಟರು.   

 ತಾಲ್ಲೂಕಿನ ನಾಗೇನಹಳ್ಳಿಯಲ್ಲಿ ಬೆಳಗುಂಬ ಶಾಖೆಯ ಕಲ್ಪತರು ಕಾವೇರಿ ಗ್ರಾಮೀಣ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ಅಂತಾ ರಾಷ್ಟ್ರೀಯ ಮಹಿಳಾ ವರ್ಷದ ಅಂಗವಾಗಿ ಈಚೆಗೆ ಆಯೋಜಿಸಿದ್ದ `ಸಂಪೂರ್ಣ ಗ್ರಾಮ~ ನಾಮಫಲಕ ಉದ್ಘಾಟಿಸಿ ಅಚರು ಮಾತನಾಡಿದರು. ಮಹಿಳೆಯರು ಜಾಗೃತರಾಗಿ ಸರ್ವ ರಂಗಗಳಲ್ಲಿಯೂ ದಾಪುಗಾಲು ಇಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

 ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳು ಮಹಿಳೆಯರ ಸ್ವಾವಲಂಬನೆಯ ದಾರಿ ದೀಪಗಳಾಗಿವೆ.  ಸ್ವಸಹಾಯ ಸಂಘಗಳ ಸದಸ್ಯೆಯರು ಬ್ಯಾಂಕುಳಲ್ಲಿ ಸಾಲ ಪಡೆದು ಅದನ್ನು ಸದ್ಭಳಕೆ ಮಾಡಿಕೊಂಡು ಸ್ವಾವಲಂಬನೆ ಸಾಧಿಸುತ್ತಿದ್ದಾರೆ. ಪಡೆದ ಸಾಲವನ್ನು ಮರು ಪಾವತಿ ಮಾಡುವಲ್ಲಿಯೂ ಮುಂದೆ ಇದ್ದಾರೆ ಎಂದರು. 

 ಸೆಲ್ಕೋ ಸೋಲಾರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹರೀಶ್ ಹಂದೆ, ಆಕಾಶವಾಣಿ ಅಧಿಕಾರಿ ಡಾ. ವಿಜಯ್ ಅಂಗಡಿ , ಅರಸೀಕೆರೆ ಜಯಚಾಮರಾಜೇಂದ್ರ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಶೈಲಜಾ, ಉಪನ್ಯಾಸಕಿ ಡಿ.ಆರ್. ಸುಧಾ ಮಾತನಾಡಿದರು.

ಸಂಪೂರ್ಣ ಗ್ರಾಮ ಯೋಜನೆ ಯಡಿ ನಾಗೇನಹಳ್ಳಿ ಗ್ರಾಮದ 25 ರೈತರಿಗೆ ಕಿಸಾನ್ ಕಾರ್ಡು, ವಿಮಾ ಯೋಜನೆ, ಅಡುಗೆ ಅನಿಲ ಸಂಪರ್ಕ, ಸೋಲಾರ ದೀಪಗಳನ್ನು ನೀಡಲಾಯಿತು.

ಅರಸೀಕೆರೆ ಕುಸುಮ ಗ್ಯಾಸ್ ಏಜೆನ್ಸಿ ಮಾಲೀಕ ಎಸ್.ಆರ್. ಕಂಠಿ, ಬ್ಯಾಂಕಿನ ನೋಡೆಲ್ ಅಧಿಕಾರಿ ಕೆ. ಶ್ರೆಧರ್ ಪ್ರಾದೇಶಿಕ ವ್ಯವಸ್ಥಾಪಕ ಪಿ.ಎನ್. ಸ್ವಾಮಿ, ಬೆಳಗುಂಬ ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ಚಂದ್ರಮೋಹನ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.