ADVERTISEMENT

ಸೌಲಭ್ಯದ ಭರವಸೆ: ಪ್ರತಿಭಟನೆ ಅಂತ್ಯ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2012, 6:10 IST
Last Updated 10 ಮಾರ್ಚ್ 2012, 6:10 IST

ಚನ್ನರಾಯಪಟ್ಟಣ: ಪಟ್ಟಣದ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿಗೆ ಕುಡಿಯುವ ನೀರು, ಶೌಚಾಲಯ ಸೇರಿ ಅಗತ್ಯ ಸೌಲಭ್ಯ ಕಲ್ಪಿಸುವುದಾಗಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾರ್ಯ ದರ್ಶಿ, ಶಾಖಾ ಮಠಾಧೀಶರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ವಿದ್ಯಾರ್ಥಿಗಳು ನಡೆಸು ತ್ತಿದ್ದ ಪ್ರತಿಭಟನೆ ಶುಕ್ರವಾರ ಅಂತ್ಯ ಕಂಡಿತು.

ವಿವಿಧ ಸೌಲಭ್ಯ ನೀಡಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳು ಬುಧವಾರ ಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಸಿದ್ದರು. ಶುಕ್ರವಾರವೂ ವಿದ್ಯಾರ್ಥಿ ಗಳು ಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿಗಳು ಹೊರಹೋಗದಂತೆ ತಡೆಯಲು ಕಾಲೇಜು ದ್ವಾರಕ್ಕೆ ಬೀಗ ಹಾಕಿದರು.

ಶಾಮಿಯಾನದ ಒಂದು ಬದಿಯಲ್ಲಿ  ಚಂದ್ರಶೇಖರ್ ಅಜಾದ್, ಮತ್ತೊಂದು ಬದಿಯಲ್ಲಿ ಭಗತ್‌ಸಿಂಗ್ ಅವರ ಭಾವಚಿತ್ರ ಇರಿಸಿ ಹೂವಿನ ಹಾರ ಹಾಕಿದ್ದರು. ಕಾಲೇಜು ಪ್ರಾಚಾರ್ಯ ಪ್ರೊ. ಎನ್. ಸೋಮಸುಂದರ್ ವಿರುದ್ಧ ಘೋಷಣೆ ಕೂಗಿದರು. ವಿದ್ಯಾರ್ಥಿಗ ಳಿಂದಾಗುವ ಅನ್ಯಾಯಕ್ಕೆ ಇವರ ನಡವಳಿಕೆ ಕಾರಣ ಎಂದು ದೂರಿದರು. ಈ ನಡುವೆ ಇಬ್ಬರು ವಿದ್ಯಾರ್ಥಿಗಳು ಪ್ರಾಂಶುಪಾಲರು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು.

ಅಷ್ಟರಲ್ಲಿ ಸಂಸ್ಥೆಯ ಗೌರವ ಕಾರ್ಯದರ್ಶಿ ಎಚ್.ಎಸ್. ವಿಜಯ ಕುಮಾರ್, ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿ ಗಳ ಮನವೊಲಿಸಲು ಯತ್ನಿಸಿದ ರಾದರೂ ಅದಕ್ಕೆ ಒಪ್ಪಲಿಲ್ಲ. ಮಧ್ಯಾಹ್ನ ಕಾಲೇಜಿಗೆ ಆದಿಚುಂಚ ನಗಿರಿ ಮಹಾ ಸಂಸ್ಥಾನದ ಕಾರ್ಯ ದರ್ಶಿ ನಿರ್ಮಲಾನಂದ ನಾಥ ಸ್ವಾಮೀಜಿ, ಶಾಖಾ ಮಠಾಧೀಶ ಶಂಭು ನಾಥ ಸ್ವಾಮೀಜಿ, ಮಠದ ಶೈಕ್ಷಣಿಕ ವಿಭಾಗದ ಸಿಇಒ ಡಾ. ರಾಮೇಗೌಡ, ಶಿವೇಗೌಡ, ರಾಮಕೃಷ್ಣೇಗೌಡ ಆಗಮಿಸಿದ್ದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮಾತನಾಡಿ, ಈಗಿರುವ ಕುಡಿಯುವ ನೀರು, ಶೌಚಾಲಯದ ಸೌಲಭ್ಯ ಸಾಲುವುದಿಲ್ಲ, ಅದನ್ನು ಹೆಚ್ಚಿಸಬೇಕು, ನಿತ್ಯ ಶುಚಿತ್ವ ಕಾಪಾಡಬೇಕು. ವಿದ್ಯಾರ್ಥಿನಿಯರಿಗೆ ಶೌಚಾಲಯದ ಜತೆ ವಿಶ್ರಾಂತಿ ಕೊಠಡಿ ನಿರ್ಮಿಸಬೇಕು. ಪ್ರಯೋಗಾಲಯ ನವೀಕರಿಸಬೇಕು ಎಂದು ಒತ್ತಾಯಿಸಿದರು.

ಆದಿಚುಂಚನಗಿರಿ ಮಠದ ಕಾರ್ಯ ದರ್ಶಿ ನಿರ್ಮಲಾನಂದ ಸ್ವಾಮೀಜಿ ಮಾತನಾಡಿ ಎಲ್ಲ ಸಮಸ್ಯೆ ಬಗೆ ಹರಿಸುವ ಭರವಸೆ ನೀಡಿದರು. ವಾರಕೊಮ್ಮೆ ಶಾಖಾಮಠಾಧೀಶರಾದ ಶಂಭುನಾಥ ಸ್ವಾಮೀಜಿ, ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ್ದಾರೆ ಎಂದರು. ಎಚ್.ಎಸ್. ವಿಜಯಕುಮಾರ್, ಎಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ.ಎನ್. ಬಾಲಕೃಷ್ಣ ಆಗಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.