ADVERTISEMENT

ಹೊರಗಿನವರಿಗೆ ಮಣೆ; ಸ್ಥಳೀಯರ ಅತೃಪ್ತಿ

ಪ್ರಜಾವಾಣಿ ವಿಶೇಷ
Published 6 ಏಪ್ರಿಲ್ 2013, 5:53 IST
Last Updated 6 ಏಪ್ರಿಲ್ 2013, 5:53 IST

ಬೇಲೂರು: ಐವತ್ತು ವರ್ಷಗಳಿಂದ ಮೀಸಲು ಕ್ಷೇತ್ರವಾಗಿದ್ದ ಬೇಲೂರು ವಿಧಾನಸಭಾ ಕ್ಷೇತ್ರ ಕಳೆದ ವಿಧಾನ ಸಭೆ ಚುನಾವಣೆಯಿಂದ ಸಾಮಾನ್ಯ ಕ್ಷೇತ್ರವಾಗಿ ಪರಿವರ್ತನೆ ಗೊಂಡಿದೆ.

ಬಹುತೇಕ 50 ವರ್ಷ ಕಾಲ ಕ್ಷೇತ್ರದ ಹೊರಗಿನವರನ್ನೇ ಶಾಸಕರ ನ್ನಾಗಿ ಕಂಡಿದ್ದ ಈ ಕ್ಷೇತ್ರ, ಸಾಮಾನ್ಯ ಕ್ಷೇತ್ರವಾದ ನಂತರವಾದರೂ ಸ್ಥಳೀ ಯರಿಗೆ ಆದ್ಯತೆ ಸಿಗಬಹುದೆಂಬ ನಿರೀಕ್ಷೆ ಇತ್ತು. ಆದರೆ ಈ ಬಾರಿಯ ಚುನಾವಣೆಯಲ್ಲಿ ಮತ್ತೆ ಹೊರಗಿ ನವರ ಹೆಸರೇ ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ.

ಶುಕ್ರವಾರ ಸಂಜೆವರೆಗೂ ಕೆಜೆಪಿ, ಬಿಜೆಪಿ, ಕಾಂಗ್ರೆಸ್ ಬಿಟ್ಟು ಉಳಿದ ಪಕ್ಷದವರು ಅಧಿಕೃತವಾಗಿ ತಮ್ಮ ಅಭ್ಯರ್ಥಿಯನ್ನು ಘೋಷಿಸಿಲ್ಲ. ಸಕಲೇಶಪುರದ ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಇಲ್ಲಿ ಕೆಜೆಪಿ ಅಭ್ಯರ್ಥಿಯಾಗಿದ್ದಾರೆ.

ವಿಶ್ವನಾಥ್‌ಗೆ ಟಿಕೆಟ್ ದೊರೆತಿ ರುವುದು ಶಿವರುದ್ರಪ್ಪ ಮತ್ತು ಕೊರಟಿಕೆರೆ ಪ್ರಕಾಶ್ ಅವರ ಅಸಮಾ ಧಾನಕ್ಕೆ ಕಾರಣವಾಗಿದೆ ಯಲ್ಲದೆ, ಸ್ಥಳೀಯರಿಗೆ ಮತ್ತು ಲಿಂಗಾಯಿತರಿಗೆ ಟಿಕೆಟ್ ನೀಡದೆ ಯಡಿಯೂರಪ್ಪ ಮೋಸ ಮಾಡಿದ್ದಾರೆ ಎಂದು ಬಹಿರಂಗವಾಗಿಯೇ ಕಿಡಿಕಾರಿದ್ದಾರೆ.

ಇಬ್ಬರಲ್ಲಿ ಒಬ್ಬರು ಕೆಜೆಪಿ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿ ಸಲು ಚಿಂತನೆ ನಡೆಸಿ ಬೆಂಬಲಿಗರ ಸಭೆಯನ್ನೂ ಈಗಾಗಲೇ ನಡೆಸಿದ್ದಾರೆ.
ರುದ್ರೇಶಗೌಡರಿಗೆ ಇನ್ನೊಂದು ಅವಕಾಶ: ಹಾಲಿ ಶಾಸಕರಿಗೆ ಟಿಕೆಟ್ ನೀಡಬೇಕು ಎಂಬ  ಕಾಂಗ್ರೆಸ್ ಪದ್ಧತಿ ಯಂತೆ ಶಾಸಕ ರುದ್ರೇಶಗೌಡರಿಗೆ ಈ ಬಾರಿಯೂ ಟಿಕೆಟ್ ಘೋಷಣೆ ಆಗಿದೆ.

ಕ್ಷೇತ್ರದಲ್ಲಿ ಲಿಂಗಾಯಿತ ಸಮು ದಾಯದವರು ದೊಡ್ಡ ಪ್ರಮಾಣ ದಲ್ಲಿ ಇರುವುದರಿಂದ ಈ ಸಮುದಾ ಯದವರಿಗೇ ಟಿಕೆಟ್ ನೀಡುವಂತೆ ಬಿ.ಕೆ.ಚಂದ್ರಕಲಾ, ಬೆಂಗಳೂರಿನಲ್ಲಿ ವಿಶೇಷ ಜಿಲ್ಲಾಧಿಕಾರಿಯಾಗಿದ್ದ ನಾಗೇಂದ್ರ ಸಹ ಕಾಂಗ್ರೆಸ್ ಟಿಕೆಟ್ ಪ್ರಯತ್ನಿಸಿದ್ದರು.

ಜವರೇಗೌಡ ಪ್ರಬಲ ಆಕಾಂಕ್ಷಿ: ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಕೆ. ಜವರೇಗೌಡ ಅವರು ಕ್ಷೇತ್ರ ದಿಂದ ಜೆಡಿಎಸ್‌ನ ಪ್ರಬಲ ಆಕಾಂಕ್ಷಿ. ಸುಮಾರು ಎರಡು ವರ್ಷ ಹಿಂದೆಯೇ ಅವರ ಹೆಸರನ್ನು ಪಕ್ಷ ಪರೋಕ್ಷವಾಗಿ ಘೋಷಿಸಿತ್ತು. ಸತತ ವಾಗಿ ಕ್ಷೇತ್ರದಲ್ಲಿ ಓಡಾಡಿದ್ದ ಅವರು ಕ್ಷೇತ್ರದಲ್ಲಿ ಮೂರನೇ ಸ್ಥಾನದಲ್ಲಿದ್ದ ಪಕ್ಷವನ್ನು ತಾಲ್ಲೂಕು ಪಂಚಾಯಿತಿ, ಪುರ ಸಭೆಯ ಚುನಾವಣೆಯಲ್ಲಿ ಮೇಲೆ ತ್ತಿದ್ದಾರೆ. ಈಗ ಅಲ್ಲಿಂದ ಭವಾನಿ ರೇವಣ್ಣಅವರ ಹೆಸರೂ ಕೇಳುತ್ತಿದೆ.

ಲಿಂಗಾಯಿತ ವರ್ಗಕ್ಕೆ ಸೇರಿದ ಕೆ.ಎಸ್.ಲಿಂಗೇಶ್ ಮತ್ತು ಕುರುಬ ಜನಾಂಗಕ್ಕೆ ಸೇರಿದ ಬಿ.ಸಿ. ಮಂಜುನಾಥ್ ಅವರೂ ಸ್ಥಳೀಯರು ಎಂಬ ಕಾರಣ ಇಟ್ಟು ಟಿಕೆಟ್ ಕೇಳುತ್ತಿದ್ದಾರೆ.

ಬಿಜೆಪಿಗೆ ಲಕ್ಷ್ಮಣ: ಬಿಜೆಪಿ ಶುಕ್ರವಾರ ಸಂಜೆ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ. ಜಾವಗಲ್ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಇ.ಎಚ್.ಲಕ್ಷ್ಮಣ್‌ಗೆ ಟಿಕೆಟ್ ಖಚಿತವಾಗಿದೆ.

ಬಿಜೆಪಿ ಅಧ್ಯಕ್ಷ ರೇಣುಕುಮಾರ್, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅಭಿಗೌಡ ಅವರೂ ಟಿಕೆಟ್‌ಗೆ ಪ್ರಯತ್ನಿಸಿದ್ದರು.
ಒಟ್ಟಾರೆ ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಚತುಷ್ಕೋನ ಸ್ಪರ್ಧೆ ಏರ್ಪಡುವ ಲಕ್ಷಣ ಕಾಣಿಸುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯ ಬಳಿಕ ಸ್ಪಷ್ಟ ಚಿತ್ರಣ ದೊರೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.