ADVERTISEMENT

260 ಸಿಬ್ಬಂದಿ ಕರ್ತವ್ಯಕ್ಕೆ ಹಾಜರು

ಹಾಸನ ಬಸ್‌ ನಿಲ್ದಾಣದಿಂದ ಬುಧವಾರ 130 ಬಸ್‌ಗಳ ಸಂಚಾರ: ಪ್ರಯಾಣಿಕರ ಹರ್ಷ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2021, 4:50 IST
Last Updated 15 ಏಪ್ರಿಲ್ 2021, 4:50 IST
ಹಾಸನದ ಹೊಸ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರು ಸಾರಿಗೆ ಸಂಸ್ಥೆ ಬಸ್‌ ಇಳಿದು ನಿಲ್ದಾಣದಿಂದ ಹೊರ ನಡೆದರು
ಹಾಸನದ ಹೊಸ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರು ಸಾರಿಗೆ ಸಂಸ್ಥೆ ಬಸ್‌ ಇಳಿದು ನಿಲ್ದಾಣದಿಂದ ಹೊರ ನಡೆದರು   

ಹಾಸನ: 6ನೇ ವೇತನ ಆಯೋಗದ ವರದಿ ಜಾರಿಗೆ ಆಗ್ರಹಿಸಿ ರಾಜ್ಯದಾದ್ಯಂತ ಸಾರಿಗೆ ಸಂಸ್ಥೆ ನೌಕರರು ನಡೆಸುತ್ತಿರುವ ಮುಷ್ಕರ ಎಂಟನೇ ದಿನಕ್ಕೆ ಕಾಲಿಟ್ಟಿದ್ದು, ಹಾಸನದಲ್ಲಿ260ಕ್ಕೂ ಹೆಚ್ಚುಮಂದಿ ನಿರ್ವಾಹಕರು ಮತ್ತು ಚಾಲಕರು ಕರ್ತವ್ಯಕ್ಕೆ ಹಾಜರಾದರು.

ಮುಷ್ಕರದ ನಡುವೆ ಹೆಚ್ಚಿನ ಸಂಖ್ಯೆಯಲ್ಲಿ ಸಾರಿಗೆ ಸಂಸ್ಥೆಬಸ್‌ಗಳುಬುಧವಾರ ರಸ್ತೆಗೆ ಇಳಿದಿವೆ. ಹಾಸನ ಬಸ್‌ ನಿಲ್ದಾಣದಿಂದ, ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಮಂಗಳೂರು ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕುಗಳಿಗೆ ಸಂಜೆ ವೇಳೆಗೆ 130ಕ್ಕೂ ಹೆಚ್ಚು ಬಸ್‌ಗಳು ಸಂಚಾರ ನಡೆಸಿದವು.

ನೌಕರರು ಮುಷ್ಕರದ ನಡುವೆಯೂ ಕರ್ತವ್ಯಕ್ಕೆ ಹಾಜರಾಗಿದ್ದು, ಸಾಕಷ್ಟು ಮಾರ್ಗಗಳಲ್ಲಿ ಬಸ್‌ಗಳ ಸಂಚಾರ ಆರಂಭಿಸಲಾಗಿದೆ. ಸಾಲು ಸಾಲು ಸರ್ಕಾರಿ ರಜೆ ಮುಗಿಸಿ ನಗರಗಳಿಗೆ ಮರಳುವವರಿಗೆ ಸಾಕಷ್ಟು ಅನುಕೂಲ ವಾಗಿದೆ ಎಂದು ನಿಲ್ದಾಣ ಮೇಲ್ವಿಚಾರಕ ಮಂಜುನಾಥ್‌ ಹೇಳಿದರು.

ADVERTISEMENT

ಕೆಲವು ಮಾರ್ಗಗಳಿಗೆ ಹಾಗೂ ಗ್ರಾಮೀಣ ಭಾಗದಲ್ಲಿ ಬಸ್‌ಗಳ ಸಂಚಾರ ಇಲ್ಲದೆ ಪ್ರಯಾಣಿಕರು ಪರದಾಡುವಂತಾಯಿತು. ಸಾರಿಗೆ ಸಂಸ್ಥೆ ಬಸ್ ಗಳ ಜೊತೆಗೆ ಖಾಸಗಿ ಬಸ್ ಗಳು ಸಂಚಾರವೂ ಇತ್ತು.

ನಗರದ ಎನ್‌.ವೃತ್ತದ ಬಳಿ ಬಿ.ಎಂ. ರಸ್ತೆಯಲ್ಲಿ ಹಾಗೂ ನಗರ ಬಸ್‌ ನಿಲ್ದಾಣದಲ್ಲಿ ಖಾಸಗಿ ಬಸ್‌ಗಳು ಸಾಲುಗಟ್ಟಿ ನಿಂತಿದ್ದವು. ಹೊರ ಜಿಲ್ಲೆಗಳಿಂದಲೂ ಹಾಸನಕ್ಕೆ ಖಾಸಗಿ ಬಸ್‌ಗಳು ಹಾಗೂ ಟಿ.ಟಿ ವಾಹನಗಳು ಬಂದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.