ADVERTISEMENT

ಬಸ್‌ ನಿಲ್ದಾಣದ ನವೀಕರಣ ಕಾಮಗಾರಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2018, 10:47 IST
Last Updated 15 ಜನವರಿ 2018, 10:47 IST

ಶ್ರವಣಬೆಳಗೊಳ: ಪಟ್ಟಣದಲ್ಲಿ ಕೈಗೊಂಡಿರುವ ಬಸ್ ನಿಲ್ದಾಣ ನವೀಕರಣ ಕಾಮಗಾರಿಯನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಕೆ.ಎಸ್.ವಿಶ್ವನಾಥ್, ಇಲಾಖೆ ಎಂಜಿನಿಯರ್‌ಗಳು ಪರಿಶೀಲನೆ ನಡೆಸಿದರು.

ಮಹಾ ಮಸ್ತಕಾಭಿಷೇಕ ಸಂದರ್ಭದಲ್ಲಿ ದೇಶದ ವಿವಿಧ ಭಾಗಗಳಿಂದ ಬರುವ ವಾಹನಗಳ ಸಂಖ್ಯೆ, ನಿಲುಗಡೆ, ನಗರ ಸಾರಿಗೆ ಬಸ್‌ಗಳ ಸಂಚಾರ ಹಾಗೂ ತಾತ್ಕಾಲಿಕ ಬಸ್ ನಿಲ್ದಾಣಗಳ ಪ್ರಗತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

‘ಸಾರಿಗೆ ವ್ಯವಸ್ಥೆಗೆ ಸರ್ಕಾರ ₹ 3.24 ಕೋಟಿ ಬಿಡುಗಡೆ ಮಾಡಿದ್ದು, ₹ 46 ಲಕ್ಷವನ್ನು ತಾತ್ಕಾಲಿಕ ಬಸ್ ನಿಲ್ದಾಣ ನಿರ್ಮಾಣಕ್ಕೆ ಬಳಸಲಾಗುವುದು. ಉಳಿದ ₹ 2.78 ಕೋಟಿ ಅನುದಾನದಲ್ಲಿ ಬಸ್ ನಿಲ್ದಾಣ ಕಟ್ಟಡದ ಮೊದಲ ಮಹಡಿಯಲ್ಲಿ 10 ವಿಶ್ರಾಂತಿ ಕೊಠಡಿಗಳು, ಮೇಲ್ಛಾವಣಿ ಹಾಗೂ ಕಾಂಕ್ರೀಟ್ ನೆಲಹಾಸುಗಳನ್ನು ಬಳಸಿ ನವೀಕರಿಸಲಾಗುವುದು ಎಂದರು.

ADVERTISEMENT

ಶ್ರವಣಬೆಳಗೊಳಕ್ಕೆ ಆಗಮಿಸುವ ಪ್ರವಾಸಿಗರಿಗೆ ಹೆಚ್ಚುವರಿಯಾಗಿ ವಿವಿಧ ಭಾಗಗಳಿಂದ ಸುಮಾರು 170 ಬಸ್‌ ವ್ಯವಸ್ಥೆ ಮಾಡಲಾಗಿದ್ದು, ತಾತ್ಕಾಲಿಕ ಬಸ್ ನಿಲ್ದಾಣಗಳಿಂದ ಶ್ರವಣಬೆಳಗೊಳ ಪಟ್ಟಣಕ್ಕೆ ಸುಮಾರು 60 ಮಿನಿ ಬಸ್‌ ಸಂಚರಿಸಲಿದೆ ಎಂದರು.
ತಾತ್ಕಾಲಿಕ ಉಪನಗರಗಳಿಗೆ ಭೇಟಿ ನೀಡಿ ಮಹಾಮಸ್ತಕಾಭಿಷೇಕದ ಕಾರ್ಯದರ್ಶಿ ವಿನೋದ್ ದೊಡ್ಡಣ್ಣನವರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.