ADVERTISEMENT

ಮಧ್ಯಪ್ರದೇಶದಿಂದ ಪಾದಯಾತ್ರೆಯಲ್ಲಿ ಬಂದ ಜೈನ ಮುನಿಗಳು

​ಪ್ರಜಾವಾಣಿ ವಾರ್ತೆ
Published 29 ಜನವರಿ 2018, 10:03 IST
Last Updated 29 ಜನವರಿ 2018, 10:03 IST

ಅರಸೀಕೆರೆ: ಶ್ರವಣಬೆಳಗೊಳದಲ್ಲಿ ಗೊಮ್ಮಟನಿಗೆ ಫೆ. 17ರಿಂದ ಜರುಗಲಿರುವ ಮಹಾಮಸ್ತಭಿಷೇಕ ನಿಮಿತ್ತ ಮಧ್ಯ ಪ್ರದೇಶದ ಇಂದೊರ್‌ನಿಂದ 1970 ಕಿ.ಮಿ ಪಾದಯಾತ್ರೆ ಮೂಲಕ ಜಿಲ್ಲೆಗೆ ಬಂದ 30 ಮಂದಿ ಜೈನ ಮುನಿಗಗಳು ತಾಲ್ಲೂಕಿನ ಸುಕ್ಷೇತ್ರ ಮಾಡಾಳು ಸ್ವರ್ಣಗೌರಿ ದೇವಿ ಸಮುದಾಯ ಭವನದಲ್ಲಿ ಭಾನುವಾರ ವಾಸ್ತವ್ಯ ಮಾಡಿ ವಿಶ್ರಾಂತಿ ಪಡೆದರು. ಬೆಳಿಗ್ಗೆ 8 ಗಂಟೆಗೆ ಬಂದ ಜೈನಮುನಿಗಳಿಗೆ ಆಚಾರ್ಯ ವಿಶುಧ ಸಾಗರ್‌ ಮಹಾರಾಜ್‌ ಅವರು ಬಗ್ಗೆ ಪ್ರವಚನ ನೀಡಿದರು.

ಅಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ, ಮೈತ್ರಿಯಿಂದ ಪ್ರಗತಿ, ಧ್ಯಾನದಿಂದ ಸಿದ್ಧಿ ಈ ನಾಲ್ಕು ಸಂದೇಶಗಳನ್ನು ಮಹಾನ್‌ ತ್ಯಾಗಿ ಬಾಹುಬಲಿ ಸಾರಿದ್ದಾರೆ. ಪ್ರಾರ್ಥನೆಗಳಿಂದ ಮನಸ್ಸು ಶುದ್ಧಿಯಾಗುತ್ತದೆ. ಪ್ರತಿಯೊಂದು ಕೆಲಸದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ಸಮಯದ ಸದುಪಯೋಗ ಪಡಿಸಿಕೊಳ್ಳಬೇಕು. ಭಕ್ತಿ ಇದ್ದರೆ ಶ್ರದ್ಧೆ ತಾನಾಗಿಯೇ ಬರುತ್ತದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT