ADVERTISEMENT

ಮಠಕ್ಕೆ ಉಪನಗರಗಳ ಬೀಗದ ಕೀಲಿ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2018, 9:07 IST
Last Updated 3 ಫೆಬ್ರುವರಿ 2018, 9:07 IST

ಶ್ರವಣಬೆಳಗೊಳ: ಪಟ್ಟಣದ ಹೊರವಲಯದಲ್ಲಿ 12 ಉಪನಗರಗಳನ್ನು ಮಠದ ಸಂಪ್ರದಾಯದಂತೆ ನಿರ್ಮಿಸಿ ಹಸ್ತಾಂತರ ಮಾಡಲಾಗಿದೆ ಎಂದು ಸಚಿವ ಎ.ಮಂಜು ಹೇಳಿದರು.

ವಿಂಧ್ಯಗಿರಿ ಬೆಟ್ಟದ ಸ್ವಾಗತ ಕಚೇರಿಯಲ್ಲಿ ಉಪನಗರಗಳ ಬೀಗದ ಕೀಲಿಯನ್ನು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗೆ ಹಸ್ತಾಂತರ ಮಾಡಿ ಮಾತನಾಡಿದರು.

ಅಂತರರಾಷ್ಟ್ರೀಯ ಮಟ್ಟದ ಕಾರ್ಯಗಳನ್ನು ನಿರ್ವಹಿಸಿರುವುದು ಸರ್ಕಾರಕ್ಕೆ ಹೆಮ್ಮೆಯ ವಿಷಯವಾಗಿದೆ. ಅಧಿಕಾರಿಗಳು ಹಾಗೂ ಸಿಬ್ಬಂದಿ ಸಹಕಾರ ಇದೇ ರೀತಿ ಮುಂದುವರಿಯುತ್ತದೆ ಎಂದರು.

ADVERTISEMENT

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಮಹೋತ್ಸವ ಕ್ಷಣಗಣನೆ ಆರಂಭವಾಗಿದೆ. ಉಪನಗರಗಳ ಕೀ ಹಸ್ತಾಂತರಿಸಿರುವುದು ಸಂತೋಷದ ವಿಷಯ. ಈಗಾಗಲೇ ತ್ಯಾಗಿ ನಗರದಲ್ಲಿ ಆಚಾರ್ಯರು, ಮುನಿಗಳು ಮಾತಾಜಿಗಳ ಸೇರಿದಂತೆ ಸುಮಾರು 310 ತ್ಯಾಗಿಗಳು ವಾಸ್ತವ್ಯ ಹೂಡಿದ್ದಾರೆ. ತ್ಯಾಗಿ ನಗರ ಬಹುತೇಕ ಭರ್ತಿಯಾಗಿದ್ದು, ತ್ಯಾಗಿಗಳನ್ನು ಸ್ವಾಗತಿಸಿದ ಬಳಿಕ ನಗರಕ್ಕೆ ಬಿಡಲಾಗುತ್ತಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.