ADVERTISEMENT

ಶ್ರವಣಬೆಳಗೊಳ: ಭಕ್ತರಿಗೆ ವಸ್ತ್ರ, ಆಹಾರ ಧಾನ್ಯ ದಾನ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2018, 6:06 IST
Last Updated 4 ಫೆಬ್ರುವರಿ 2018, 6:06 IST
ಶ್ರವಣಬೆಳಗೊಳದಲ್ಲಿ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಚತುರ್ವಿದ ದಾನ ನೀಡಿದರು
ಶ್ರವಣಬೆಳಗೊಳದಲ್ಲಿ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಚತುರ್ವಿದ ದಾನ ನೀಡಿದರು   

ಶ್ರವಣಬೆಳಗೊಳ: ಯಾವುದೇ ಶುಭ ಸಂದರ್ಭಕ್ಕೆ ಚಾಲನೆ ನೀಡುವ ಮೊದಲು ಜನಸಾಮಾನ್ಯರಿಗೆ ಹೊಸ ಬಟ್ಟೆ ಹಾಗೂ ಸಿಹಿ ಭೋಜನ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡುವುದು ಸಂಪ್ರದಾಯ ಎಂದು ಕ್ಷೇತ್ರದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಪಟ್ಟಣದ ಚಾವುಂಡರಾಯ ಮಂಟಪದಲ್ಲಿ 'ಚತುರ್ವಿದ ದಾನ ಪ್ರವರ್ತನೆ ಸಮಾರಂಭ' ಮಾತನಾಡಿದ ಅವರು, ಕ್ಷೇತ್ರದ ಪೂರ್ವ ಪರಂಪರೆಯಂತೆ ಆಹಾರ, ಔಷಧ, ಶಾಸ್ತ್ರ ಹಾಗೂ ಅಭಯ ಎಂಬ ನಾಲ್ಕು ತರಹದ ದಾನ ನೀಡುವ ಸಂಪ್ರದಾಯ ನಡೆಸಿಕೊಂಡು ಬರಲಾಗುತ್ತಿದೆ ಎಂದರು.

ಬೆಳಗೊಳದಲ್ಲಿ ನಡೆಯುವ ಜಾತ್ರೆ, ಇತರೆ ಶುಭ, ಸಂದರ್ಭಗಳಲ್ಲಿ ದಾನಗಳನ್ನು ನೀಡುತ್ತಾ ಬಂದಿದ್ದೇವೆ. ಮಹಾಮಸ್ತಕಾಭಿಷೇಕದ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕು. ಸುತ್ತಮುತ್ತಲಿನ ಬಸದಿಗಳಲ್ಲಿ ಪೂಜೆ ಸಲ್ಲಿಸುವ ಪುರೋಹಿತರಿಗೆ ಹಾಗೂ ಮಠದ ವಿವಿಧ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ, ಸುತ್ತಮುತ್ತಲ ಗ್ರಾಮ ಪಂಚಾಯಿತಿ ನೌಕರರಿಗೆ ಈ ಸಂದರ್ಭದಲ್ಲಿ ಅಕ್ಕಿ, ಬೆಲ್ಲ, ಗೋಧಿ, ಎಣ್ಣೆ, ಉಪ್ಪು, ಹುಣಸೆ ಹಣ್ಣು, ಸಾಂಬರ್‌ ಪದಾರ್ಥ, ಸೀರೆ, ಶಲ್ಯ ಹಾಗೂ ಪಂಚೆಗಳನ್ನು ದಾನವಾಗಿ ನೀಡಲಾಯಿತು.

ADVERTISEMENT

ಕಾರ್ಯಕ್ರಮದಲ್ಲಿ ಮಹಾಮಸ್ತಕಾಭಿ ಷೇಕ ಮಹೋತ್ಸವ ರಾಷ್ಟ್ರೀಯ ಸಮಿತಿ ಅಧ್ಯಕ್ಷೆ ಸರಿತಾ ಎಂ.ಕೆ.ಜೈನ್, ಮಹೋತ್ಸವದ ಪ್ರಧಾನ ಕಾರ್ಯದರ್ಶಿ ಸತೀಶ್ ಜೈನ್, ಎಸ್‌ಡಿಜೆಎಂಐಎಂಸಿ ಸದಸ್ಯರಾದ ಎಚ್‌.ಪಿ,ಅಶೋಕ್ ಕುಮಾರ್, ಎಸ್.ಪಿ.ಭಾನುಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.