
ಹಾಸನ: ‘ನಮ್ಮ ಸಂವಿಧಾನ ಬಹಳ ಶ್ರೇಷ್ಠವಾಗಿದೆ. ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ, ಪತ್ರಿಕಾ ರಂಗವು ಒಳಗೊಂಡಂತೆ ಪ್ರಜಾಪ್ರಭುತ್ವದ ಹಾದಿಯಲ್ಲಿ ಸ್ಥಾಪಿತಗೊಂಡಿದೆ. ಭಾರತದ 77ನೇ ಗಣರಾಜ್ಯೋತ್ಸವವನ್ನು ಹಬ್ಬದ ರೀತಿ ಆಚರಣೆ ಮಾಡಲಾಗುತ್ತಿದೆ’ ಎಂದು ಹಾಸನ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅರ್.ಟಿ. ದ್ಯಾವೇಗೌಡ ಹೇಳಿದರು.
ನಗರದ ಮಲೆನಾಡು ಎಂಜಿನಿಯರಿಂಗ್ ಕಾಲೇಜು ಅವರಣದಲ್ಲಿ ನಡೆದ ಗಣರಾಜ್ಯೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಚೌಡುವಳ್ಳಿ ಜಗದೀಶ್ ಧ್ವಜಾರೋಹಣ ನೆರವೇರಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಎ.ಅಮರೇಂದ್ರ, ಖಜಾಂಚಿ ಎಚ್.ಡಿ. ಪಾರ್ಶ್ವನಾಥ್, ನಿರ್ದೇಶಕರಾದ ಬಿ.ಆರ್. ರಾಜಶೇಖರ್, ಶಾಂತಿಗ್ರಾಮ ಶಂಕರ್, ಕಾಲೇಜು ನಿರ್ದೇಶಕ ಡಾ.ಎಸ್. ಪ್ರದೀಪ್, ದೈಹಿಕ ಶಿಕ್ಷಣ ನಿರ್ದೇಶಕ ಸೋಮಶೇಖರ್ ಉಪಸ್ಥಿತರಿದ್ದರು. ಡಾ. ಕೀರ್ತಿ ಸ್ವಾಗತಿಸಿದರು. ಜಿ.ಪಾಂಡುಕುಮಾರ್ ವಂದಿಸಿದರು.
ಮಲ್ನಾಡ್ ಹಿಪ್ಪೋ ಇಂಟರ್ ನಾಷನಲ್ ಶಾಲೆ:
ಮುಖ್ಯ ಶಿಕ್ಷಕಿ ಹೇಮಲತಾ ಧ್ವಜಾರೋಹಣ ನೇರವೇರಿಸಿದರು. ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಚೌಡುವಳ್ಳಿ ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಮಲೆನಾಡು ಹಿಪ್ಪೋ ಇಂಟರ್ ನ್ಯಾಷನಲ್ ಶಾಲೆಯ ಉಪಾಧ್ಯಕ್ಷ ಬಿ.ಆರ್. ರಾಜಶೇಖರ್, ವಿಕಲಚೇತನ ಶಾಲೆಯ ಮಕ್ಕಳು, ಮಲ್ನಾಡ್ ಹಿಪ್ಪೋ ಇಂಟರ್ ನ್ಯಾಷನಲ್ ಶಾಲೆಯ ಮಕ್ಕಳು, ಶಿಕ್ಷಕರು, ಸಿಬ್ಬಂದಿ ಭಾಗವಹಿಸಿದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.
ಹಾರನಹಳ್ಳಿ ರಾಮಸ್ವಾಮಿ ಉನ್ನತ ಶಿಕ್ಷಣ ಸಂಸ್ಥೆ:
ಸಂಸ್ಥೆಯ ಎಂಬಿಎ ಹಾಗೂ ಕಾಮರ್ಸ್ ಪಿ.ಯು. ಹಾಗೂ ಪದವಿ ಕಾಲೇಜು ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಚೌಡುವಳ್ಳಿ ಜಗದೀಶ್ ಧ್ವಜಾರೋಹಣ ಮಾಡಿದರು. ನಿರ್ದೇಶಕ ಬಿ.ಆರ್. ರಾಜಶೇಖರ್, ಎಂ.ಬಿ.ಎ. ಕಾಲೇಜು ಪ್ರಾಂಶುಪಾಲ ಅರುಣ್ ಕುಮಾರ್, ಕಟ್ಟಾಯ ಶಿವಕುಮಾರ್, ಉಪನ್ಯಾಸಕರು, ನೌಕರರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಟೈಮ್ಸ್ ಅಂತರ ರಾಷ್ಟ್ರೀಯ ಶಾಲೆ:
ಇಲ್ಲಿನ ವಿಜಯನಗರ ಬಡಾವಣೆಯ ಶಾಲೆಯಲ್ಲಿ ಸಂಸ್ಥೆಯ ಅಧ್ಯಕ್ಷ ಕೃಷ್ಣೇಗೌಡ ಡಿ. ಧ್ವಜಾರೋಹಣ ನಡೆದರು. ಶಾಲಾ ಮುಖ್ಯ ಶಿಕ್ಷಕಿ ಹಾಗೂ ಶಾಲಾ ಶಿಕ್ಷಕರು, ಸಿಬ್ಬಂದಿಗಳು ಹಾಜರಿದ್ದರು.
ಜಿಲ್ಲಾಡಳಿತದಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ ಟೈಮ್ಸ್ ಶಾಲೆಯ ಪ್ರೌಢಶಾಲಾ ಹಂತದ ಬಾಲಕಿಯರ ತಂಡ ಭಾಗವಹಿಸಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಹಿರಿಯ ಪ್ರಾಥಮಿಕ ಪ್ರೌಢಶಾಲಾ ಹಂತದಲ್ಲಿ ಬಾಲಕರ ತಂಡ ದ್ವಿತೀಯ ಬಹುಮಾನ ಪಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.