ADVERTISEMENT

ವಿದ್ಯುತ್ ಉಪ ಕೇಂದ್ರಕ್ಕಾಗಿ ಏಕಾಂಗಿ ಧರಣಿ

ಹಾಸನ ಡಿ.ಸಿ ಕಚೇರಿ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2019, 10:18 IST
Last Updated 19 ನವೆಂಬರ್ 2019, 10:18 IST
ಧರಣಿ ಕುಳಿತ ಕೆ.ಎಸ್. ತೀರ್ಥಪ್ಪ
ಧರಣಿ ಕುಳಿತ ಕೆ.ಎಸ್. ತೀರ್ಥಪ್ಪ   

ಹಾಸನ: ಬೇಲೂರು ತಾಲ್ಲೂಕಿನ ಬಿಕ್ಕೋಡು ಹೋಬಳಿಯ ಹಲವು ಗ್ರಾಮಗಳಲ್ಲಿ ದಿನಪ್ರತಿ ವಿದ್ಯುತ್ ಸಮಸ್ಯೆ ಎದುರಾಗುತ್ತಿದ್ದು ಇಲ್ಲಿ ವಿದ್ಯುತ್ ಉಪಕೇಂದ್ರ ಸ್ಥಾಪಿಸಬೇಕು ಎಂದು ಆಗ್ರಹಿಸಿ ಬೇಲೂರಿನ ಸಾಮಾಜಿಕ ಕಾರ್ಯಕರ್ತ ಕೆ.ಎಸ್. ತೀರ್ಥಪ್ಪ ಜಿಲ್ಲಾಧಿಕಾರಿ ಕಚೇರಿ ಎದುರು ಏಕಾಂಗಿ ಧರಣಿ ನಡೆಸಿದರು.

ಕೆಸಗೋಡು, ವಳಲು ಶಿಂಗ್ರವಳ್ಳಿ, ಹೆದ್ದವಳ್ಳಿ, ಲಕ್ಕುಂದ, ವಸಂತಕೋಲು, ಹಿರಿವಾಟೆ, ಕೆರ್ಲೂರು, ಬೊಳೇನಹಳ್ಳಿ, ರಾಜನಹಳ್ಳಿ, ಮದಘಟ್ಟ, ಪಡುವಳಲು, ಕೃಷ್ಣಾಪುರ, ದೊಡ್ಡಿಹಳ್ಳಿ, ಈಚಲಹಳ್ಳಿ, ಸೋಮನಹಳ್ಳಿ ಸೇರಿದಂತೆ ಹತ್ತಾರು ಹಳ್ಳಿಗಳಿಗೆ ವಿದ್ಯುತ್ ಸಮಸ್ಯೆ ಎದುರಾಗುತ್ತಿದೆ. ಇಲ್ಲಿ ವಿದ್ಯುತ್ ಉಪಕೇಂದ್ರ ಸ್ಥಾಪಿಸಿಕೊಡುವಂತೆ ಹಿಂದಿನ ಜಿಲ್ಲಾಧಿಕಾರಿಗಳ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡರು.

ಈ ಭಾಗದ ಜನರು ಹೆಚ್ಚಾಗಿ ಕೃಷಿಯನ್ನೇ ಅವಲಂಬಿಸಿದ್ದು, ಭೂಮಿಗೆ ನೀರು ಹಾಯಿಸಲು, ಯಂತ್ರೋಪಕರಣಗಳ ಚಾಲನೆಗೂ ವಿದ್ಯುತ್ ಇಲ್ಲದೆ ತೊಡಕಾಗುತ್ತಿದೆ ಇನ್ನಾದರೂ ಸಂಬಂಧಿಸಿದವರು ಗಮನಹರಿಸಿ ಸೂಕ್ತ ಪರಿಹಾರ ಒದಗಿಸಿಕೊಡುವಂತೆ ಆಗ್ರಹಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.