ADVERTISEMENT

ಶಾಸಕ ಶಿವಲಿಂಗೇಗೌಡರ ಕಾರಿಗೆ ಪೊಲೀಸ್‌ ಜೀಪು ಡಿಕ್ಕಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2025, 23:22 IST
Last Updated 25 ಫೆಬ್ರುವರಿ 2025, 23:22 IST
ಕೆ.ಎಂ.ಶಿವಲಿಂಗೇಗೌಡ
ಕೆ.ಎಂ.ಶಿವಲಿಂಗೇಗೌಡ   

ಬೆಂಗಳೂರು: ಅರಸೀಕೆರೆ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರ ಕಾರಿಗೆ ಪೊಲೀಸ್‌ ಜೀಪೊಂದು ಡಿಕ್ಕಿ ಹೊಡೆದ ಪರಿಣಾಮ ಕಾರಿನ ಬಾಗಿಲು ಜಖಂಗೊಂಡಿದೆ. ಶಾಸಕರ ಭವನದ ಆವರಣದಲ್ಲಿ ಮಂಗಳವಾರ ಘಟನೆ ಸಂಭವಿಸಿದೆ.

ಶಿವಲಿಂಗೇಗೌಡ ಅವರು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರಾಗಿರುವ ಕಾರಣ ಅವರಿಗೆ ಸರ್ಕಾರಿ ಕಾರು ನೀಡಲಾಗಿತ್ತು. ಚಾಲಕ ಕಾರನ್ನು ಶಾಸಕರ ಭವನದ ಆವರಣದಲ್ಲಿ ನಿಲುಗಡೆ ಮಾಡಿದ್ದರು. ಆಗ ಅಪಘಾತ ಸಂಭವಿಸಿದೆ.

‘ಪೊಲೀಸ್‌ ಜೀಪ್‌ ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಅನಾಹುತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಏರ್‌ಬ್ಯಾಗ್‌ ಸಹ ತೆರೆದುಕೊಂಡಿದೆ. ಕಾರಿನಲ್ಲಿ ಯಾರೂ ಇರಲಿಲ್ಲ’ ಎಂದು ಮೂಲಗಳು ತಿಳಿಸಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.