ADVERTISEMENT

ಹತ್ತು ಸಾವಿರ ದಾಟಿದ ಸಕ್ರಿಯ ಪ್ರಕರಣ

​ಪ್ರಜಾವಾಣಿ ವಾರ್ತೆ
Published 5 ಮೇ 2021, 14:34 IST
Last Updated 5 ಮೇ 2021, 14:34 IST

ಹಾಸನ: ಜಿಲ್ಲೆಯಲ್ಲಿ ಬುಧವಾರ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ ಹತ್ತು ಸಾವಿರ ದಾಟಿದೆ. ಒಂದೇ ದಿನ 1603 ಜನರಿಗೆ ಸೋಂಕು ತಗುಲಿದ್ದು,ಚಿಕಿತ್ಸೆಗೆ ಸ್ಪಂದಿಸದೆ 10 ಮಂದಿ ಮೃತಪಟ್ಟಿದ್ದಾರೆ.

ಒಟ್ಟು ಸೋಂಕಿತರ ಸಂಖ್ಯೆ 46695ಕ್ಕೆ ಏರಿಕೆಯಾಗಿದ್ದು, ಸಕ್ರಿಯಪ್ರಕರಣಗಳ ಸಂಖ್ಯೆ 10927 ತಲುಪಿದೆ. ಇದರಲ್ಲಿ 1500ಕ್ಕೂಹೆಚ್ಚು ಜನರು ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು,ಉಳಿದವರು ಹೋಂ ಕ್ವಾರಂಟೈನ್‌ ನಲ್ಲಿದ್ದಾರೆ. 95 ಜನ ಐಸಿಯುನಲ್ಲಿಚಿಕಿತ್ಸೆ ಪಡೆಯುತ್ತಿದ್ದಾರೆ. ಸಾವಿನ ಸಂಖ್ಯೆ 631ಕ್ಕೆ ಏರಿಕೆಯಾಗಿದೆ.

ಹೊಸದಾಗಿ ಆಲೂರು ತಾಲ್ಲೂಕು 19, ಅರಕಲಗೂಡು 107, ಅರಸೀಕೆರೆ 122, ಬೇಲೂರು 43, ಚನ್ನರಾಯಪಟ್ಟಣ 408, ಹಾಸನ 509,ಹೊಳೆನರಸೀಪುರ 186, ಸಕಲೇಶಪುರ 161, ಇತರೆ ಜಿಲ್ಲೆಯ 48 ಮಂದಿಗೆ
ಸೋಂಕು ತಗುಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬಕಲ್ಯಾಣಾಧಿಕಾರಿ ಕೆ.ಎಂ.ಸತೀಶ್ ಕುಮಾರ್ ತಿಳಿಸಿದ್ದಾರೆ.

ADVERTISEMENT

ಹಾಸಿಗೆಗಳ ಸಾಮರ್ಥ್ಯ ಹೆಚ್ಚಿಸಲು ಸಮಾಜ ಕಲ್ಯಾಣ ಇಲಾಖೆ ವಸತಿನಿಲಯಗಳ ಮಂಚ, ಹಾಸಿಗೆಯನ್ನು ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಹಾಸನ ವ್ಯಾಪ್ತಿಯ 100 ಹಾಗೂ ಎಲ್ಲ ತಾಲ್ಲೂಕುಗಳಿಂದ ಒಟ್ಟು 235
ಮಂಚಗಳನ್ನು ಆರೋಗ್ಯ ಇಲಾಖೆಗೆ ನೀಡಲಾಗಿದೆ.

ತಾಲ್ಲೂಕಿನ ಮೊಸಳೆ ಹೊಸಹಳ್ಳಿ, ದುದ್ದ, ಅರಸೀಕೆರೆ ಗಂಡಸಿಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಮಂಗಳವಾರದಿಂದಲೇಆಮ್ಲಜನಕ ಸಹಿತ ಬೆಡ್‌ ವ್ಯವಸ್ಥೆಯನ್ನು ಆರೋಗ್ಯ ಅಧಿಕಾರಿಗಳುಮಾಡಿಕೊಂಡಿದ್ದಾರೆ.
ಜಿಲ್ಲಾಧಿಕಾರಿ ಆರ್.ಗಿರೀಶ್‌ ಅವರ ನಿರ್ದೇಶನ ಹಿನ್ನೆಲೆಯಲ್ಲಿ ಸಮಾಜಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಂಜುನಾಥ್, ಹಾಸ್ಟೆಲ್‌ಗಳಲ್ಲಿನಮಂಚಗಳನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸುವಂತೆ ತಾಲ್ಲೂಕು
ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.