ADVERTISEMENT

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಅಕ್ಷರ ಪುರಸ್ಕಾರ: ಬಿ.ಕೆ.ಗಂಗಾಧರ್

250 ಮಂದಿಗೆ ತಲಾ ಏಳು ಪುಸ್ತಕ, ಸ್ಮರಣಿಕೆ

​ಪ್ರಜಾವಾಣಿ ವಾರ್ತೆ
Published 29 ಮೇ 2022, 4:40 IST
Last Updated 29 ಮೇ 2022, 4:40 IST
ಗಂಗಾಧರ್
ಗಂಗಾಧರ್   

ಹಾಸನ: ‘ಅಕ್ಷರ ಅಕಾಡೆಮಿ ವತಿಯಿಂದ ಜೂನ್ 4ರಂದು ನಾಲ್ಕನೇ ವರ್ಷದ ಅಕ್ಷರ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ’ ಎಂದು ಟೈಮ್ಸ್ ಸಮೂಹ ಸಂಸ್ಥೆ ಕಾರ್ಯದರ್ಶಿ ಬಿ.ಕೆ.ಗಂಗಾಧರ್ ತಿಳಿಸಿದರು.

‘ಆಸರೆ ಫೌಂಡೇಷನ್, ಬಟ್ಟೆ ಅಂಗಡಿ ಸಹ ಪ್ರಾಯೋಜಕತ್ವದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 90 ಕ್ಕೂ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ತಲಾ 7 ಪುಸ್ತಕ ಜೊತೆಗೆ ಸ್ಮರಣಿಕೆ ನೀಡಿ ಗೌರವಿಸಲಾಗುವುದು’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.‌

‘ವಿದ್ಯಾರ್ಥಿಗಳು ಜಿಲ್ಲೆಯಲ್ಲೇ ಓದಿರಬೇಕು. ಮುಖ್ಯಶಿಕ್ಷಕರಿಂದ ದೃಢೀಕರಿಸಿ ಅಂಕಪಟ್ಟಿಯನ್ನು ಅರ್ಜಿ ಜೊತೆ ಸಲ್ಲಿಸಬೇಕು. ಮೊದಲು ಬಂದ 250 ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು. ರಿಂಗ್ ರಸ್ತೆಯ ಅಕ್ಷರ ಅಕಾಡೆಮಿ, ಹರ್ಷ ಮಹಲ್ ರಸ್ತೆಯ ಬಟ್ಟೆ ಅಂಗಡಿ, ಶಂಕರಮಠ ರಸ್ತೆಯ ಅಕ್ಷರ ಬುಕ್ ಹೌಸ್‍ನಲ್ಲಿ ಅರ್ಜಿ ದೊರೆಯಲಿದ್ದು, ಜೂನ್ 3 ರೊಳಗೆ ನಿಗದಿತ ಸ್ಥಳಗಳಲ್ಲಿ ಅರ್ಜಿ ಸಲ್ಲಿಸಬೇಕು’ ಎಂದರು.

ADVERTISEMENT

‘ಇನ್ನೂ ಫಲಿತಾಂಶ ಪ್ರಕಟವಾಗದ ಸಿಬಿಎಸ್‍ಸಿ ಮತ್ತು ಐಸಿಎಸ್‍ಸಿ ಪಠ್ಯದ 25 ವಿದ್ಯಾರ್ಥಿಗಳಿಗೆ ಪುರಸ್ಕಾರ ಮೀಸಲಿಡಲಾಗಿದೆ. ಪ್ರಶಸ್ತಿ ಸ್ವೀಕರಿಸಲು ವಿದ್ಯಾರ್ಥಿಗಳೇ ಬರಬೇಕು. ಅಕ್ಷರ ಅಕಾಡೆಮಿಯಲ್ಲಿ ಕೆಎಎಸ್, ಐಎಎಸ್ ಸೇರಿದಂತೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್ ನೀಡಲಾಗುತ್ತಿದ್ದು, ಅರ್ಹ ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು’ ಎಂದರು.

ಗೋಷ್ಠಿಯಲ್ಲಿ ಶ್ರೀನಾಥ್, ಕೀರ್ತಿ, ಭಾಸ್ಕರ್, ಕಾರ್ತಿಕ್, ದಿನೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.